ಮಹರ್ಷಿ ವಾಲ್ಮೀಕಿ ಒಂದೇ ಜಾತಿಗೆ ಸೀಮಿತರಲ್ಲ

ರಾಯಚೂರು.ಅ.29- ಮಹರ್ಷಿ ವಾಲ್ಮೀಕಿ ಅವರು ಒಂದೇ ಜಾತಿಗೆ ಸೀಮಿತರಲ್ಲ, ರಾಮಾಯಣ ಮಹಾಗ್ರಂಥ ರಚಿಸಿ ವಿಶ್ವಕ್ಕೆ ಮಹಾತ್ಮರಾಗಿದ್ದಾರೆಂದು ಹಿರಿಯ ಪತ್ರಕರ್ತ ಭೀಮರಾಯ ಹದ್ದಿನಾಳ ಹೇಳಿದರು.
ತಾಲೂಕಿನ ಮುರನಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏಕಲವ್ಯ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಶಿಕ್ಷಕರು ಮತ್ತು ರೈತರಿಗೆ ಸನ್ಮಾನ ಹಾಗೂ ಸಸಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀ ಮಹರ್ಷಿ ವಾಲ್ಮೀಕಿ ಅವರ ಜೀವನದ ಸಾಧಕ-ಬಾಧಕಗಳು ಸಂಕ್ಷಿಪ್ತವಾಗಿ ಸಾರಿ ವಾಲ್ಮೀಕಿ ಅವರು ತಮ್ಮ ಲೇಖನ ಮೂಲಕ ಇಡೀ ಪ್ರಪಂಚಕ್ಕೆ ಮಹಾತ್ಮರು.
ಅವರ ನಡೆಯಲ್ಲಿ ನಾವೆಲ್ಲರೂ ನಡೆಯಬೇಕು. ಸಮಾಜದಲ್ಲಿ ಅಣ್ಣ-ತಮ್ಮಂದಿರು ಹೇಗಿರಬೇಕು. ಹೇಗೆ ಜೀವನ ನಡೆಸಬೇಕು ಎಂಬುವುದರ ಬಗ್ಗೆ ರಾಮಾಯಣ ಗ್ರಂಥ ಮೂಲಕ ಇಡೀ ವಿಶ್ವಕ್ಕೆ ಪರಿಚಯಿಸಿದ್ದು, ನಮ್ಮ ರಾಜ್ಯ, ರಾಮರಾಜ್ಯವಾಗಬೇಕು ಎನ್ನುವ ನಿಲುವು ರಾಮಾಯಣ ಮೂಲಕ ವಾಲ್ಮೀಕಿ ತಿಳಿಸಿದರು. ಅದರಂತೆ ಬುದ್ಧ, ಬಸವಣ್ಣ, ಮಹಾವೀರ ಹಾಗೂ ಅಂಬೇಡ್ಕರ್ ಸೇರಿದಂತೆ ಅನೇಕ ಮಹಾನೀಯರ ಆಲೋಚನೆ ಉತ್ತಮ ಸಂದೇಶ ನೀಡಿವೆಂದರು.
ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ, ಅನೇಕರು ಪ್ರಾಣ ಕಳೆದುಕೊಂಡರೂ, ಸ್ವಾತಂತ್ರ್ಯ ನಂತರ ಭಾರತ ಸರ್ಕಾರ ಬೇಡರ ಕುಲಕಸಬುನ್ನು ನಿಷೇಧಿಸಿತ್ತು. ಇದರ ಪರಿಣಾಮದಿಂದ ಬಡತನಕ್ಕೆ ಬೇಡರು ತುತ್ತಾಗಿದ್ದರು. ಎಲ್ಲಾ ಸಮಾಜ ಜೊತೆಗೆ ನಿಸ್ವಾರ್ಥತೆ, ಗೌರವಯುತ ಜೀವನ ನಡೆಸುತ್ತಿದ್ದಾರೆ. ನಮ್ಮ ವಿರುದ್ಧ ನಾವೇ ಜಗಳ ಮಾಡದೇ, ಎಲ್ಲಾ ಜಾತಿ, ಸಮಾಜ ಜೊತೆಗೆ ಸಮಾನವಾಗಿರಬೇಕೆಂದು ತಿಳಿಸಿದರು.
ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಜಿ.ಎಸ್. ಹಿರೇಮಠ ಮಾತನಾಡಿ, ಸಮಾಜದಲ್ಲಿ ಸಾಧನೆ ಮಾಡಿದ ಮಹಾನ ವ್ಯಕ್ತಿಗಳ ತತ್ವಗಳು ಜೀವನದ ನರನಾಡಿಗಳಲ್ಲಿ ಅಳವಡಿಸಿಕೊಳ್ಳಿ ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಟಿ.ವಿ., ಫೋನ್ ಬಂದಿರುವುದರಿಂದ ಸಂಬಂಧಗಳು ಕಳೆದಿವೆಂದರು. ವಾಲ್ಮೀಕಿ ಸಮಾಜದ ಹಿರಿಯ ಮುಖಂಡ ವೈ.ಬಿ.ಪಾಟೀಲ್ ಮಾತನಾಡಿದರು. ಇದೇ ವೇಳೆ ಶಿಕ್ಷಕರು ಮತ್ತು ರೈತರಿಗೆ ಏಕಲವ್ಯ ಫೌಂಡೇಷನ್ ವತಿಯಿಂದ ಸನ್ಮಾನಿಸಲಾಯಿತು. ಗ್ರಾಮಸ್ಥರಿಗೆ ಸಸಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎನ್.ರಘುವೀರ ನಾಯಕ, ಮಲ್ಲಿಕಾರ್ಜುನ ನಾಯಕ, ರಾಜಶೇಖರ, ಪಾಸೋಡಿ, ಮೌನೇಶ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment