ಮಹಿಳೆಯರನ್ನು ಕಾಡುವಂತಹ ಥೈರಾಯಿಡ್ ಸಮಸ್ಯೆ

ಥೈರಾಯ್ಡ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ತುಂಭಾನೆ ಕಾಡುತ್ತಿದೆ. ಇದರ ಬಗ್ಗೆ ನಿರ್ಲಕ್ಷ್ಯ ತೋರಿಸಿದರೆ ಮುಂದೆ ಅನೇಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಮಗು ಹುಟ್ಟಿದಾಗಿನಿಂದ ಹಿಡಿದು ೭೦ ವಯಸ್ಸಿನವರೆಗೆ ಯಾರಿಗೆ ಬೇಕಾದರೂ ಇದು ಬರಬಹುದು. ಸಕಾಲಿಕವಾಗಿ ವೈದ್ಯರಿಂದ ಚಿಕಿತ್ಸೆ ಪಡೆಯುವುದರ ಮೂಲಕ ನೆಮ್ಮದಿಯ ಜೀವನ ಸಾಗಿಸಬಹುದು.

ಥೈರಾಯಿಡ್ ಎಂದರೇನು?
ಥೈರಾಯಿಡ್ ಎನ್ನುವುದು ಒಂದು ಗ್ರಂಥಿಯ ಹೆಸರು. ಅದು ಥೈರಾಯ್ಡ್ ಎಂಬ ಹಾರ್ಮೊನನ್ನು ಉತ್ಪಾದಿಸುತ್ತದೆ. ಕುತ್ತಿಗೆಯ ಮುಂಭಾಗದಲ್ಲಿ ಚಿಟ್ಟೆಯ ಆಕಾರದಲ್ಲಿರುವ ಈ ಗ್ರಂಥಿ, ದೇಹದ ಪ್ರತಿಯೊಂದು ಅಂಗವೂ ಸಮರ್ಪಕವಾಗಿ ಕೆಲಸ ಮಾಡಲು ನೆರವಾಗುತ್ತದೆ. ಅದು ಮೆದುಳಿನ ಕಾರ್ಯವೈಖರಿಯೇ ಆಗಿರಬಹುದು. ಪಚನಕ್ರಿಯೆಯೇ ಇರಬಹುದು. ಥೈರಾಯಿಡ್ ಸಮಸ್ಯೆ ಇರುವವರಿಗೆ ಎಲ್ಲವನ್ನೂ ಏರುಪೇರು ಮಾಡುತ್ತದೆ.

ಥೈರಾಯ್ಡ್ ಹಾರ್ಮೊನು ದೇಹದಲ್ಲಿ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆಯಾದರೆ, ಅದನ್ನು ಹೈಪೊ ಥೈರಾಯಿಡ್ ಎಂದು , ಅತಿಯಾದ ಪ್ರಮಾಣದ್ಲಲಿ ಉತ್ಪಾದನೆಯಾದರೆ ಅದನ್ನು ಹೈಪರ್ ಥೈರಾಯಿಡ್ ಎಂದು ಹೇಳುತ್ತಾರೆ. ಇವು ಎರಡು ಸಮಸ್ಯೆಗಳೆ.

ಈ ಸಮಸ್ಯೆ ಬಹುತೇಕವಾಗಿ ಮಹಿಳೆಯರನ್ನು ಕಾಡುತ್ತದೆ. ಇದು ಪುರುಷರಲ್ಲೂ ಉಂಟಾಗಬಹುದು. ಆದರೆ ಅವರಲ್ಲಿ ಈ ಪ್ರಮಾಣ ತುಂಭಾ ಕಡಿಮೆ. ಮಹಿಳೆಯರಲ್ಲಿ ಇದರ ಪ್ರಮಾಣ ಪುರುಷರಿಗಿಂತ ೮ ರಿಂದ ೧೦ ಪಟ್ಟು ಹೆಚ್ಚು ಎಂದು ಅಂದಾಜಿಸಲಾಗಿದೆ.

