ಮಹಾನುಭಾವರು

ಪುನೀತ್ ರಾಜ್‌ಕುಮಾರ್ ಮತ್ತು ಶ್ರೀಮುರಳಿ ‘ನಾವ್ ಮಾಹನುಭಾವರು’ ಎನ್ನುವ ಟೈಟಲ್ ಸಾಂಗ್ ಹಾಡಿ ಮಹಾನುಭಾವರು ಚಿತ್ರ ತಂಡಕ್ಕೆ ಬೆನ್ನುತಟ್ಟಿದ್ದಾರೆ. ಪುನೀತ್ ಅವರಿಂದ ಹಾಡಿಸಲು ಮೂರು ತಿಂಗಳು ಕಾದಿದ್ದೂ ಸಾರ್ಥಕವಾಯಿತು ಎನ್ನುವ ಸಂತೋಷವನ್ನು ಹಂಚಿಕೊಂಡ ಚಿತ್ರತಂಡ,  ಆ ಹಾಡು ತಯಾರಾಗಿದ್ದನ್ನು ತೋರಿಸುವ ಮೂಲಕ ಮಹಾನುಭಾವರು  ಚಿತ್ರವನ್ನು ಪ್ರಚಾರಕ್ಕೆ ತಂದಿದೆ.

ನಾಯಕರಾಗಿರುವ ಗೋಕುಲ್‌ದಾಸ್ ಮತ್ತು ನಿರ್ದೇಶಕ ಸಂದೀಪ್ ನಗಲ್ಕರ್ ಸಿಂಧನೂರ್ ಅವರೊಂದಿಗಿನ ೯ ವರ್ಷಗಳ ಸ್ನೇಹದಿಂದಾಗಿ ಈ ಚಿತ್ರ ಮಾಡಲು ಸಾಧ್ಯವಾಗಿದೆ. ಅವರಿಂದಾಗಿ ನನ್ನ ಸಿನೆಮಾ ಮಾಡುವ ಕನಸು ನನಸಾಗಿದೆ. ಹೊಸತನದ ಸಿನೆಮಾ ಕೊಡಬೇಕೆಂದು ಮಾಡಿರುವ ಕಥೆ. ೨೫ ಲಕ್ಷಕ್ಕೆ ಮುಗಿಸಲು ಯೋಜಿಸಿದ್ದು ಈಗ ಸುಮಾರು ಒಂದೂವರೆ ಕೋಟಿ ಬಜೆಟ್‌ನ ದಾಟಿದೆ.

ಒಂದು ಹಾಡೂ ಬೇಡವೆಂದುಕೊಂಡಿದ್ದು ಈಗ ಐದು ಹಾಡುಗಳಾಗಿದೆ ಎಂದು ತಮ್ಮ ಸಿನೆಮಾ ಪಯಣವನ್ನು ತಿಳಿಸಿದ ಚಿತ್ರದ ನಿರ್ಮಾಪಕ ಬಾಲಚಂದರ್ ಮತ್ತೊಬ್ಬ ನಾಯಕರಾಗಿಯೂ ನಟಿಸಿದ್ದಾರೆ.  ನಿರ್ದೇಶಕ ಸಂದೀಪ್ ದೊಡ್ಡ ಸಾಧನೆ ಮಾಡಿದವರು ಮಾತ್ರವಲ್ಲ ಸಣ್ಣ ಆಸೆ-ಕನಸುಗಳನ್ನು ಈಡೇರಿಸಿಕೊಳ್ಳಲು ಸಾದ್ಯವಾಗಿಸಿಕೊಂಡವರು ಕೂಡ ಮಹಾನುಭಾವರು ಎನ್ನುವ ಅರ್ಥದಲ್ಲಿ ಈ ಹೆಸರಿಡಲಾಗಿದೆ. ಒಬ್ಬ ನಾಯಕ ನಾಳೆಗಳನ್ನು ಯೋಜಿಸಿಕೊಂಡು ಮತ್ತು ಇನ್ನೊಬ್ಬ ಭವಿಷ್ಯವನ್ನು ಚಿಂತಿಸದೆ ಇವತ್ತಿಗೆ ಬದುಕುವವರಾಗಿರುತ್ತಾರೆ.

