ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ: ಖಾನಾಪುರದಲ್ಲಿ ರೈಲುಗಳ ನಿಲುಗಡೆ

ಬೆಳಗಾವಿ, ಫೆ.12- ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಫೆ.15ರಿಂದ ನಡೆಯಲಿರುವ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಯುಕ್ತ ಈ ಮಾರ್ಗದಿಂದ ಹಾದು ಹೋಗುವ ತಡೆ ರಹಿತ ರೈಲುಗಳ ನಿಲುಗಡೆ ಮಾಡಲಾಗುತ್ತಿದ್ದು, ಭಕ್ತರು ಇದರ ಸದುಪಯೋಗ ಪಡೆಯಬೇಕೆಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮನವಿ ಮಾಡಿದ್ದಾರೆ.

ಫೆಬ್ರವರಿ 15ರಿಂದ ಮಾರ್ಚ್ 5ರವರೆಗೆ ಮಹಾಲಕ್ಷ್ಮೀಯ ಜಾತ್ರಾ ಮಹೋತ್ಸವ ನೆರವೇರಲಿದ್ದು, ಲಕ್ಷಾಂತರ ಜನ ಭಕ್ತರು ದೇವಿ ದರ್ಶನಕ್ಕೆ ಆಗಮಿಸುತ್ತಾರೆ. ಆದ್ದರಿಂದ ಈ ಮಾರ್ಗದಿಂದ ಹಾದು ಹೋಗುವ ತಡೆ ರಹಿತ ರೈಲುಗಳನ್ನು ನಿಲುಗಡೆ ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಸಚಿವರು ರೈಲು ನಿಲುಗಡೆಗೆ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರು-ಅಜ್ಮಿರ್ ಗರಿಬ್ ನವಾಜ್ ಎಕ್ಸಪ್ರೆಸ್ (16532), ಅಜ್ಮಿರ್-ಬೆಂಗಳೂರು ಗರಿಬ್ ನವಾಜ್ (16531), ಬೆಂಗಳೂರು-ಭಗತ್ ಕಿ ಕೋಠಿ ಗರಿಬ್ ನವಾಜ್ (16534), ಭಗತ್ ಕಿ ಕೋಠಿ -ಬೆಂಗಳೂರು ಗರಿಬ್ ನವಾಜ್ (16533), ಪುಣೆ-ಎರ್ನಾಕುಲಂ ಎಕ್ಸಪ್ರೆಸ್ (11097), ಎರ್ನಾಕುಲಂ-ಪುಣೆ ಎಕ್ಸಪ್ರೆಸ್ (11098), ಮುನುಗುರು-ಛತ್ರಪತಿ ಸಾಹು ಮಹಾರಾಜ್ ಟರ್ಮಿನಲ್ ಕೊಲ್ಹಾಪುರ ಎಕ್ಸಪ್ರೆಸ್  (11303), ಹಾಗೂ ಛತ್ರಪತಿ ಸಾಹು ಮಹಾರಾಜ್ ಟರ್ಮಿನಲ್ ಕೊಲ್ಹಾಪುರ ಎಕ್ಸ ಪ್ರೆಸ್ (11304) ರೈಲುಗಳು ಖಾನಾಪುರ ನಿಲ್ದಾಣದಲ್ಲಿ ನಿಲುಗಡೆಯಾಗಲಿವೆ ಎಂದು ಹೆಗಡೆ ತಿಳಿಸಿದ್ದಾರೆ.

Leave a Comment