ಮಳೆಗಾಲದ ಸೊಳ್ಳೆ ಕಾಟಕ್ಕೆ ಸಲಹೆ

ಮಳೆಗಾಲ ಶುರುವಾಗ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಹಗಲಿನಲ್ಲಿ ಕಚ್ಚುವ ಸೊಳ್ಳೆಗಳು ಅಪಾಯಕ್ಕೆ ಕಾರಣವಾಗುತ್ತವೆ. ಸೊಳ್ಳೆ ಓಡಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳಿವೆ. ಆದ್ರೆ ಇದು ಮಕ್ಕಳ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಸುಲಭವಾಗಿ ಸೊಳ್ಳೆಯನ್ನು ಓಡಿಸೋದು ಹೇಗೆ ಅಂತಾ ನಾವು ಹೇಳ್ತೇವೆ ಕೇಳಿ.
ಕಹಿ ಬೇವು : ಆರೋಗ್ಯಕ್ಕೊಂದೇ ಅಲ್ಲ ಸೊಳ್ಳೆ ಓಡಿಸುವ ಕೆಲಸವನ್ನೂ ಕಹಿ ಬೇವು ಮಾಡುತ್ತದೆ. ತೆಂಗಿನ ಎಣ್ಣೆ ಹಾಗೂ ಕಹಿ ಬೇವಿನ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ದೇಹಕ್ಕೆ ಹಚ್ಚಿಕೊಳ್ಳಿ. ಇದು ಸುಮಾರು ೮ ಗಂಟೆಗಳ ಕಾಲ ಪ್ರಭಾವ ಬೀರಲಿದೆ. ಕಹಿ ಬೇವಿನ ವಾಸನೆಗೆ ಸೊಳ್ಳೆ ಹತ್ತಿರ ಬರುವುದಿಲ್ಲ.
ಸೊಳ್ಳೆ ಕಾಯಿಲ್ ಬದಲು ಕರ್ಪೂರವನ್ನು ಹಚ್ಚಿ. ಕರ್ಪೂರವನ್ನು ಹಚ್ಚಿ ೧೫ ನಿಮಿಷ ಹಾಗೆ ಬಿಡಿ. ಕರ್ಪೂರದ ವಾಸನೆಗೆ ಸೊಳ್ಳೆಗಳು ಮನೆಯಿಂದ ಹೊರಗೆ ಓಡಿ ಹೋಗುತ್ತವೆ.
ನಿಂಬೆ ರಸ ಹಾಗೂ ನೀಲ್ ಗಿರಿ ತೈಲವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮೈಗೆ ಹಚ್ಚಿಕೊಳ್ಳಿ. ಇದರ ವಾಸನೆಗೆ ಸೊಳ್ಳೆ ಹತ್ತಿರ ಸುಳಿಯುವುದಿಲ್ಲ.
ತುಳಸಿ ಗಿಡವನ್ನು ಕಿಟಕಿ ಅಥವಾ ಬಾಗಿಲ ಬಳಿ ಇಡಿ. ತುಳಸಿ ಮನೆಯೊಳಗೆ ಸೊಳ್ಳೆ ಪ್ರವೇಶ ಮಾಡುವುದನ್ನು ತಡೆಯುತ್ತದೆ. ತುಳಸಿ ಬದಲು ನಿಂಬೆ ಗಿಡವನ್ನು ಕೂಡ ಕಿಟಕಿ ಬಳಿ ಇಡಬಹುದು.
ಬೆಳ್ಳುಳ್ಳಿ ಸಿಪ್ಪೆ ತೆಗೆದು ಕುಟ್ಟಿ ನೀರಿನಲ್ಲಿ ಕುದಿಸಿ. ಆ ನೀರನ್ನು ಮನೆ ತುಂಬ ಚಿಮುಕಿಸಿ. ಹೀಗೆ ಮಾಡುವುದ್ದರಿಂದ ಸೊಳ್ಳೆ ಮನೆಯಲ್ಲಿರುವುದಿಲ್ಲ.

Leave a Comment