ಮಹದಾಯಿ, ಕಳಸಾ ಬಂಡೂರಿ ಜಾರಿಗೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ

ಮಹದಾಯಿ, ಕಳಸಾ ಬಂಡೂರಿ ಯೋಜನೆ ನಿರ್ಲಕ್ಷ್ಯಿಸದೇ ರೈತರ ಸಮಸ್ಯಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿ ರೈತ ಹೋರಾಟ ಮುಖಂಡರು ಗುರುವಾರ ನವಲಗುಂದ ಪಟ್ಟಣದ ನೀಲಮ್ಮನ ಕೆರೆ ಬಳಿ ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ರೈತ ಹೋರಾಟ ಸಮಿತಿ ಅಧ್ಯಕ್ಷ ಬಸಪ್ಪ  ಬೀರಣ್ಣವರ, ಸುಭಾಸಚಂದ್ರಗೌಡ ಪಾಟೀಲ ಮಾತನಾಡಿ, ನ್ಯಾಯಾಲಯದ ತೀರ್ಪಿನಂತೆ ಯೋಜನೆ ಕಾಮಗಾರಿ ಕಾರ್ಯರಂಭ ಮಾಡಬೇ ಕು. ಮಲಪ್ರಭಾ ಅಚ್ಚು ಕಟ್ಟು ಪ್ರದೇಶದ ಶಾಸಕರು ಸಂಸದರು ರಾಜ್ಯ ಮತ್ತು ಕೇಂದ್ರ  ಸರ್ಕಾರದ ಮೇಲೆ ಒತ್ತಡ ತಂದು ಬಹುದಿನಗಳ ರೈತರ ಬೇಡಿಕೆಯನ್ನು ಈಡೇರಿಸಬೇಕು . ಮಕರ ಸಂಕ್ರಾಂತಿ ನಿಮಿತ್ಯ ಈ ಭಾಗದ ಗ್ರಮೀಣ ಪದೇಶದಲ್ಲಿ ಜಾತ್ರಾ ಮಹೋತ್ಸವದ ನಿಮಿತ್ಸ ತೆಪ್ಪೊತ್ಸವ ಜರುಗಿವೆ. ಅದರಂತೆ ಹಿಂಗಾರಿ ಹಂಗಾಮಿನ ಬೆಳೆಗಳಿಗೆ ಸಮರ್ಪಕ ನೀರು ದೊರೆಯದೆ ಬೆಳೆಗಳು ಒಣಗುತ್ತಿವೆ. ಅಲ್ಲದೇ ಈ ಭಾಗದ ಗ್ರಾಮೀಣ ಕೆರೆಗಳು ಅಪೂರ್ಣ ಗೊಂಡಿದ್ದು ಅವುಗಳನ್ನು ತುಂಬಿಸಿಕೊಳ್ಳಬೇಕಾಗಿದೆ. ಹೀಗಾಗಿ ಮಲಪ್ರಭಾ ಜಲಾಶಯದಿಂದ ಇನ್ನೆರಡು ದಿನದಲ್ಲಿ ಕಾಲುವೆಗೆ ನೇರು ಪೂರೈಸಬೇಕು ಎಂದು ಆಗ್ರಹಿಸಿದರು.
ಅಣ್ಣಿಗೇರಿ ರೈತ ಹೋರಾಟ ಮುಖಂಡರಾದ ಎ.ಪಿ. ಗುರಿಕಾರ ಹಾಗೂ ಜಯರಾಜ ಹೂಗಾರ ಮಾತನಾಡಿ ನವಲಗುಂದದಲ್ಲಿ ಪಿಎಸ್ ಪ್ಥ್ಭಿ. ಎಂ ದಿವಾಕರ ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದನ್ನು ಖಂಡಿಸಿದರು.
ನವಲಗುಂದ  ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದಾರೆ ಅದರ ಪರಿಹಾರ ಹಣವನ್ನು ರೈತರ ಖಾತೆಗೆ ಜಮೆ ಮಾಡದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.\
ಅದರಂತೆ ಕಡಲೆ ಹಾಗೂ ಹೆಸರು ಖರೀದಿ ಬಾಕಿ ಹಣ ರೈತರಿಗೆ ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಸುಮಾರು ಎರಡು ಗಂಟೆಗಳ ಕಾಲ ರೈತ ಹೋರಾಟಗಾರರು ಹುಬ್ಬಳ್ಳಿ ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದರಿಂದ ವಾಹನ ಸಂಚಾರಕ್ಕೆ ವ್ಯಥೆಯುಂಟಾಯಿತು ಪ್ತಯಾಣಿಕರು ಅನಾನುಕೂಲತೆ ಎದುರಿಸಿದರು
ರೈತರ ಬಳಿಗೆ ಬಂದ ತಹಸೀಲ್ದಾರ ನವೀನ ಹುಲ್ಲೂರ ರೈತರಿಂದ ಮನವಿ ಸ್ವೀಕರಿಸಿದರು.
ಆಗ ಕೆಲ ರೈತರು ಜ 7 ರಿಂದಲೇ ಮಲಪ್ರಭಾ ಕಾಲುವೆ ನೇರು ಪೂರೈಸಲು ಮುಂದಾಗಬೇಕೆಂದು ಒತ್ತಾಯಿಸಿದರು ಆಗ ತಹಸೀಲ್ದಾರರು ಮೂರು ದಿನಗಳ ಕಾಲ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಿಂದಾಗಿ ಯಾವುದೇ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ ಸಮ್ಮೇಳನದ ಬಳಿಕ ಜಿಲ್ಲಾಧಿಕಾರಿಗಳಿಗೆ ರೈತರ ಮನವಿ ಬಗ್ಗೆ ತಿಳಿಸುತ್ತೇನೆ ಎಂದರು.
ಖ, ವಿ ಕುರಹಟ್ಟಿ ಮಾತನಾಡಿದರು ಮುರಿಗೆಪ್ಪ ಪಲ್ಲೇದ ಎಚ್ ಆರ್ ನದಾಫ ಶಿವಪ್ಪ ಸಂಗಳದ ಭರಮಪ್ಪ ಕಾತರಕಿ ಆರ್ ಎಂ ನಾಯ್ಕರ್ ಸಂಗಪ್ಪ ನಿಡವಣಿ ಇರರರು ಇದ್ದರು.

Leave a Comment