ಚಿಕ್ಕಮಕ್ಕಳಲ್ಲಿ ಕಾಡುವ ಸಮಸ್ಯೆ:
ಈ ಸಮಸ್ಯೆ ಬಾಲವಸ್ಥೆಯಲ್ಲಿಯೇ ಇದ್ದರೆ ಅವರ ಬೆಳವಣಿಗೆ ಸಮರ್ಪಕವಾಗಿ ಆಗುವುದಿಲ್ಲ. ಬುದ್ಧಿಶಕ್ತಿಯೂ ಅಷ್ಟೇನೂ ಚುರುಕಾಗಿರುವುದಿಲ್ಲ. ಎಲ್ಲದರಲ್ಲಿಯೂ ಅವರು ನಿಧಾನ ಪ್ರವೃತ್ತಿ ತೋರಿಸುತ್ತಾರೆ. ಬೆಳವಣಿಗೆ ಹೊಂದುತ್ತಿರುವ ಮಕ್ಕಳಲ್ಲಿ ಈ ಸಮಸ್ಯೆ ಇದೆಯೊ ಎಂದು ಕಂಡುಕೊಳ್ಳಬೇಕು. ಇದೆಯೆಂದಾದರೆ ಚಿಕಿತ್ಸೆ ಮಾಡಿಸಿಕೊಂಡು ಥೈರಾಯಿಡ್ ಸಮಸ್ಯೆಯಿಂದ ಪಾರಾಗಬಹುದು.
ಹದಿಹರೆಯದವರಲ್ಲಿ ಸಮಸ್ಯೆ:
ಈ ಸಮಸ್ಯೆ ಇರುವ ಹುಡುಗಿಯರಲ್ಲಿ ಖುತುಚಕ್ರ ಏರುಪೇರಾಗಿರುತ್ತದೆ. ಕೆಲವರಿಗೆ ಖುತುಚಕ್ರ ಬರುವುದೇ ಇಲ್ಲ. ಕೆಲವರಲ್ಲಿ ಖುತುಚಕ್ರ ಬಂದರೂ ಅತಿಯಾದ ಖುತುಸ್ರಾವ ಉಂಟಾಗುತ್ತದೆ. ಅವರಿಗೆ ವಯಸ್ಸಿಗೆ ತಕ್ಕಂತೆ ಬೆಳವಣಿಗೆ ಆಗುವುದಿಲ್ಲ. ಯಾವಾಗಲೂ ಸುಸ್ತು ಎಂದು ನಿದ್ರೆಗೆ ಶರಣಾಗುತ್ತಾರೆ. ಮೇಲ್ಕಂಡ ಲಕ್ಷಣಗಳೇನಾದರೂ ಇದೆ ಎಂದು ಕಂಡುಬಂದಲ್ಲಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು.

ವಿವಾಹಿತ ಮಹಿಳೆಯರಲ್ಲಿ ಕಾಡುವ ಸಮಸ್ಯೆ :
ವಿವಾಹಿತ ಮಹಿಳೆಯರಲ್ಲಿ ಸಂತಾನಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಹೈಪೊ ಥೈರಾಯಿಡ್ ಮುಖ್ಯ ಕಾರಣವಾಗಬಹುದು. ದೇಹದಲ್ಲಿ ಥೈರಾಯಿಡ್ ಪ್ರಮಾಣ ಕಡಿಮೆ ಇದ್ದರೆ ಪ್ರತಿ ತಿಂಗಳು ಅಂಡಾಣು ಉತ್ಪತ್ತಿ ಸರಿಯಾಗಿ ಆಗುವುದಿಲ್ಲ. ಖುತುಚಕ್ರವೂ ಸರಿಯಾಗಿ ಬರುವುದಿಲ್ಲ. ಒಟ್ಟಾರೆಯಾಗಿ ಗರ್ಭನಿಲ್ಲಲು ಗರ್ಭಕೋಶಕ್ಕೆ ಸೂಕ್ತ ವಾತಾವರಣವನ್ನೇ ಕಲ್ಪಿಸುವುದಿಲ್ಲ. ಒಂದು ವೇಳೆ ಗರ್ಭಧರಿಸಿದರೂ ಕೂಡ ೨-೩ ತಿಂಗಳಲ್ಲಿ ಪದೇ ಪದೇ ಗರ್ಭಪಾತವಾಗುತ್ತದೆ.

