ಮಹಿಳೆಯರಲ್ಲಿ ಅಂಡಕೋಶ ವೈಫಲ್ಯ

ಸಾಮಾನ್ಯವಾಗಿ ಮಹಿಳೆಯೊಬ್ಬಳಿಗೆ ೪೦-೪೫ರ ಆಸುಪಾಸಿನಲ್ಲಿ ಮುಟ್ಟು ನಿಲ್ಲುತ್ತದೆ.ಈ ಹಂತದಲ್ಲಿ‘ಮೆನೊಪಾಸ್’ಎಂದುಕರೆಯಲಾಗುತ್ತದೆ. ಆ ವಯಸ್ಸಿನ ತನಕ ಮಹಿಳೆಯ ಸಂತಾನೋತ್ಪತ್ತಿ ಪ್ರಕ್ರಿಯೆಯೆಲ್ಲ ಮುಗಿದು ಹೋಗಿರುವುದರಿಂದ ಆ ಹಂತಒಂದು ಸಹಜ ಪ್ರಕ್ರಿಯೆ ಎನಿಸುತ್ತದೆ. ಕೆಲವು ಮಹಿಳೆಯರಿಗೆ ನೈಸರ್ಗಿಕರೀತಿಯಲ್ಲಿಉಂಟಾಗುವ ಮುಟ್ಟಂತ್ಯಕ್ಕಿಂತ೧೦ ವರ್ಷ ಮುಂಚೆಯೇ ಮುಟ್ಟು ನಿಲ್ಲುವ ಲಕ್ಷಣಗಳು ಗೋಚರಿಸಿ ಅವಳನ್ನು ಆತಂಕಕ್ಕೆದೂಡುತ್ತವೆ. ಇದನ್ನು POF ಎಂದು ಕರೆಯುತ್ತೇವೆ.

ಏಕೆ ಹೀಗಾಗುತ್ತದೆ?
ಹುಡುಗಿಯೊಬ್ಬಳು ಅದೆಷ್ಟೋ ಲಕ್ಷಾಂತರ ಅಂಡಾಣುಗಳನ್ನು ಹೊತ್ತುಕೊಂಡೇ ಹುಟ್ಟುತ್ತಾಳೆ. ಋತುಚಕ್ರಆರಂಭದ ಬಳಿಕ ಅವಳ ಅಂಡಕೋಶದಲ್ಲಿನ ಅಂಡಾಣುಗಳ ಸಂಖ್ಯೆಕಡಿಮೆಯಾಗುತ್ತ ಸಾಗುತ್ತದೆ. ಉತ್ತಮಆರೋಗ್ಯಸ್ಥಿತಿ , ಹಿತಕರಜೀವನಶೈಲಿ ಹೊಂದಿದ ಮಹಿಳೆ 30-35ನೇ ವಯಸ್ಸಿನವರೆಗೂ ಯಾವುದೇತೊಂದರೆಇಲ್ಲದೆತನ್ನದೇಆದ ಅಂಡಾಣುಗಳ ಸಹಾಯದಿಂದ ಗರ್ಭಧರಿಸಿ, ಆರೋಗ್ಯಕರ ಮಗುವಿನ ತಾಯಿಯಾಗಬಹುದು. ಆದರೆಆಧುನಿಕಜೀವನ ಶೈಲಿಯಲ್ಲಿನ ಏರುಪೇರುಗಳು, ಅನೇಕ ರೋಗಗಳು, ಅವುಗಳಿಗೆ ಕೊಡುವ ಚಿಕಿತ್ಸೆಗಳು ಆಕೆಯಅಂಡಕೋಶದಲ್ಲಿನ ಅಂಡಾಣುಗಳ ಸಂಖ್ಯೆಯನ್ನು ಬರಿದು ಮಾಡಿ ಬಿಡುತ್ತವೆ. ಈ ಸ್ಥಿತಿಯೇ ‘ಅವಧಿಪೂರ್ಣಅಂಡಕೋಶವೈಫಲ್ಯ’ಅಥವಾ‘ಪ್ರಿಮೆಚ್ಯೂರ್‌ಒವೇರಿಯನ್‌ಫೆಲ್ಯೂರ್’ಸಮಸ್ಯೆಗೆಕಾರಣವಾಗುತ್ತದೆ. ಇದರ ನೇರಪರಿಣಾಮ ಬಂಜೆತನಕ್ಕೂಕಾರಣವಾಗಬಹದು.

