ಮಹಾರಾಷ್ಟ್ರ: ಸಿಡಿಲು ಬಡಿದು ತಾಯಿ, ಮಗ ಸಾವು

ನಾಂದೇಡ್, ಜೂನ್ 29 – ಸಿಡಿಲು ಬಡಿದು ತಾಯಿ, ಮಗ ಮೃತಪಟ್ಟಿರುವ ದಾರುಣ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಹತ್ನಿ ಗ್ರಾಮದ ಉಮ್ರಿ ತೆಹಸಿಲ್ ನಲ್ಲಿ ಸಂಭವಿಸಿದೆ

ಸುಶೀಲಾ ಗೋವಿಂದ್ ಸೂರ್ ನರ್ (27) ಇಬ್ಬರು ಮಕ್ಕಳಾದ ರಾಜೇಶ್(4) ಮತ್ತು ಮುಕ್ತಾಬಾಯಿ (6)ಶುಕ್ರವಾರ ಹೊಲದ ಕೆಲಸಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಳೆ ಬರುತ್ತಿದ್ದ ಕಾರಣ ಸುಶೀಲಾ ಮಕ್ಕಳೊಡನೆ ಮರದ ಕೆಳಗೆ ಆಸರೆ ಪಡೆದಿದ್ದರು.  ಈ ವೇಳೆ ಸಿಡಿಲು ಬಡಿದು ತಾಯಿ, ಮಗ ಮೃತಪಟ್ಟಿದ್ದರೆ, ಮಗಳು ಮುಕ್ತಾಬಾಯಿ ಗಾಯಗೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಮುಕ್ತಾಬಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 

Leave a Comment