ಮಳೆ ಅಬ್ಬರ ಕಪಿಲೆಗೆ ಓರ್ವ ಬಲಿ

ಬೆಂಗಳೂರು,ಜು.೧೧-ಕೊಡಗು,ಮೈಸೂರು,ಚಿಕ್ಕಮಗಳೂರು,ಶಿವಮೊಗ್ಗ ಸೇರಿ ರಾಜ್ಯದ ವಿವಿದೆಢೆ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು ಕಪಿಲ ನದಿಯ ಸೆಳೆತಕ್ಕೆ ಓರ್ವ ಬಲಿಯಾಗಿ ಜನಜೀವನ ಅಸ್ತವ್ಯಸ್ಥವಾಗಿದೆ.

 •  ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರು
 •  ಹಲವೆಡೆ ರಸ್ತೆ ಸೇತುವೆ ಕುಸಿತ ಜನ ಜೀವನ ಅಸ್ಥವ್ಯಸ್ಥ
 •  ಕಪಿಲೆಯ ಸೆಳೆತಕ್ಕೆ ಓರ್ವ ಬಲಿ ನಾಲ್ವರು ಪಾರು
 •  ಕರಾವಳಿಯಲ್ಲಿ ತಗ್ಗಿದ ಅಬ್ಬರ ಇನ್ನು ಐದು ದಿನ ಮಳೆ

ಆರ್ಭಟಿಸಿ ಭೋರ್ಗರೆಯುತ್ತಿರುವ ಮಳೆಯಿಂದ ರಾಜ್ಯದ ಹಲವೆಡೆ ರಸ್ತೆ ಸೇತುವೆಗಳು ಕುಸಿದು ನದಿಗಳು ಆಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜನ ಮನೆಯಿಂದ ಹೊರಬರಲಾಗದೇ ಪರಿತಪಿಸುತ್ತಿದ್ದಾರೆ.

ಮಳೆಯಿಂದಾಗಿ ಹಲವು ಕಡೆಗಳಲ್ಲಿ ಮನೆಗಳು ಕುಸಿದ್ದು, ವಿದ್ಯುತ್ ಸಂಪರ್ಕ ಕೈ ಕೊಟ್ಟಿದ್ದರೆ ಮರ ಉರುಳಿ ಬೆಳೆ ಹಾನಿಯಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಮುನ್ನೆಚ್ಚರಿಕೆ ಕ್ರಮವಾಗಿ ಚಿಕ್ಕಮಗಳೂರು,ಕೊಡಗು ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

ಮೈಸೂರು,ಮಲೆನಾಡು ಭಾಗದಲ್ಲಿ ಅತಿ ಹೆಚ್ಚಿನ ಮಳೆಯಾಗುತ್ತಿದ್ದು ಇಲ್ಲಿನ ಪ್ರಮುಖ ಜಲಾಶಯಗಳಾದ ಕಬಿನಿ,ಹಾರಂಗಿ,ಹೇಮಾವತಿ, ತುಂಗಭದ್ರ ಆಲಮಟ್ಟಿ, ಲಿಂಗನಮಕ್ಕಿ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗುತ್ತಿದ್ದು ಬಹತೇಖ ಭರ್ತಿಯಾಗುವ ಹಂತ ತಲುಪಿರುವುದರಿಂದ ಹೊರ ಹರಿವಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ.

ಈ ನಡುವೆ ಉಡುಪಿ,ಮಂಗಳೂರು,ಕಾರವಾರ ಭಾಗಗಳಲ್ಲಿ ಮಳೆಯ ಅಬ್ಬರ ತುಸು ಕಡಿಮೆಯಾಗಿದ್ದು ಜನೆ ನಿಟ್ಟುಸಿರು ಬಿಡುವಂತಾಗಿದೆ  ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂದಿನ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕಪಿಲೆಗೆ ಯುವಕ ಬಲಿ

ಕಪಿಲ ನದಿಯಲ್ಲಿ ಈಜಲು ಹೋದ ನಾಲ್ಕು ಮಂದಿ ಯುವಕರಲ್ಲಿ ಓರ್ವ ನದಿಯಲ್ಲಿ ಕೊಚ್ಚಿಹೋಗಿ ಮೂರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ  ಮುಸಾಫಿರ್ ಶರೀಫ್ ನೀರು ಪಾಲಾದ ದುರ್ದೈವಿ ಯುವಕ. ಈತನ ಸ್ನೇಹಿತರು ನೀರಿನ ರಭಸದಿಂದ ಅದೃಷ್ಟವಶಾತ್ ಪಾರಾಗಿಬಂದಿದ್ದಾರೆ. ವೈನಾಡು ಪ್ರದೇಶದಲ್ಲಿ  ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಬಿನಿ ನದಿ ಮೈದುಂಬಿ ಹರಿಯುತ್ತಿದೆ.

ಕಬಿನಿ ಜಲಾಶಯಕ್ಕೆ ದಿನನಿತ್ಯ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪ್ರಮಾಣದ ನೀರನ್ನು ಜಲಾಶಯದಿಂದ ೩೫ ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ ಇದರಿಂದ ಕಪಿಲೆ ಮೈದುಂಬಿ ಹರಿಯುತ್ತಿದ್ದು, ನಿನ್ನೆ ಮುಸಾಫಿರ್ ಷರೀಫ್ ತನ್ನ ಮೂವರು ಸ್ನೇಹಿತರೊಂದಿಗೆ ರೈಲ್ವೆ ಸೇತುವೆ ಬಳಿ ಈಜಲು ಹೋಗಿ ಸೇತುವೆ ಮೇಲಿಂದ ಧುಮುಕಿದರು. ನೀರಿನ ರಭಸ ಹೆಚ್ಚಾದ್ದರಿಂದ ಮುಸಾಫಿರ್ ಶರೀಫ್ ನೀರಿನಲ್ಲಿ ಕೊಚ್ಚಿ ಹೋದನು. ಆದರೆ ಈತನ ಮೂವರು ಮಂದಿ ಸ್ನೇಹಿತರು ಭಯ ಪಡದೆ ರಭಸದ ನೀರನ್ನು ಲೆಕ್ಕಿಸದೆ ಹರಸಾಹಸ ಪಟ್ಟು ದಡ ಸೇರಿದರು.