ಥೈರಾಯಿಡ್ ಲಕ್ಷಣಗಳು :
ಏಕಾಗ್ರತೆಯ ಕೊರತೆ, ತೂಕ ನಷ್ಟ, ಬೆವರು, ನಡುಕ, ಗಂಟಲು ಊತ, ಅನಿಯಮಿತ ಹೃದಯ ಬಡಿತ, ನರ ದೌರ್ಬಲ್ಯ, ಆಯಾಸ, ಬಳಲಿಕೆ, ಅಪರಿಮಿತ ಖುತುಸ್ರಾವ, ಸ್ಥೂಲಕಾಯದಂತಹ ಲಕ್ಷಣಗಳು ಗೋಚರಿಸುತ್ತದೆ.

ಥೈರಾಯಿಡ್‌ಗೆ ಕಾರಣಗಳು :
ಈ ಥೈರಾಯಿಡ್ ಸಮಸ್ಯೆಗೆ ಇಂತದ್ದೇ ನಿರ್ದಿಷ್ಟ ಕಾರಣ ಎಂದು ಹೇಳಲಾಗುವುದಿಲ್ಲ. ಹೈಪೊ ಥೈರಾಯಿಡ್ ಮತ್ತು ಹೈಪರ್ ಥೈರಾಯಿಡ್ ಬೇರೆ-ಬೇರೆ ಕಾರಣಗಳಿವೆ. ಅನುಂಶಿಕತೆ, ಬದಲಾದ ಜೀವನ ಶೈಲಿ, ಸ್ತ್ರೀ ಮಗುವಿಗೆ ಜನ್ಮ ನೀಡಿದ ನಂತರವೂ ಬರಬಹುದು. ಐಯೋಡಿನ್ ಕೊರತೆಯಿಂದ ಅಥವಾ ಅತಿ ಹೆಚ್ಚು ಐಯೋಡಿನ್ ಸೇವನೆಯಿಂದಲೂ ಈ ವ್ಯಾಧಿ ಬರಬಹುದು.
ಹೈಪರ್ ಥೈರಾಯಿಡ್‌ಗೆ ಚಿಕಿತ್ಸೆ:
ಥೈರಾಯಿಡ್ ಹಾರ್ಮೊನಿನ ಅತಿಯಾದ ಸ್ರಾವದಿಂದ ಈ ಸಮಸ್ಯೆ ಉಂಟಾಗುತ್ತದೆ. ಗಂಟಲಿನ ಮುಂಭಾಗದಲ್ಲಿ ಇದು ಗಂಟಿನ ರೂಪ ಪಡೆದುಕೊಳ್ಳುತ್ತದೆ. ಅದನ್ನು ಶಸ್ತ್ರಚಿಕಿತ್ಸೆ ಮುಖಾಂತರವೇ ನಿವಾರಿಸಬೇಕಾಗುತ್ತದೆ. ಕೆಲವರಲ್ಲಿ ಗಂಟು ಇಲ್ಲದಿದ್ದಾಗಲೂ ಹೈಪರ್ ಥೈರಾಯಿಡ್ ಸಮಸ್ಯೆ ಬರಬಹುದು. ಆಗ ಅಂಥವರಿಗೆ ಂಟಿಣi-ಖಿhಥಿಡಿoiಜ ಔಷಧಿಗಳನ್ನು ಬಳಸಿ ಚಿಕಿತ್ಸೆ ನೀಡಬಹುದು.
ಡಾ. ಬಿ.ರಮೇಶ್
ಆಲ್ಟಿಯಸ್ ಹಾಸ್ಪಿಟಲ್
9663311128 / 080-28606789/ 23151873

Leave a Comment