ಮಹಾದಾಸೋಹ ಸೂತ್ರ ಜಗತ್ತಿಗೆ ದಾರಿದೀಪ: ಡಾ.ಬಿಡವೆ

 

ಕಲಬುರಗಿ:ವಿದ್ಯಾಭಾಂಡಾರಿ ಮಹಾದಾಸೋಹಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ರಚಿಸಿದ 21ಮಹಾದಾಸೋಹ ಸೂತ್ರಗಳು ಇಡೀ ಜಗತ್ತಿಗೆ ಮಾನವ ಸಂಕುಲಕ್ಕೆ ಮಾದರಿ ದಾರಿದೀಪವಾಗಿವೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನೀಲಕುಮಾರ ಬಿಡವೆ ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಪರಮ ಪೂಜ್ಯ ಡಾ.ಶರಣಬಸವಪ್ಪ ಅವರ 85ನೇ ಜನ್ಮದಿನಾಚರಣೆಯ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಆಯೋಜಿಸಿದ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ರಚಿಸಿದ 21ಮಹಾದಾಸೋಹ ಸೂತ್ರಗಳ ಗಾಯನ ಹಾಗೂ ವ್ಯಾಖ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಪ್ಪಾಜಿ ಅವರು ರಚಿಸಿದ ದಾಸೋಹ ಸೂತ್ರಗಳನ್ನು ಅಮೆರಿಕಾದ ಬಸವಸಂಸ್ಥೆಯಿಂದ ಅಧ್ಯಯನ ನಡೆಸುತ್ತಿದೆ. ಇದರಿಂದ ದಾಸೋಹ ಸೂತ್ರಗಳನ್ನು ಅರಿತರೆ ಮಾನವ ಸಂಕುಲ ನೇಮ್ಮದಿಯ ಬದುಕು ಸಾಗಿಸಬಹುದಾಗಿದೆ. ವಿಜ್ಞಾನ, ಗಣಿತ ಭೌತಶಾಸ್ತ್ರದಲ್ಲಿ ಹಲವು ಸೂತ್ರಗಳು ಕಲಿತಿದ್ದೇವೆ. ಆದರೆ ದಾಸೋಹ ಸೂತ್ರಗಳು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಬದುಕು ಸಾಗಿಸಬಹುದಾಗಿದೆ ಎಂದು ಹೇಳಿದರು.

ಕರ್ನಾಟಕ ಸಂಗೀತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಖ್ಯಾತ ಹಿಂದೂಸ್ತಾನಿ ಗಾಯಕ ಡಾ.ಹನುಮಣ್ಣ ನಾಯಕ ದೊರೆ ಅವರು ‘ಬೆಳಗನೆ ಬೆಳಗುವೆ’ ಮತ್ತು ಕೊಡುವದನ್ನೇ ಕಲಿಯಿರಿ ಎಂಬ ಎರಡು ಮಹಾದಾಸೋಹ ಸೂತ್ರಗಳು ಗಾಯನ ಮೂಲಕ ತಿಳಿಸಿದರು.

ಡಾ.ಶಿವರಾಜ ಶಾಸ್ತ್ರಿ ಹೇರೂರ ಅವರು “ಬೆಳಗನೆ ಬೆಳಗುವೆ” ಎಂಬ ಮಹಾದಾಸೋಹ ಸೂತ್ರದ ವ್ಯಾಖ್ಯಾನದಲ್ಲಿ ಡಾ.ಶರಣಬಸವಪ್ಪ ಅಪ್ಪಾಜಿಯವರ ಆತ್ಮ ಪ್ರಕಾಶನ ಮತ್ತು ದಿವ್ಯದೃಷ್ಟಿಯಿಂದ ಶರಣಬಸವರ ಬೆಳಗಿನ ಆರತಿ ಮಾಡುವ ಸಲುವಾಗಿ ಈ ಸೂತ್ರ ರಚಿಸಿದ್ದಾರೆ. ಈ ಸೂತ್ರಗಳು ಆಧುನಿಕ ಹಾಗೂ ವೈಜ್ಞಾನಿಕತೆಯಿಂದ ಕೂಡಿವೆ ಎಂದು ವಿವರಿಸಿದರು.

ಶರಣಬಸವ ವಿಶ್ವವಿದ್ಯಾಲಯದ ಮೌಲ್ಯಮಾಪನ ಸಚಿವ ಲಿಂಗರಾಜ ಶಾಸ್ತ್ರಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ ಶಿವನಂದನ್, ಡಾ.ಶಾಂತಲಾ ನಿಷ್ಟಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಮ್.ಎಸ್ ಪಾಟೀಲ, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ.ಎಲೆನೋರೆ ಗೀತಾಮಾಲಾ, ಡಾ.ನೀಲಾಂಬಿಕಾ ಶೇರಿಕಾರ ಇದ್ದರು..

 

 

Leave a Comment