ಮಹಾಮಳೆಗೆ ಹುಣಸೂರು ಝರ್ಝರಿತ: ನೂರಾರು ಮನೆ ಧರಾಶಾಹಿ – ಕೋಟ್ಯಾಂತರ ರೂ. ನಷ್ಟ

ಹುಣಸೂರು, ಆ.೧೧- ನಗರದ ಜನ ಕನಸಿನಲ್ಲೂ ಊಹಿಸದ ಭಯಂಕರದುರ್ಘಟನೆಯನ್ನು ಮಹಾಮಳೆ ತಂದೊಡಿದ್ದು ನಗರದ ಕೆಲ ಬಡಾವಣೆಗಳ ಜನ ಮನೆ ಮಠ ಕಳೆದುಕೊಂಡು ಮರ್ಮಾಘಾತಕೊಳ್ಳಗಾಗಿದ್ದಾರೆ.
ಹುಣಸೂರು ನಗರಎಲ್ಲಾ ವಿಚಾರದಲ್ಲೂ ಸೇಫ್‌ಎಂದು ಭಾವಿಸಿ ರಾಜ್ಯದ ಪರ ಜಿಲ್ಲೆಗಳ ಅತಿವೃಷ್ಠಿ, ಅನಾಹುತಗಳಿಗೆ ಮರುಗಿ ಸಕಲ ರೀತಿಯಲ್ಲೂತನು, ಮನ, ಧನ ಸಹಾಯ ಮಾಡಿ ಸ್ಪಂದಿಸುತ್ತಿದ ನಗರದಜನ, ಇಂದುತಾವೇ ನಿರಾಶ್ರಿತರಾಗಿ ನಿಲ್ಲುವ ಮೂಲಕ ತಮ್ಮ ಬದುಕು ಕಸಿದ ಮಹಾಮಳೆಗೆ ಹಿಡಿ ಶಾಪ ಹಾಕುವಂತಾಗಿದೆ.
ಕೋಡಗು ಭಾಗದಲ್ಲಿ ಸತತವಾಗಿಒಂದು ವಾರಕ್ಕೂ ಹೆಚ್ಚು ಕಾಲ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನಜೀವನದಿ ಲಕ್ಷ್ಮಣತಿರ್ಥ ಉಕ್ಕಿ ಹರಿಯುತ್ತಿದ್ದು ನದಿ ಅಂಚಿನ ಗ್ರಾಮಗಳಾದ ಹನಗೂಡು ಹೋಬಳಿಯ ಬಹುತೇಕ ಗ್ರಾಮಗಳ ಜನರಜೀವ, ಮನೆ, ಫಸಲು, ಜಾನುವಾರುಗಳನ್ನು ಬಲಿ ಪಡೆದಿರುವ ಹುಚ್ಚು ಹೊಳೆ ಇನ್ನೂತನ್ನದಾಹತಿರದಂತೆ ಹರಿಯುತ್ತಿರುವುದುತಾಲ್ಲೂಕುಜನತೆಯಲ್ಲಿಆತಂಕ ಸೃಷ್ಠಿಸಿದೆ.
ಬೆಚ್ಚಿ ಬೀಳಿಸಿದ ಹುಚ್ಚು ಮಳೆ
ರಾಜ್ಯದಯಾವ ಮೂಲೆಯಲ್ಲಿ ಜಲಪ್ರಳಯವಾದರೂ ಕೊಂಚ ಕೂಡಅದರ ಪರಿಣಾಮ ತಾಗಿಸಿಕೊಳ್ಳದಂತಿದ ಹುಣಸೂರು ನಗರಇಂದು ಈ ಹುಚ್ಚು ಮಳೆಗೆ ಬೆಚ್ಚಿ ಬಿದ್ದಿದ್ದು, ಹಿರಿಯರು ಹೇಳುವ ಪ್ರಕಾರ ೧೯೬೨ ರಲ್ಲಿಇಂಥಾ ಮಹಾಮಳೆ ಬಂದಿದ್ದು, ಆ ಸಂದರ್ಭದಲ್ಲಿ ಲಕ್ಷ್ಮಣತಿರ್ಥ ನದಿ ಉಕ್ಕಿ ಹರಿದಿದ್ದು ನದಿ ಪತ್ರಾದಿಂದ ಸುಮಾರು ೨೦೦ ಮೀಟರ್‌ಗೂ ಹೆಚ್ಚು ಪ್ರದೇಶ ಜಲವೃತವಾಗಿತಂತೆ, ಅಂಥದೆ ಮಳೆ ಈ ಬಾರಿ ಬಂದಿದ್ದು ಹೆಚ್ಚು ಅನಾಹುತಗೊಳಿಸಿ ಇತಿಹಾಸ ನಿರ್ಮಿಸಿದೆ.
ನೂರಾರು ಮನೆಗಳೂ ದರಶಾಹಿ
ಮಹಾಮಳೆಗೆ ಗ್ರಾಮಾಂತರ ಮಾತ್ರವಲ್ಲದೆ ಹುಣಸೂರು ನಗರ ಪ್ರದೇಶದದಾವಣಿ ಬೀದಿ, ಕಲ್ಕುಣಿಕೆ, ನಂದಿನಿ ಬಡಾವಣೆ, ಶಬೀರ್ ನಗರ ಸೇರಿದಂತೆ ಹಲವು ಕಡೆ ಮನೆಗಳು ಸಂಪೂರ್ಣ ಮುಳುಗಿದ್ದು ನೂರಕ್ಕೂ ಹೆಚ್ಚು ಮನೆಗಳು ದರಶಾಹಿಯಾಗಿ ಕುಟುಂಬಗಳು ಬೀದಿಪಾಲಗಿರುವಜೋತೆಕೋಟ್ಯಾಂತರ ನಷ್ಟ ಸಂಭವಿಸಿದೆ.
