ಮಹದಾಯಿ- ರಾಜ್ಯಪಾಲರು ಗೆಜೆಟ್ ನೋಟಿಪಿಕೇಶನ ಹೊರಡಿಸಲು ರೈತ ಸೇನಾ ಆಗ್ರಹ

ಹುಬ್ಬಳ್ಳಿ, ಸೆ, ೧೨-  ಮಹದಾಯಿ ಯೋಜನೆ ಜಾರಿ ಕುರಿತಂತೆ ನ್ಯಾಯಾಧೀಕರ ಐದೂವರೆ ಟಿಎಂಸಿ ನೀರು ನೀಡಲು ಆದೇಶ ಮಾಡಿ ಒಂದು ವರ್ಷವಾದರು ಇ‌ದುವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯಾವುದೇ ಕ್ರಮ ಜರುಗಿಸಿಲ್ಲ ಕೂಡಲೇ ರಾಜ್ಯಪಾಲರು ಗೆಜೆಟ್ ನೋಟಿಪಿಕೇಶನ ಹೊರಡಿಸಬೇಕು ಎಂದು ರೈತ ಸೇನಾ ಕರ್ನಾಟಕದ ಮುಖಂಡರು ಆಗ್ರಹಿಸಿದರು.
ನಗರದಲ್ಲಿಂದುವಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನೆ ಜಾರಿಗೆ ಸಾಕಷ್ಟು ಪ್ರಮಾಣದಲ್ಲಿ ಹೋರಾಟ ಮಾಡಲಾಯಿತು, ಈ ಯೋಜನೆ ಜಾರಿಗೆ ೪ ದಶಕಗಳೆ ಕಳೆದವು ಈ ಹೋರಾಟದ ಫಲವಾಗಿ ನ್ಯಾಯಾಧೀಕರಣದ ಆದೇಶದ ಫಲವಾಗಿ ಒಂದು ನ್ಯಾಯ ಸಿಕ್ಕಂತಾಯಿತು, ಆದರೆ ನ್ಯಾಯಾಧೀಕರಣದ ಆದೇಶ ಮಾಡಿ ಒಂದು ವರ್ಷ ಕಳೆದರು ಇನ್ನು ಸರ್ಕಾರ ನೋಟಿಪೀಕೇಶನ್ ಮಾಡಿಲ್ಲ.‌ಆದ್ದರಿಂದ ಕೂಡಲೇ ರಾಜ್ಯಪಾಲರಿಗೆ ಈ ಕುರಿತು ಶೀಘ್ರವೇ ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು  ಸಮಿತಿಯ ಮುಖಂಡ ಗುರು ರಾಯನಗೌಡರ ಹೇಳಿದರು.
ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಅತೀವೃಷ್ಟಿಯಿಂದಾಗಿ ಸಾಕಷ್ಟು ಹಾನೀಯಾಗಿ ಜನರು ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ.‌ಕೂಡಲೇ ಪರಿಹಾರ ನೀಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಮಲ್ಲಪ್ರಭಾ ರೇಣುಕಾ ಜಲಾಶಯ ತುಂಬಿದ್ದರಿಂದ ಸೆ,೧೭ ರಂದು ಮಧ್ಯಾಹ್ನ ೧ ಕ್ಕೆ ಬಾಗಿನ ಅರ್ಪಣೆ ಮಾಡಲಾಗುವುದು ಎಂದರು.  ಗಂಗಪ್ಪ ವಿರೇಶನವರ, ಪ್ರಶಾಂತಗೌಡರ ಗುಂಡಿಗೌಡರು,
ಮಹೇಶ ಕಿರೇಸೂರ, ಬಸವರಾಜ ಗುಡಿ ಇದ್ದರು.

Leave a Comment