ಹಾರಂಗಿ ಹಾಗೂ ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿವೆ. ವರುಣನ ಆರ್ಭಟ ಹೆಚ್ಚಾಗಿರುವುದರಿಂದ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನೀರಾವರಿ ಇಲಾಖೆ ಅಧಿಕಾರಿ ನದಿ ಪಾತ್ರದ ಜನರಿಗೆ ಸೂಚನೆ ನೀಡಿದ್ದಾರೆ. ನಂಜನಗೂಡು ದೇವಾಲಯಕ್ಕೆ ಆಗಮಿಸುವ ಭಕ್ತರು ಸ್ನಾನ ಮಾಡುವಾಗ ಎಚ್ಚರ ವಹಿಸುವಂತೆ ಸೂಚಿಸಿದ್ದು, ಭಕ್ತಾಧಿಗಳು ಯಾವುದೇ ಕಾರಣಕ್ಕೂ ನದಿಯಲ್ಲಿ ಧುಮುಕಿ ಈಜದಂತೆ ಅಲ್ಲಲ್ಲಿ ಬ್ಯಾರಿಕೇಡ್ ಹಾಗೂ ಎಚ್ಚರಿಕೆ ಫಲಕಗಳನ್ನು ಹಾಕಿದ್ದಾರೆ.

ನಗರದಲ್ಲಿ ಮಳೆ

ಕಳೆದ ರಾತ್ರಿ ಮಹಾನಗರಿ ಬೆಂಗಳೂರಲ್ಲಿ ರಾತ್ರಿಯಿಡಿ ಜಿಟಿಜಿಟಿ ಮಳೆಯಾಗಿದೆ. ಇನ್ನು ೫ ದಿನ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಮಳೆಯಾಗುತ್ತಿದ್ದು ರಾಜ್ಯದ ರೈತರ ಮುಖದಲ್ಲಿ ಮಂದಹಾಸದ ಗೆರೆ ಮೂಡಿದೆ.

ಮತ್ತೊಂದೆಡೆ ಭಾರೀ ಮಳೆಯಿಮದ ತೊಂದರೆಗೂ ಸಿಲುಕುವಂತಾಗಿದೆ.ಸಾಮಾನ್ಯವಾಗಿ ಆಗಸ್ಟ್ ವೇಳೆಗೆ ಭರ್ತಿಯಾಗುತ್ತಿದ್ದ ಜಲಾಶಯಗ ಜುಲೈನಲ್ಲಿ ತಿಂಗಳಲ್ಲಿ ಬಹುತೇಕ ಭರ್ತಿಯಾಗಿವೆ.

ಕಾವೇರಿ ಕೊಳ್ಳದಲ್ಲಿ ಭಾರಿ ಮಳೆಯಿಂದಾಗಿ ಕೆಆರ್‌ಎಸ್‌ಗೆ ಒಂದೇ ದಿನ ೩ಅಡಿ ನೀರು ಬಂದಿದ್ದು, ಭರ್ತಿಗೆ ೧೦ ಅಡಿ ಬಾಕಿಯಿದೆ. ಕಬಿನಿ ಡ್ಯಾಮ್‌ನಿಂದ ೩೫ ಸಾವಿರ ಕ್ಯೂಸೆಕ್ ಅಂದ್ರೆ ೨ ಟಿಎಂಸಿಗೂ ಅಧಿಕ ನೀರು ತಮಿಳುನಾಡಿಗೆ ಹರೀತಿದೆ.

ನೀರಿನ ಮಟ್ಟ

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು ಬಹುತೇಕ ಜಲಾಶಯಗಳು ತುಂಬುವ ಹಂತಕ್ಕೆ ಬಂದಿವೆ

 • ಕೆಆರ್ ಎಸ್
 • ಜಲಾಶಯ , ಗರಿಷ್ಠ ಮಟ್ಟ,   ಇಂದಿನ ಮಟ್ಟ
 • ಕಾವೇರಿ      ೧೨೪ ಅಡಿ       ೧೧೪ ಅಡಿ
 • ಕಬಿನಿ        ೨೨೮೪ ಅಡಿ     ೨೨೮೨.೧೪ ಅಡಿ
 • ಹಾರಂಗಿ       ೨೮೫೯ ಅಡಿ, ೨೮೫೬.೭೯ ಅಡಿ
 • ಹೇಮಾವತಿ,   ೨೯೨೨ ಅಡಿ     ೨೯೧೦ ಅಡಿ
 • ಲಿಂಗನ ಮಕ್ಕಿ ೧,೮೧೯ ಅಡಿ, ೧೭೮೧ ಅಡಿ
 • ತುಂಗಭದ್ರ    ೧೬೩೩ ಅಡಿ     ೧೬೧೫, ೧೮ ಅಡಿ
 • ಆಲಮಟ್ಟಿ,  ೫೧೯.೬ ಮೀ,   ೫೧೪.೨೦ ಮೀ
 • ಭದ್ರಾ   ೧೮೬ ಅಡಿ,   ೧೫೫ ಅಡಿ
 • ತುಂಗಾ   ೫೮೮.೨೪ ಮೀ, ೫೮೮ ಮೀ

Leave a Comment