ಪರಿಹಾರಕೇಂದ್ರ ಸ್ಥಾಪನೆ
ನಗರ ಸೇರದಂತೆಅನಾಹುತ ವಾದಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರದ ವತಿಯಿಂದ ಪರಿಹಾರ ಕೇಂದ್ರಗಳ ಸ್ಥಾಪಿಸಿ ನಿರಾಶ್ರಿತರಿಗೆ ಊಟೋಪಚಾರ ಹಾಗೂ ವಸತಿಏರ್ಪಡಿಸಲಾಗಿದರೂ, ಕೆಲವರು ಸದುಪಯೋಗಪಡಿಸಿಕೊಂಡರೆ, ಜೀವಮಾನದಲ್ಲೇಇಂಥ ಪರಿಸ್ಥಿತಿಯನ್ನು ಕನಸಿನಲ್ಲೂ ಕಾಣದ ಎಷ್ಟೋ ಮಂದಿ ನೆಂಟರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.
ಸಂಚಾರಅಸ್ತವ್ಯಸ್ಥ
ಮಹಾಮಳೆಯ ರೌದ್ರನರ್ಥನಕ್ಕೆ ನಗರದಎರಡು ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು ಮುನ್ನೆಚ್ಚರಿಕೆಕ್ರಮವಾಗಿ ಸಂಚಾರ ನಿರ್ಬಂಧಿಸಿರುವುದರಿಂದ ಮೈಸೂರು ಮಡಿಕೆರಿರಸ್ತೆ ಸಂಚಾರಅಸ್ತವ್ಯಸ್ಥಗೊಂಡಿದ್ದು, ಪರ್ಯಾಯವಾಗಿ ಮೈಸೂರಿನಿಂದ ಕೆ.ಆರ್.ನಗರ ಮೂಲಕ ಅನುವು ಮಾಡಿಕೊಡಲಾಗಿದೆ.
ಸಮರೋಪಾದಿ ಪರಿಹಾರ
ಸರ್ಕಾರದ ವತಿಯಿಂದ ಸiರೋಪಾದಿಯಾಗಿ ಪರಿಹಾರಕಾರ್ಯ ಹಮ್ಮಿಕೊಂಡಿರುವಜೊತೆ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಕಾಂಗ್ರೆಸ್ ಮುಖಂಡ ಹಾಗೂ ಹಿರಿಯ ವಕೀಲ ಮೂಕನಹಳ್ಳಿ ರಾಮಕೃಷ್ಣಅನಾಹುತ ಪ್ರದೇಶಗಳಿಗೆ ತೆರಳಿ ತಮ್ಮಕೈಲಾದ ಸಹಾಯ ಮಾಡುತ್ತಿದ್ದಾರೆ.
ನಿರಾಶ್ರಿತರ ಒತ್ತಾಯ
ಮಳೆಯಿಂದ ನಿರಾಶ್ರಿತರಾದವರು ಕೂಡಲೆ ನಮಗೆ ಪರ್ಯಾಯ ವ್ಯವಸ್ಥೆಕಲ್ಪಿಸುವಜೋತೆ ನಷ್ಟಕ್ಕೆ ಸೂಕ್ತ ಪರಿಹಾರಕಲ್ಪಸಬೇಕುಎಂದು ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಶಾಸಕ ವಿಶ್ವನಾಥ್‌ರಲ್ಲಿ ಒತ್ತಾಯಿಸಿದ್ದಾರೆ.
ತಾಲ್ಲೂಕು ಆಡಳಿತಕ್ಕೆ ತಲೆನೋವು
ಮಳೆಯೇನೋ ಇಂದಲ್ಲಾ ನಾಳೆ ಕಡಿಮೇಯಾಗಬಹುದುಆದರೆಅದರಿಂದಆದಅನಾಹುತದದರ್ಶನ ಮುಂದಿರುವುದಂತೂ ಸತ್ಯ, ಗ್ರಾಮಾಂತರ ಶಾಲಾ ಕಾಲೇಜು ಸೇರಿದಂತೆ ನಗರ ಪ್ರದೇಶದ ಬಾಲಕರ ಪದವಿಪೂರ್ವಕಾಲೇಜು, ಕಛೇರಿ ಶಾಲೆ ಸೇರಿದಂತೆಇನ್ನೂ ಹಲಾವಾರು ಶಾಲಾ ಕಾಲೇಜು ಕಟ್ಟಡಗಳು ಈಗಾಗಲೇ ಶಿಥಿಲವಸ್ಥೆಯಲ್ಲಿದು , ಮಳೆಯಿಂದ ಇನಷ್ಟೂ ಹದಗೇಟ್ಟಿರುವುದರಿಂದ, ಮಕ್ಕಳ ಜೀವದಜೊತೆಚೆಲ್ಲಾಟವಾಡದೆತಾಲ್ಲೂಕು ಆಡಳಿತ ಕೂಡಲೇ ಅವುಗಳನ್ನು ಪರೀಶೀಲಿಸಿ ಮಕ್ಕಳಿಗೆ ಪರ್ಯಾಯ ವ್ಯವಸ್ಥೆಕಲ್ಪಿಸಬೇಕಿದೆ.

Leave a Comment