ಮಹರ್ಷಿ ಚಿತ್ರ : 101 ಸಸಿ ವಿತರಣೆ

ರಾಯಚೂರು.ಮೇ.10- ಸೂಪರ್ ಸ್ಟಾರ್ ಮಹೇಶ್ ಬಾಬು ಅವರ 25 ನೇ ಚಿತ್ರವಾದ `ಮಹರ್ಷಿ` ಚಿತ್ರವು ನಿನ್ನೆ ಪದ್ಮನಾಭ ಚಿತ್ರಮಂದಿರದಲ್ಲಿ ಬೆಳಿಗ್ಗೆಯಿಂದಲೇ ಬಿಡುಗಡೆಗೊಂಡು, ಪ್ರದರ್ಶನ ಕಂಡಿತು.
ನಟ ಮಹೇಶ್ ಬಾಬು ಅವರ ಅಭಿಮಾನಿಗಳು ಮಹರ್ಷಿ ಚಿತ್ರವು ಶತ ದಿನೋತ್ಸವ ಆಚರಿಸಲಿ ಎಂದು ಪ್ರಿನ್ಸ್ ಮಹೇಶ್ ಬಾಬು ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಚಿತ್ರ ಪೋಸ್ಟರ್‌ಗೆ ಹಾಲಿನ ಅಭಿಷೇಕ, 101 ತೆಂಗಿನಕಾಯಿ ಹೊಡೆದು ಸಾರ್ವಜನಿಕರಿಗೆ ಹಸಿರು ಉಳಿಯಲೆಂದು 101 ಸಸಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಹರೀಶ್ ಯಾದವ್, ಉರುಕುಂದಪ್ಪ, ಭೀಮಾಶಂಕರ್, ಪ್ರಿನ್ಸ್ ವೀರೇಶ್, ಮಲ್ಲೇಶ್, ವೀರು, ನಾಗರಾಜ್, ರವಿ, ಶ್ರೀಧರ್ ಹಾಗೂ ಇನ್ನಿತರ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Comment