“ಮಹಾ” ವಿವಾದ: ಸೆ. 22ರಂದು ಗೋವಾ ಮುತ್ತಿಗೆ

ಹುಬ್ಬಳ್ಳಿ, ಸೆ 13- ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಇದೇ ದಿ. 22 ರಂದು ಗೋವಾ ರಾಜ್ಯಕ್ಕೆ ಮುತ್ತಿಗೆ ಹಾಕಲಾಗುವದೆಂದು ಕನ್ನಡ ಚಳವಳಿಯ ಮುಖಂಡ ವಾಟಾಳ ನಾಗರಾಜ ಇಂದಿಲ್ಲಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಹದಾಯಿ ಯೋಜನೆ ಜಾರಿಗೆ ವಿ

ಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಆಪಾದಿಸಿದರು.
ರಾಜ್ಯದ ಸಂಸದರು, ಪ್ರಧಾನಿಗಳ ಮನವೊಲಿಸಲು ಪ್ರಯತ್ನವನ್ನೇ ಮಾಡುತ್ತಿಲ್ಲ. ಕೇವಲ ನಿಯೋಗದ ಹೆಸರಿನಲ್ಲಿ ಪಕ್ಷಗಳು ರಾಜಕೀಯ ನಾಟಕ ನಡೆಸಿವೆ ಎಂದು ಆಪಾದಿಸಿದರು.
ನ್ಯಾಯಾಧೀಕರಣದಲ್ಲಿ ಕೂಡಲೇ ತೀರ್ಪು ಹೊರಬರುವಂತೆ ನೋಡಿಕೊಳ್ಳುವುದು ಸೇರಿದಂತೆ ಈ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ, ರಾಜ್ಯ ಸರಕಾರಗಳು ಸಂಪೂರ್ಣ ವಿಫಲವಾಗಿರುವ ಹಿನ್ನೆಲೆಯಲ್ಲಿ ಇದೇ ದಿ. 22 ರಂದು ನೂರಾರು ರೈತರೊಡನೆ ಗೋವಾಕ್ಕೆ ತೆರಳಿ ಮುತ್ತಿಗೆ ಹಾಕಲಾಗುವುದು ಎಂದರು.
ಮಹದಾಯಿ ಪ್ರಕರಣ ಬೇಗನೆ ಇತ್ಯರ್ಥವಾಗದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ಉತ್ತರ ಕರ್ನಾಟಕದಲ್ಲಿ ಮಹದಾಯಿ ಹೋರಾಟಗಾರರೇ ಚುನಾವಣೆಗೆ ನಿಲ್ಲುವರೆಂದು ಅವರು ಹೇಳಿದರು.

Leave a Comment