ಮಳೆಗಾಗಿ ರಾಮತಾರಕಯಜ್ಞ

ದಾವಣಗೆರೆ, ಜು. 12 – ಮಳೆಗಾಗಿ ಪ್ರಾರ್ಥಿಸಿ ನಾಳೆಯಿಂದ ಜು. 15 ರವರೆಗೆ ನಗರದ ರಾಜನಹಳ್ಳಿ ಹನುಮಂತಪ್ಪನವರ ಧರ್ಮಶಾಲೆಯಲ್ಲಿ ಶ್ರೀ ರಾಮತಾರಕಯಜ್ಞ ಮತ್ತು ಶ್ರೀವರುಣಯಾಗ ಹಮ್ಮಿಕೊಳ್ಳಲಾಗಿದೆ ಎಂದು ಕಮಿಟಿ ಕಾರ್ಯದರ್ಶಿ ವಿ.ಸತ್ಯನಾರಾಯಣಮೂರ್ತಿ ಹೇಳಿದರು.
ಆಂಧ್ರಪ್ರದೇಶದ ಶ್ರೀವಂಗಲವೆಂಕಟಚಾರ್ಯ ಸ್ವಾಮಿ ಅವರ ನೇತೃತ್ವದಲ್ಲಿ ನಾಳೆ ಬೆಳಗ್ಗೆ 8-45 ರಿಂದ ಶ್ರೀರಾಮಜಪ, ಸಂಜೆ 4-30 ಕ್ಕೆ ವಿದ್ವಾನ್ ರಾಜಗೋಪಾಲ್ ಭಾಗವತ್ ಅವರಿಂದ ಅಮೃತವರ್ಷಿಣಿ ಸಂಗೀತ ಕಾರ್ಯಕ್ರಮ, ಚನ್ನಗಿರಿ ಮಧುಸೂಧನಚಾರ್ಯ ಅವರಿಂದ ಮಳೆಗಾಗಿ ವಿರಾಟ ಪರ್ವ ಪಾರಾಯಣ ಜರುಗಲಿದೆ. ಜು. 14 ರಂದು ಬೆಳಗ್ಗೆ 9 ಕ್ಕೆ ದಕ್ಷಿಣ ಕನ್ನಡದ ಪ್ರವೀಣ್ ಭಟ್ ನೇತೃತ್ವದಲ್ಲಿ ತಾರಕನಾಮಹೋಮ, ಬ್ರಹ್ಮಚೈತನ್ಯ ಸಮಾಜ ಸಮಿತಿ, ಹಾವೇರಿ ಮಹಿಳಾ ಮಂಡಳಿ ವತಿಯಿಂದ 13 ಲಕ್ಷ ಶ್ರೀರಾಮನಾಮಜಪ, ಮಧ್ಯಾಹ್ನ 12-30 ಕ್ಕೆ ಪೂರ್ಣಾಹುತಿ, ಸಂಜೆ 4-30 ಕ್ಕೆ ಕೃಷ್ಣಶರ್ಮ ಅವರಿಂದ ಶುಕ್ಲಯಜುರ್ವೇದ ಘನಪಾರಾಯಣ, ಅಗಡಿಯ ವಿಶ್ವನಾಥ ಚಕ್ರವರ್ತಿ ಅವರಿಂದ ಆಶೀರ್ವಚನ, ದಾವಣಗೆರೆ ಇಸ್ಕಾನ್ ಮುಖ್ಯಸ್ಥರಾದ ಅವಧೂತಚಂದ್ರಪ್ರಭು ಅವರಿಂದ ಕೀರ್ತನೆ ಜರುಗಲಿದೆ. ಜು.15 ರಂದು ಬೆಳಗ್ಗೆ 8-30 ಕ್ಕೆ ಋಷ್ಯಶೃಂಗೋಪಾಖ್ಯಾನ ಪಾರಾಯಣ, 108 ಬಾರಿ ವರುಣ ಸೂಕ್ತಪಾರಾಯಣ, ಗಾಯತ್ರಿ ಪಾರಾಯಣ, ವರುಣ ಸ್ತುತಿಪಾರಾಯಣ ನಡೆಯಲಿದೆ. ನಂತರ ಬೆಳಗ್ಗೆ 11-45 ಕ್ಕೆ ಪೂರ್ಣಾಹುತಿ, ಆಶೀರ್ವಚನ ಜರುಗಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಸಿ.ಹೆಚ್.ಭಾವನಾರಾಯಣ, ವೆಂಕಟೇಶ್ವರ, ವೇದಮೂರ್ತಿ, ರಟ್ಟಿಹಳ್ಳಿ ನಾಗಣ್ಣ, ವೀರಭದ್ರರಾವ್ ಇದ್ದರು.

Leave a Comment