ಮಹಿಳಾ ಟಿ-20 ವಿಶ್ವಕಪ್ : ಆಸೀಸ್ ಪ್ರಸಿದ್ಧ ಗಾಯಕರಿಂದ ಮನೋರಂಜನೆ

ದುಬೈ, ಜ 13 – ಫೆಬ್ರುವರಿ 21 ರಂದು ಸಿಡ್ನಿಯಲ್ಲಿ ಆರಂಭವಾಗುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೂ ಮುನ್ನ ನಡೆಯುವ ಸಮಾರಂಭದಲ್ಲಿ ನಾಲ್ವರು ಆಸ್ಟ್ರೇಲಿಯಾ ಗಾಯಕರು ವೇದಿಕೆಯಲ್ಲಿ ತಮ್ಮ ಗಾಯನದಿಂದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಬ್ಲೂ, ಮಿಚ್ ತಾಂಬ, ಡಿ,ಜೆ. ಡೆನಾ ಅಮಿ ಹಾಗೂ ಭಾರತೀಯ ಮೂಲದ ಡೆರೆನ್ ಹಾರ್ಟ್ ಅವರು ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ಟೂರ್ನಿಯ ಆಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲಿ ತಿಳಿಸಿದ್ದಾರೆ.

ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಆರಂಭಿಕ ರಾತ್ರಿಯನ್ನು ಆಚರಿಸಲು ಉತ್ತಮವಾದ ಹಾದಿ ಇದಾಗಿದೆ. 2020 ರಲ್ಲಿ ಆಸ್ಟ್ರೇಲಿಯಾ ಆಯೋಜಿಸುತ್ತಿರುವ ಎರಡು ಟಿ 20 ವಿಶ್ವಕಪ್ ಗಳಲ್ಲಿ ಮೊದಲನೆಯದು ಇದಾಗಿದ್ದು, ಇದೇ ವರ್ಷ ಅಕ್ಟೋಬರ್ ನಲ್ಲಿ ಪುರುಷರ ಟಿ-20 ವಿಶ್ವಕಪ್ ಟೂರ್ನಿಗೂ ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿದೆ.

ಆಸ್ಟ್ರೇಲಿಯಾದ ಕಲಾವಿದರ ವೈವಿಧ್ಯಮಯ ಮಿಶ್ರಣವನ್ನು ಪ್ರದರ್ಶಿಸುತ್ತದೆ ಮತ್ತು ಮಾರ್ಚ್ 8 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಫೈನಲ್‌ ಹಣಾಹಣಿಯಲ್ಲಿ ವೇಳೆ ಪಾಪ್ ಸೂಪರ್‌ಸ್ಟಾರ್ ಕೇಟಿ ಪೆರ್ರಿ ಪ್ರದರ್ಶನ ನೀಡಲಿದ್ದಾರೆ ಎಂದು ಹಿಂದಿನ ಪ್ರಕಟಣೆಯಲ್ಲಿಯೇ ತಿಳಿಸಲಾಗಿತ್ತು.

ಐಸಿಸಿ ಟಿ-20 ವಿಶ್ವಕಪ್ ನ ಮೊದಲನೇ ಹಣಾಹಣಿಯು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

Leave a Comment