ಇದರಲ್ಲಿ ಯಾವುದು ಸರಿ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್ ಆಗಿರುತ್ತದೆ ಎಂದು ಮಹಾನುಭಾವರು ಹೊಸ ಬಗೆಯ ಚಿತ್ರವಾಗಿದ್ದು ಜನರು ಪ್ರೋತ್ಸಾಹಿಸುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ.ಖ್ಯಾತ ಸಂಗೀತ ನಿರ್ದೆಶಕ ಹಂಸಲೇಖ ಅವರ ದೇಸಿ ಶಾಲೆಯಲ್ಲಿ ೮ ವರ್ಷಗಳಿಂದ ಕಲಿಕೆ ಮಾಡುತ್ತಿರುವ ಸತೀಶ್ ಮೌರ್ಯ ಮೊದಲ ಬಾರಿಗೆ ೫ ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆ. ಅಪ್ಪು ಮತ್ತು ಶ್ರೀಮುರುಳಿ ಹಾಡಿರುವುದು ತಮ್ಮ ಅದೃಷ್ಟ ಎಂದರು.

ವಿಶೇಷ ಪಾತ್ರದಲ್ಲಿ ಕಾಣಸಿಕೊಂಡಿರುವ ಚೇತನ್ ನಿನಾಸಂನಲ್ಲಿ ಕಲಿತು ರಂಗಭೂಮಿಯಲ್ಲಿ ತೊಡಗಿಸಿಕೊಂಡವರು. ಪ್ರಿಯಾಂಕಗೆ ಇದು ಮೊದಲ ಚಿತ್ರವಾಗಿದ್ದು, ಮತ್ತೊಬ್ಬ ನಾಯಕಿಯಾಗಿರುವ ಅನುಷಾ ರೈ ಇಂಜಿನಿಯರಿಂಗ್ ಸ್ಟೂಡೆಂಟ್. ಈಗ ‘ಅಣ್ಣಯ್ಯ ಧಾರಾವಾಹಿಯಲ್ಲಿ ನಟಿಸುತ್ತಿರುವುದರಿಂದ ಕಿರುತೆರೆಯಲ್ಲಿ ಪರಿಚಿತೆ. ಮಹಾನುಭಾವರು ಚಿತ್ರ ಅವಳಿಗೆ ಮೊದಲ ಚಿತ್ರವಾಗಿದ್ದು ಇದು  ಅದೃಷ್ಟದ ಚಿತ್ರವಂತೆ. ಕಾರಣ ಈ ಚಿತ್ರ ತೆರೆಗೆ ಬರುವ ಮೊದಲೇ ಶ್ರೀಚರಣ್ ಜೊತೆಗೆ ನಟಿಸಿರುವ ತೆಲುಗು ಚಿತ್ರ ಸರಾಯೂ

ಸೇರಿದಂತೆ  ಮೂರು ಚಿತ್ರಗಳ ಚಿತ್ರೀಕರಣ ಮುಗಿಸಿದ್ದಾಳೆ. ಕನ್ನಡದ ಗೋಸಿಗ್ಯಾಂಗ್ ಚಿತ್ರವೂ ತೆರೆಗೆ ಸಿದ್ಧವಾಗಿದೆ. ಮೊದಲಿನಿಂದಲೂ ನಟಿಸುವ ಆಸಕ್ತಿ ಇತ್ತು ಮಾಹಾನುಭಾವರು ಚಿತ್ರದಲ್ಲಿ ಅವಕಾಶ ಸಿಕ್ಕನಂತರ ಒಂದೊಂದೇ ಸಿನೆಮಾಗಳು ಸಿಗುತ್ತಾ ಹೋಯಿತು ಎನ್ನುವ ಅನುಷಾ ರೈ, ಕನ್ನಡದಲ್ಲಿ ನಾಯಕಿಯಾಗಿ ಗಟ್ಟಿಯಾಗಿ ನಿಲ್ಲುವ ಆಸೆಯಲ್ಲಿದ್ದಾರೆ.

Leave a Comment