ಮಳೆ ತಂತು ಧೈರ್ಯಂ

ಸಿನೆಮಾ ಪ್ರೇಕ್ಷಕರನ್ನು ಹಿಪ್ನಟೈಸ್ ಮಾಡುತ್ತಾ ಹೋಗುತ್ತದೆ. ಪಾತ್ರಗಳು ಸೇರಿದಂತೆ ಚಿತ್ರದಲ್ಲಿ ಎಲ್ಲವೂ ನೆಗೆಟೀವ್ ಶೇಡ್‌ನಲ್ಲಿ ಹೋಗುತ್ತಿವೆ ಪ್ರೇಕ್ಷಕರನ್ನು ಹಿಪ್ನಟೈಸ್ ಮಾಡುತ್ತಾ ಹೋಗುತ್ತದೆ. ಎಂದೆನಿಸುವುದರಿಂದ ಯಾವುದು ಸರಿ ಅಥವಾ ತಪ್ಪು ಎನ್ನುವಂತ ಗೊಂದಲ ಸೃಷ್ಟಿಸುತ್ತೆ ಎಂದು ಅಜಯ್‌ರಾವ್ ತಮ್ಮ ಹೊಸ ಚಿತ್ರ ‘ಧೈರ್ಯಂ’ ಬಗ್ಗೆ ಹೊಸ ಕುತೂಹಲ ಹುಟ್ಟಿಹಾಕಿದ್ದಾರೆ.

ಭಯದ ಪರಿಸ್ಥಿತಿಗೆ ಸಿಕ್ಕಾಗ ಧೈರ್ಯವಹಿಸಿದರೆ ಏನುಬೇಕಾದರೂ ಸಾಧಿಸಬಹುದೆನ್ನುವುದು ಕಥೆಯ ಸಿಂಪಲ್ ಎಳೆಯಾಗಿದೆ. ತಾನು ಕಾಲೇಜು ಹುಡುಗನಾಗಿ ಪರಿಸ್ಥಿತಿ ಎದುರಿಸುತ್ತೇನೆ ಎಂದ ಅಜಯ್ ಜಾನ್ ಜಾನಿ ಜನಾರ್ಧನ್ ಚಿತ್ರಕ್ಕಾಗಿ ಬದಲಾಯಿಸಿಕೊಂಡಿದ್ದ ಉದ್ದ ತಲೆಗೂದಲಿನ ಹೇರ್‌ಸ್ಟೈಲ್‌ನ ಮುಂದುವರೆಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಸೆಟ್‌ಹಾಕಿ ಚಿತ್ರೀಕರಿಸಲಾದ ಹಾಡಿಗೆ ಜುಟ್ಟುಕಟ್ಟಿ ಕಪ್ಪುಬಣ್ಣದ ಉಡುಗೆಯಲ್ಲಿ ಪಕ್ಕಾ ಕಮರ್ಷಿಯಲ್ ಹೀರೋ ಆಗಿ ಕಾಣಿಸುತ್ತಿದ್ದರು.

ಆದರೆ ಚಿತ್ರದಲ್ಲಿ ಅವರದ್ದು ಶ್ರೀಸಾಮಾನ್ಯರ ನಡುವಿನ ಹುಡುಗನ ಅಂದರೆ ಕೃಷ್ಣನ್ ಲವ್‌ಸ್ಟೊರಿ, ಕೃಷ್ಣಲೀಲಾ ಶೈಲಿಯ ಪಾತ್ರ. ತಾವು ಮೊದಲು ಮಳೆ ಚಿತ್ರ ನಿರ್ದೆಶಿಸಿದಾಗ ನೀಡಿದ್ದ ಪ್ರೋತ್ಸಾಹವನ್ನೇ ನೀಡಿ ಬೆಳೆಸಬೇಕೆಂದು ಕೋರಿದ ನಿರ್ದೇಶಕ ಶಿವ ತೇಜಸ್ ಮಳೆ ಚಿತ್ರದಂತೆ ‘ಧೈರ್ಯಂ’ನ ಚಿತ್ರೀಕರಿಸಲು ವರ್ಷಗಟ್ಟಲೆ ಸಮಯ ತೆಗೆದುಕೊಂಡಿಲ್ಲ. ೪೫ದಿನಗಳಲ್ಲಿ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿ ನಂತರದಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದರು.

ಶಿವ ತೇಜಸ್ ಗೆಳೆಯರಾದ ಡಾ. ಕೆ.ರಾಜು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶಿವ ತೇಜಸ್ ‘ಧೈರ್ಯಂ’ ಚಿತ್ರದ ಕಥೆಯನ್ನು ಗೆಳೆಯನಿಗೆ ಹೇಳಿದ್ದರಂತೆ ಆಗ ತುಂಬಾ ಇಷ್ಟವಾಗಿ ನಾವುಗಳೇ ನಿರ್ಮಿಸೋಣವೆಂದು ಮುಂದಾಗಿದ್ದಾರೆ.

ಸ್ಕ್ರಿಪ್ಟ್ ತುಂಬಾ ಚೆನ್ನಾಗಿದೆ ಒಳ್ಳೆ ಚಿತ್ರತಂಡದ ಜೊತೆ ಕೆಲಸ ಮಾಡಿರುವ ಖುಷಿ ಇದೆ ಎಂದ ಅವರು ‘ಧೈರ್ಯಂ’ನ ಅದ್ದೂರಿಯಾಗಿ ನಿರ್ಮಿಸಿರುವುದಾಗಿ ಹೇಳಿಕೊಂಡರು. ಚಿತ್ರದ ನಾಲ್ಕು ಹಾಡುಗಳಿಗೆ ವಿಭಿನ್ನವಾಗಿ ನೃತ್ಯಸಂಯೋಜನೆ ಮಾಡಿರುವುದಾಗಿ ಕಲೈ ಮಾಸ್ಟರ್ ಹೇಳಿದ್ದಾರೆ.

Leave a Comment