ಮಹಾರಾಜ ಪೃಥ್ವಿರಾಜ್ ಚೌಹಾಣ್ ಆಗಿ ಅಕ್ಷಯ್

ಬಾಲಿವುಡ್‌ನ ಸೂಪರ್ ಸ್ಟಾರ್, ವಿಶ್ವವೇ ಗಮನ ಸೆಳೆದ ನಟ ಅಕ್ಷಯ್ ಕುಮಾರ್ ಇದೀಗ ಶೂರ ಮಹಾರಾಜ ಪೃಥ್ವಿರಾಜ್ ಚೌಹಾಣ್ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಅಕ್ಷಯ್ ಕುಮಾರ್ ಅವರು ೫೨ನೇ ಹುಟ್ಟುಹಬ್ಬದ ಪ್ರಯುಕ್ತ ಯಶ್‌ರಾಜ್ ಫಿಲ್ಮ್ಸ್ ಐತಿಹಾಸಿಕ ಪಾತ್ರಧಾರಿ ಪೃಥ್ವಿರಾಜ್ ಚೌಹಾಣ್‌ಗೆ ಆಯ್ಕೆ ಮಾಡಿ ಅಚ್ಚರಿಯ ಹುಟ್ಟುಹಬ್ಬದ ಉಡುಗೊರೆ ನೀಡಿದೆ. ಯಶ್ ರಾಜ್ ಫಿಲ್ಮ್ಸ್ ಬಾಲಿವುಡ್‌ನಲ್ಲಿ ಹಿಂದೆಂದೂ ನಿರ್ಮಾಣವಾಗದ ಐತಿಹಾಸಿಕ ಚಲನಚಿತ್ರ ಪೃಥ್ವಿರಾಜ್ ನಿರ್ಮಿಸುತ್ತಿದ್ದು, ಈ ಚಲನಚಿತ್ರ ದಿಟ್ಟ ಹಾಗೂ ಪ್ರಬಲ ರಾಜ ಪೃಥ್ವಿರಾಜ್ ಚೌಹಾಣ್ ಜೀವನ ಮತ್ತು ನಾಯಕತ್ವವನ್ನು ಆಧರಿಸಿದ್ದು ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಈ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ.

ಇತಿಹಾಸಜ್ಞರು ಮತ್ತು ಜಾನಪದರು ಆತನನ್ನು ಅತ್ಯಂತ ಶೂರನಾದ, ದಯೆಯಿಲ್ಲದ ಮೊಹಮ್ಮದ್ ಘೊರ್ ಮತ್ತು ಆತನ ನಿರ್ದಯಿ ಆಕ್ರಮಣಕಾರಿಗಳ ಎದುರು ಹೋರಾಟ ನಡೆಸಿದನು ಎಂದು ದಾಖಲಿಸಿದ್ದಾರೆ. ಘೊರ್‌ನ ಮೊಹಮ್ಮದ್ ವಿರುದ್ಧ ಪೃಥ್ವಿರಾಜ ತೋರಿದ ಧೈರ್ಯ, ಶೌರ್ಯ ಆತನನ್ನು ಅದ್ಭುತ ಆಡಳಿತಗಾರ ಮತ್ತು ಸ್ವತಂತ್ರ ಭಾರತಕ್ಕಾಗಿ ಹೋರಾಟಗಾರನೆನಿಸಿತು. ಯಶ್ ರಾಜ್ ಫಿಲ್ಮ್ಸ್ ನಿರ್ಮಿಸುತ್ತಿರುವ ಮೊದಲ ಐತಿಹಾಸಿಕ ಚಿತ್ರ ಪೃಥ್ವಿರಾಜ್ ಆಗಿದ್ದು, ಬಹಳ ದೊಡ್ಡ ಮಟ್ಟದಲ್ಲಿ ತಾರೆಯರ ಆಯ್ಕೆ ಮಾಡಿ, ಚಿತ್ರ ನಿರ್ಮಿಸಲಿದೆ.

ಈ ಕುರಿತು ಅಕ್ಷಯ್, ಭಾರತದ ಅತ್ಯಂತ ಧೈರ್ಯಶಾಲಿ ರಾಜ ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿ ನಟಿಸುತ್ತಿರುವುದು ನನಗೆ ನಿಜಕ್ಕೂ ಗೌರವವಾಗಿದೆ. ರಾಷ್ಟ್ರವಾಗಿ ನಾವು ಸದಾ ನಮ್ಮ ನಾಯಕರನ್ನು ಕೊಂಡಾಡಬೇಕು ಮತ್ತು ಭಾರತೀಯರು ಜೀವಿಸಿದ ಮೌಲ್ಯಗಳನ್ನು ಪ್ರತಿಪಾದಿಸಲು ಅವರೇನು ಮಾಡಿದರು ಅದನ್ನು ಅಮರವಾಗಿಸಬೇಕು. ಪೃಥ್ವಿರಾಜ್ ಈ ಪರಾಕ್ರಮ ಮತ್ತು ಶೌರ್ಯವನ್ನು ಬೆಳಕಿಗೆ ತರುವ ನಮ್ಮ ಪ್ರಯತ್ನವಾಗಿದೆ. ಪೃಥ್ವಿರಾಜ್ ದಯೆಯೇ ಇಲ್ಲದ ಜನರ ಎದುರು ನಿಂತು ಆತ ತೋರಿದ ಶೌರ್ಯ ಆತನನ್ನು ನಿಜವಾದ ಭಾರತದ ಹೀರೋ ಆಗಿಸಿದೆ, ತಲೆಮಾರುಗಳಿಗೆ ಸ್ಫೂರ್ತಿಯಾಗಿಸಿದೆ. ಆದ್ದರಿಂದ ಈ ಪ್ರಕಟಣೆ ನನ್ನ ಜನ್ಮ ದಿನದಂದು ಬಂದಿದ್ದು ಇದು ನನಗೆ ನಿಜಕ್ಕೂ ವಿಶೇಷವಾಗಿದೆ ಎಂದರು.

ಪೃಥ್ವಿರಾಜ್ ಅನ್ನು ಅತ್ಯಂತ ದೊಡ್ಡ ಟಿವಿ ಧಾರಾವಾಹಿ, ಭಾರತದ ಅತ್ಯಂತ ಪ್ರಭಾವಿ ರಾಜಕೀಯ ಕಾರ್ಯತಂತ್ರಗಾರ ಚಾಣಕ್ಯ ನಿರ್ದೇಶಿಸಿದ ಡಾ.ಚಂದ್ರಪ್ರಕಾಶ್ ದ್ವಿವೇದಿ ಮತ್ತು ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಪಿಂಜಾರ್ ನಿರ್ದೇಶಿಸಲಿದ್ದಾರೆ. ಪೃಥ್ವಿರಾಜ್ ವಿಶ್ವದಾದ್ಯಂತ ೨೦೨೦ರ ದೀಪಾವಳಿಯಂದು ಬಿಡುಗಡೆಯಾಗಲಿದೆ.

Leave a Comment