ಮಶ್ರೂಮ್ ಸೇವನೆ ಇರಲಿ…

ನಿಯಮಿತ ಪ್ರಮಾಣದಲ್ಲಿ ಮಶ್ರೂಮ್ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭವಿದೆ. ಇದರಲ್ಲಿರುವ ಪೌಷ್ಟಿಕಾಂಶಗಳು ಒಬೆಸಿಟಿ, ಡಯಾಬಿಟಿಸ್‌ನಂತಹ ಸಮಸ್ಯೆಗೆ ಉಂಟಾಗುವ ಸಂಭವವನ್ನು ಕಡಿಮೆ ಮಾಡುತ್ತದೆ.

ಟೈಪ್ ೧ ಡಯಾಬಿಟಿಸ್ ಸಮಸ್ಯೆ ಇರುವವರು ಫೈಬರ್ ಹೆಚ್ಚಿರುವ ಮಶ್ರೂಮ್ ಸೇವಿಸುವುದರಿಂದ ರಕ್ತದಲ್ಲಿನ ಗ್ಲುಕೊಸ್ ಪ್ರಮಾಣ ತಗ್ಗಿಸಬಹುದು. ಹಾಗೆ ಟೈಪ್ ೨ ಡಯಾಬಿಟಿಸ್ ಸಮಸ್ಯೆ ಇರುವವರು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ, ಲಿಪಿಡ್ಸ್ ಹಾಗೆ ಇನ್ಸುಲಿನ್ ಪ್ರಮಾಣ ಹೆಚ್ಚಿಸಬಹುದು.

ಮಶ್ರೂಮ್‌ನಲ್ಲಿರುವ ಫೈಬರ್, ವಿಟಾಮಿನ್ ಸಿ ಅಂಶಗಳು ಹೃದಯದ ಆರೋಗ್ಯಕ್ಕೆ ಉತ್ತಮ. ಹಾಗೆ ಪೊಟ್ಯಾಶಿಯಂ ಮತ್ತು ಸೋಡಿಯಂ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮಶ್ರೂಮ್‌ನಲ್ಲಿ ಬೆಟಾ ಗ್ಲುಕೊನ್ ಎಂಬ ಫೈಬರ್ ಅಂಶವಿದೆ, ಇದು ಇಮ್ಯುನ್ ಸಿಸ್ಟೆಮ್‌ನ್ನು ಬಲಗೊಳಿಸಿ ಕ್ಯಾನ್ಸರ್‌ನಂತಹ ಟ್ಯೂಮರ್‌ಗಳು ಉಂಟಾಗದಂತೆ ಕಾಪಾಡುತ್ತದೆ. ಜೊತೆಗೆ ಇನ್ನಿತರ ಆರೋಗ್ಯ ಸಮಸ್ಯೆ ಉಂಟು ಮಾಡುವ ಸೋಂಕುಗಳಿಂದ ರಕ್ಷಣೆ ನೀಡುತ್ತದೆ.

ಮಶ್ರೂಮ್‌ನಲ್ಲಿರುವ ಡಯೆಟ್ರಿ ಫೈಬರ್ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಇದು ಹಸಿವನ್ನು ಕಡಿಮೆ ಮಾಡಿ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರಿಂದ ತೂಕ ನಿಯಂತ್ರಣದಲ್ಲಿರುತ್ತದೆ.

Leave a Comment