ಮಹದೇಶ್ವರನ ಜಪ,ತಪ ಕಿರುತೆರೆಗೆ ಮಹೇಶ್ ಸುಖಧರೆ

ಕನ್ನಡ ಸಿನಿಮಾದಲ್ಲಿ ಮಹೇಶ್ ಸುಖಧರೆ ಹೆಸರು ಆಗಾಗ ಕೇಳಿಬರುತ್ತಿದೆ. ಅದಕ್ಕೆ ಕಾರಣ ಅವರು ನೀಡಿದ ಚಿತ್ರಗಳು. ಅಂಭರೀಷ ಚಿತ್ರದ ಬಳಿಕ ಒಂದಷ್ಟು ದಿನ ಸುಮ್ಮನಿದ್ದು ಅವರು ಈಗ ಕಿರುತೆರೆ ಪ್ರವೇಶಿಸಿದ್ಧಾರೆ. ಅದು ಮಾದೇಶ್ವರನ ಜಪ ಮಾಡುತ್ತಿದ್ದಾರೆ.

ಅರೆ ಕಿರುತೆರೆಯಲ್ಲಿ ಏನು ಮಾಡುತ್ತಾರೆ ಅಂತೀರಾ. ತಮ್ಮ ಸುಖಧರೆ ಸಿನಿಮಾ ಸಂಸ್ಥೆಯಡಿ ’ಉಘೇ ಉಘೇ ಮಾದೇಶ್ವರ’ ನನ್ನು ಜನರ ಮುಂದಿಡಲು ಮುಂದಾಗಿದ್ದಾರೆ. ಮಹದೇಶ್ವರನ ಪವಾಡ ಸೇರಿದಂತೆ ಹಲವು ವಿಷಯಗಳನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅದು ಅದ್ದೂರಿ ವೆಚ್ಚ ಮತ್ತು ಅದ್ಬುತ ತಂತ್ರಜ್ಷರ ಸಹಾಯದಿಂದ ಜನರ ಮನೆ ಬಾಗಿಲಿ ಬರುತ್ತಿದ್ದಾರೆ.
ಜಾನಪದ ಕಥನಕಾವ್ಯ ಎಂದರೆ ಮಲೆ ಮಾದೇಶ್ವರ ಮಹಾಕಾವ್ಯ. ಜಾನಪದರು ಏಳು ಹಗಲು, ಏಳು ರಾತ್ರಿ ನಿರಂತರ ಹಾಡುತ್ತಾರೆ. ಜೊತೆಗೆ ಕನ್ನಡದ ಅತಿ ಹೆಚ್ಚು ಕಥನ ಗೀತೆಗಳು, ಭಕ್ತಿ ಗೀತೆಗಳು ಮಾದೇಶ್ವರರ ಕುರಿತೇ ರಚಿತವಾಗಿದೆ. ಇದೀಗ ಉಘೇ ಉಘೇ ಮಾದೇಶ್ವರ’ನ ಮೂಲಕ ಪವಾಡವನ್ನು ಕಟ್ಟಿಕೊಡಲು ಮುಂದಾಗಿದ್ದಾರೆ.

