ಮಹಿಳಾ ಮಾವೋವಾದಿ ಪೊಲೀಸರಿಗೆ ಶರಣು

ಮಲ್ಕಾನ್‌ಗಿರಿ,(ಒಡಿಶಾ) ಆ ೧೭-ಮಹಿಳಾ ಮಾವೋವಾದಿ ಪೊಲೀಸರು ಮುಂದೆ ಶರಣಾಗಿದ್ದಾರೆ. ಈಕೆಯ ತಲೆಗೆ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಪ್ರಕಟಿಸಿತ್ತು.
ಸನ್ಯಾಸಿಗುಡ ನಿವಾಸಿಯಾಗಿರುವ ೧೯ ವರ್ಷದ ನಯನಾ ಖಿಲೊ ಮಲ್ಕಾನ್ ಗಿರಿ ಜಿಲ್ಲೆಯ ಎಸ್ಪಿ ಜಗ್ಮೋಹನ್ ಮೀನಾ ಹಾಗೂ ಬಿಎಸ್‌ಎಫ್ ಡಿಐಜಿ ವೀರೇಂದ್ರ ಸಿಂಗ್ ಅವರ ಮುಂದೆ ನಿನ್ನೆ ಸಂಜೆ ಶರಣಾಗಿದ್ದಾಳೆ.
ನಯನಾ ಸಿಪಿಐ (ಮಾವೋವಾದಿ) ಗೆ ೨೦೧೬ರಲ್ಲಿ ಸೇರ್ಪಡೆಯಾಗಿ ಮಾಲ್ಕನ್ ಗಿರಿ ವಿಭಾಗದ ಗುಮಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಜಗ್ಮೋಹನ್ ಮೀನಾ ತಿಳಿಸಿದ್ದಾರೆ.
ಕನಿಷ್ಠ ನಾಲ್ಕು ಪ್ರಕರಣಗಳಲ್ಲಿ ಶಾಮೀಲಾಗಿದ್ದ ಈಕೆ ಪೊಲೀಸರಿಗೆ ಬೇಕಾಗಿದ್ದಳು. ರಾಜ್ಯ ಸರ್ಕಾರದ ಪುನರ್ ವಸತಿ ನೀತಿಯಂತೆ ನಯನಾಗೆ ಆಸರೆ ಕಲ್ಪಿಸಲಾಗುವುದು ಎಂದು ಹೇಳಿದರು.
ಹಿಂಸಾಚಾರಕ್ಕೆ ಪ್ರೇರೇಪಿಸುತ್ತಿದ್ದ ಮಾವೋವಾದಿಗಳ ಆದೇಶ ಪಾಲಿಸಿ ಇದೀಗ ನಯಾನೆ ತನ್ನ ತಪ್ಪಿನ ಅರಿವಾಗಿ ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾಳೆಂದು ತಿಳಿಸಿದರು.
ಅಕೆ ಮನೆ ನಿರ್ಮಾಣ ಮಾಡಿಕೊಳ್ಳಲು ಆರ್ಥಿಕ ನೆರವು, ವಿದ್ಯಾಭ್ಯಾಸ ಮತ್ತು ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

Leave a Comment