ಮಸ್ಕಿ ಉಪ ಚುನಾವಣೆ : ಮತಯಂತ್ರ ರವಾನೆ

ರಾಯಚೂರು.ಅ.17- ರಾಜ್ಯದ 17 ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಈಗಾಗಲೇ 15 ಕ್ಷೇತ್ರಗಳ ಉಪ ಚುನಾವಣೆ ಘೋಷಣೆಯಾಗಿದ್ದು, ಮಸ್ಕಿ ಕ್ಷೇತ್ರಕ್ಕೆ ಇನ್ನೂ ಚುನಾವಣೆ ಘೋಷಣೆಯಾಗದಿದ್ದರೂ, ಚುನಾವಣಾ ಸಿದ್ಧತೆ ಕಾರ್ಯಗಳು ಮಾತ್ರ ಆರಂಭಗೊಂಡಿವೆ.
ಇಂದು ಬ್ಯಾಲೇಟ್ ಯಂತ್ರ, ಕಂಟ್ರೋಲ್ ಪ್ಯಾಡ್, ವಿವಿ ಪ್ಯಾಡ್ ರವಾನಿಸಲಾಗಿದೆ. ಅಪರ ಜಿಲ್ಲಾಧಿಕಾರಿ ದುರ್ಗೇಶ ಅವರು ಈ ಎಲ್ಲಾ ಮತಯಂತ್ರಗಳನ್ನು ಪರಿಶೀಲಿಸಿ, ಸುರಕ್ಷಿತವಾಗಿ ಸಂಗ್ರಹಿಸಿದರು. ಒಟ್ಟು 462 ಬ್ಯಾಲೇಟ್ ಯಂತ್ರ ಹಾಗೂ ಕಂಟ್ರೋಲ್ ಯೂನಿಟ್, ವಿವಿ ಪ್ಯಾಡ್ ಚುನಾವಣಾ ಆಯೋಗದಿಂದ ಕಳುಹಿಸಲಾಗಿದೆ. ವಿವಿಧ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಈ ಮತಯಂತ್ರ ಪರಿಶೀಲಿಸಿ ನಂತರ ಸಂಗ್ರಹಿಸಲಾಯಿತು. ಮತಯಂತ್ರಗಳಲ್ಲಿ ಈ ಸಲ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ.

Leave a Comment