ಮಹಿಳಾ ನಿರ್ಭಯ ತಂಡದಿಂದ ಬೀದಿನಾಟಕ ಪ್ರದರ್ಶನ

ದಾವಣಗೆರೆ ಆ.24; ಜಿಲ್ಲಾ ಪೊಲೀಸ್ ಮತ್ತು ಮಹಿಳಾ ನಿರ್ಭಯ ತಂಡ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ನಗರದ ಜಯದೇವ ವೃತ್ತದಲ್ಲಿ  ಬೀದಿ ನಾಟಕದ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಡಿವೈಎಸ್‍ಪಿ ಗಳಾದ ದೇವರಾಜ್ ಮತ್ತು ಪ್ರಕಾಶ್.ಪಿ.ಬಿ ಇವರು ಹಲಗೆ ಬಡಿಯುವುದರ ಮೂಲಕ ಬೀದಿ ನಾಟಕಕ್ಕೆ ಚಾಲನೆ ನಿಡಿದರು.ಮಹಿಳಾ ನಿರ್ಭಯ ಜಾಗೃತಿಯ 12 ಕಲಾವಿದರು ಬೀದಿ ನಾಟಕ ಮಹಿಳಾ ಜಾಗೃತಿ ಮತ್ತು ಹೆಲ್ಮೆಟ್ ಕಡ್ಡಾಯ, ನೀರಿನ ಸದ್ಭಳಕೆ, ಬಾಲಕಾರ್ಮಿಕ ನಿಷೇಧ, ಬಾಲ್ಯ ವಿವಾಹ ನಿಷೇಧ ಉತ್ತಮ ನಾಗರಿಕ ಸಂಹಿತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕ ಪ್ರದರ್ಶಿಸಲಾಯಿತು.ಕರ್ನಾಟಕದಲ್ಲಿ ಪ್ರಪ್ರಥಮವಾಗಿ ದಾವಣಗೆರೆಯಲ್ಲಿ ಪೊಲೀಸ್ ನಿರ್ಭಯ ತಂಡದಿಂದ ಬೀದಿ ನಾಟಕ ಪ್ರದರ್ಶಿಸಲಾಗುತ್ತಿದೆ. ನಾಟಕದಲ್ಲಿ ಮಹಿಳೆಯರಿಗಾಗಿ ಇರುವ ಕಾನೂನು ಮತ್ತು ಕಾಯ್ದೆಗಳ ಬಗ್ಗೆ ತಿಳಿಸಲಾಯಿತು. ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಪದ್ದತಿ ಪಿಡುಗಗಳ ಕುರಿತು ಹಾಗೂ ನೀರಿನ ಸದ್ಬಳಕೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ನಾಟಕ, ಸಂಗೀತ ಹಾಗೂ ಘೋಷಣೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.ಪ್ರದರ್ಶನದಲ್ಲಿ ಪೊಲೀಸ್ ಮಹಿಳಾ ನಿರ್ಭಯ ತಂಡದ ಶೋಭಾ, ಪುಷ್ಪಲತಾ, ಕಸ್ತೂರಿ, ಗೌರಮ್ಮ, ನೇತ್ರಾವತಿ, ಸಂಗೀತಾ, ಭವಾನಿ, ಮಾಲಾತಿ ಬಾಯಿ ಹಾಗೂ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಕೆ ಕೊಟ್ರೇಶ್ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.

Leave a Comment