ಮಾದೇಶ್ವರರನ್ನು ತಮ್ಮೊಡನಿರುವ ಶಿವನ ಅಂಶವೆಂದೇ ಭಕ್ತರು ಆರಾಧಿಸುತ್ತ ಬಂದಿzರೆ. ನಂಬಿದವರ ಮನೆಯಲ್ಲಿ ತುಂಬಿ ತುಳುಕುವ ಮಾದೇಶ್ವರರು, ದುಂಡು ಮಾದಪ್ಪ, ಮುದ್ದು ಮಾದಪ್ಪ, ಮಾಯ್ಕಾರ ಮಾದಪ್ಪ, ಧರೆಗೆ ದೊಡ್ಡವರು, ಎಪ್ಪತ್ತೇಳು ಬೆಟ್ಟದ ಒಡೆಯ ಇತ್ಯಾದಿ ಹೆಸರುಗಳಿಂದ ಜನಮಾನಸದಲ್ಲಿ ನೆಲೆಯೂರಿzರೆ.
ಶ್ರವಣನೆಂಬ ಕ್ರೂರಿ ದಾನವ ದೊರೆ ಶಿವನಿಂದ ಸಾವಿಲ್ಲದ ವರ ಪಡೆದು ಕೊಬ್ಬಿ ದೇವತೆಗಳನ್ನು ಬಂಧಿಸುತ್ತಾನೆ. ಕೈಲಾಸವನ್ನೂ ಬಿಡದೇ ಪಾರ್ವತಿಯನ್ನು ಕರೆದೊಯ್ಯುತ್ತಾನೆ. ಪಾರ್ವತಿಯ ಕಣ್ಣೀರು ವರಕೊಟ್ಟ ಶಿವನ ಆಕ್ರೋಶಕ್ಕೆ ಕಾರಣವಾಗುತ್ತದೆ. ಶಿವನ ಜಟೆಯಿಂದ ಚಿಮ್ಮಿದ ಲಿಂಗ ಮುಗಿಲ ತೊಟ್ಟಿಲಲ್ಲಿ ಮಗುವಾಗಿ ತೇಲುತ್ತಾರೆ.ಬಾಲ್ಯದಿಂದಲೇ ಪವಾಡಗಳು ಮತ್ತು ದೈವೀಕ ಶಕ್ತಿಗಳನ್ನು ಪ್ರದರ್ಶಿಸುವ ಮಾದೇಶ್ವರರು ಏಳು ವರ್ಷಕ್ಕೇ ಮನೆಬಿಟ್ಟು ಗುರುಗಳೊಂದಿಗೆ ಕಾನನ ಸೇರಿ ಹುಲಿ ಪಳಗಿಸುವುದೂ ಸೇರಿದಂತೆ ಅನೇಕ ವಿದ್ಯೆ ಕಲಿಯುತ್ತಾರೆ. ನಂತರ ಸನ್ಯಾಸ ದೀಕ್ಷೆ ಪಡೆಯುತ್ತಾರೆ. ಅಂತಿಮವಾಗಿ ಶ್ರವಣನ ಸಂಹಾರ ಮಾಡಿ ಮಾದೇಶ್ವರ ಬೆಟ್ಟದಲ್ಲಿ ನೆಲೆಸುವ ಕಥಾಹಂರದ ಹೊಂದಿದೆ.

ವಿನಯ್ ಗೌಡ, ಆರ್ಯನ್‌ರಾಜ, ಮಾ. ಅಮೋಘ, ಕೃತಿ, ಚಂದ್ರಶೇಖರ ಶಾಸ್ತ್ರಿ, ತನ್ಮಯಾ, ಶರತ್, ಶ್ರೀಸಂಧ್ಯಾ, ಪದ್ಮನಾಭ, ಅಮೃತಾ ನಾಯ್ಡು, ಭವಾನಿ ಮುಂತಾದವರಿzರೆ. ಇದೇ ೮ ರಿಂದ ಪ್ರತಿ ಶನಿವಾರ-ಭಾನುವಾರ ಸಂಜೆ ೬.೩೦ರಿಂದ ೭.೩೦ರವರೆಗೆ ಧಾರಾವಾಹಿ ಪ್ರಸಾರವಾಗಲಿದೆ.

ಇತ್ತೀಚೆಗೆ ಭಕ್ತಿ ಪ್ರಧಾನ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಬರುತ್ತಿವೆ.ಅದರ ಸಾಲಿಗೆ ಈಗ ಮಹದೇಶ್ವರ ಕೂಡ ಸೇರ್ಪಡೆ.ಜನರ ಮನೆ ಮನೆಗಳನ್ನು ತಲುಪಲು ಮುಂದಾಗಿದೆ. ಮಹದೇಶ್ವರನ ಕುರಿತು ಅನೇಕ ಜಾನಪದ ಹಾಡುಗಳು ಜನರನ್ನು ಮಂತ್ರಮುಗ್ದಗೊಳಿಸಿವೆ.

Leave a Comment