ಏನೇನು ಲಕ್ಷಣಗಳು? 
ಅಂಡಾಣುಕೊರತೆಯಿಂದಮುಟ್ಟುಬರದೇಇರಬಹುದು.ಒಂದುವೇಳೆಬಂದರೂಯಾವಾಗಲಾದರೊಮ್ಮೆಬರಬಹುದು.ರಕ್ತಸ್ರಾವ೧-೨ದಿನಕ್ಕೆಸೀಮಿತಗೊಳ್ಳಬಹುದು.
ಎಷ್ಟೇಪ್ರಯತ್ನಿಸಿದರೂಗರ್ಭನಿಲ್ಲದಿರುವ ಸಮಸ್ಯೆಉಂಟಾಗಬಹುದು.
ದೇಹಬಿಸಿಯಾಗುವ‘ಹಾಟ್‌ಫ್ಲಾಷೆಸ್’ಸಮಸ್ಯೆ ಕಾಣಿಸಿಕೊಳ್ಳಬಹುದು.
ಮೂತ್ರವಿಸರ್ಜನೆಮಾಡುವಾಗಉರಿತದಅನುಭವ ಆಗಬಹುದು.
ಸಮಾಗಮಕಿರಿಕಿರಿ ಅನಿಸಬಹುದು.
ರಾತ್ರಿನಿದ್ರೆಬರದೇಇರುವಸಮಸ್ಯೆ ಕಾಣಿಸಿಕೊಳ್ಳಬಹುದು.
ಖಿನ್ನತೆಯ ಸಮಸ್ಯೆಕಾಡಬಹುದು.
ಔesಣಡಿeogeಟಿ ಹಾರ್ಮೋನುಗಳಮಟ್ಟತುಂಭಾ ಕುಸಿಯುತ್ತದೆ.
ಮೂಳೆಗಳಸಾಂದ್ರತೆಕಡಿಮೆಯಾಗಿ ಅವುಬಹುಬೇಗಫ್ರಾಕ್ಚರ್ ಆಗಬಹುದು.

ಪರೀಕ್ಷೆ :
ಪ್ರಿಮೆಚ್ಯೂರ್‌ಒವೇರಿಯನ್ ಫೇಲ್ಯೂರ್ ಸ್ಥಿತಿಗೆ ಏನು ಕಾರಣಎಂದು ತಿಳಿದುಕೊಳ್ಳಲು ಎಫ್.ಎಸ್.ಎಚ್. (ಹಾರ್ಮೊನ್) ಮತ್ತುಟ್ರಾನ್ಸ್ ವೈಜೈನಲ್ ಸ್ಕ್ಯಾನ್ ಮಾಡಲಾಗುತ್ತದೆ.
ಪ್ರಿಮೆಚ್ಯೂರ್‌ಒವೇರಿಯನ್ ಫೆಲ್ಯೂರ್ ಸ್ಥಿತಿಯನ್ನು ಸಂಪೂರ್ಣವಾಗಿಗುಣಪಡಿಸುವುದಾಗಲಿ ,ಈಗಿರುವ ಸ್ಥಿತಿಯನ್ನು ಬದಲಿಸುವುದಾಗಲಿ ಸಾಧ್ಯವಾಗುವುದಿಲ್ಲ. ಆದರೆ ಮುಂದೆ ಆಗಬಹುದಾದ ಹಲವಾರು ಅನಾಹುತಗಳನ್ನು ತಪ್ಪಿಸಬಹುದಾಗಿದೆ.
ಋತುಚಕ್ರ ನಿಯಮಿತಗೊಳಿಸಲು ಹಾರ್ಮೋನ್‌ಥೆರಪಿ ಕೊಡಲಾಗುತ್ತದೆ.ವೆಜೈನಲ್ ಶುಷ್ಕತೆ ನಿವಾರಿಸಲು ಕೆಲವೊಂದು ಮುಲಾಮುಗಳನ್ನು ಬಳಸಲು ಸಹೆ ನೀಡಲಾಗುತ್ತದೆ.

ಅಂಡಾಣುದಾನಿಯ ಸಹಾಯ
ಅಂಡಕೋಶ ವೈಫಲ್ಯವಾಗಿರುವ ಸ್ಥಿತಿಯಲ್ಲಿ ಮಹಿಳೆ ಗರ್ಭಧರಿಸುವಅಪೇಕ್ಷೆ ಹೊಂದಿದ್ದಲ್ಲಿತನ್ನಿಚ್ಚೆ ಈಡೇರಿಸಿಕೊಳ್ಳಲು ಆಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಅಂಡಾಣುದಾನಿಯ ಸಹಾಯ ಪಡೆದುಗರ್ಭಧರಿಸಬಹುದು.ಈ ನಿಟ್ಟಿನಲ್ಲಿ ವೈದ್ಯರು ಸಂಪೂರ್ಣ ಸಹಕಾರ ನೀಡುತ್ತಾರೆ.
ಮೊದಲೇಜಾಗೃತರಾಗಿ ಅವಧಿಗೆ ಮೊದಲೇ ಅಂಡಕೋಶ ವೈಫಲ್ಯವನ್ನುತಡೆಯಲುಆರಂಭದಿಂದಲೇಜೀವನಶೈಲಿಯ ಮೇಲೆ ಕಟ್ಟುನಿಟ್ಟಿನ ಹಿಡಿತ ಇಟ್ಟುಕೊಳ್ಳಬೇಕು.ಮಧ್ಯಪಾನ, ಧೂಮಪಾನದಂತಹ ಚಟಗಳಿಂದ ದೂರಇದ್ದುವ್ಯಾಯಾಮದಂತಹಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು.

ಡಾ. ಬಿ.ರಮೇಶ್
ಆಲ್ಟಿಯಸ್ ಲ್ಯಾಪ್ರೋಸ್ಕೊಪಿ ಸೆಂಟರ್
9900031842 / 080-23151873 

Leave a Comment