ಮಳೆಗಾಗಿ ಪ್ರಾರ್ಥನೆ: ಕನಕದುರ್ಗ ದೇಗುಲದಲ್ಲಿ ವರುಣ ಯಾಗ

ವಿಜಯವಾಡ, ಜೂನ್ 20 – ದಿನಗಳು ಉರುಳುತ್ತಿದ್ದರೂ ಆಂಧ್ರಪ್ರದೇಶದಲ್ಲಿ ಮುಂಗಾರು ಮಳೆ ಸುರಿಯುವ ಲಕ್ಷಣ ಗೋಚರಿಸದ ಹಿನ್ನೆಲೆಯಲ್ಲಿ, ವರುಣನ ಸಂಪ್ರೀತಿಗಾಗಿ ಪ್ರಖ್ಯಾತ ಕನಕ ದುರ್ಗ ದೇವಾಲಯದಲ್ಲಿ ವರುಣ ಯಾಗ ಹಮ್ಮಿಕೊಳ್ಳಲಾಗಿದೆ.

  ದುರ್ಗಾ ಮಲ್ಲೇಶ್ವರ ದೇವಾಲಯದ ಕನಕ ದುರ್ಗೆಯನ್ನು ಪ್ರಾರ್ಥಿಸುವುದರ ಜೊತೆಗೆ 5 ದಿನಗಳ ವರುಣ ಯಾಗ ಗುರುವಾರದಿಂದ ಆರಂಭಗೊಂಡಿದೆ. ಮೊದಲ ದಿನದ ಕಾರ್ಯಕ್ರಮದಲ್ಲಿ ದತ್ತಿ ಖಾತೆ ಸಚಿವ ವಿ ಶ್ರೀನಿವಾಸ ರಾವ್ ಮತ್ತು ದುರ್ಗಾ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ವಿ ಕೋಟೇಶ್ವರಂ ಪಾಲ್ಗೊಂಡಿದ್ದರು.

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಮಳೆರಾಯನಿಗಾಗಿ 5 ದಿನಗಳ ಯಾಗ ಹಮ್ಮಿಕೊಳ್ಳಲಾಗಿದೆ ಎಂದರು.

ಕೋಟೇಶ್ವರಮ್ಮ ಅವರು, ಮುಂಗಾರು ಮಳೆಯ ಕೊರತೆಯ ಕಾರಣ ರಾಜ್ಯ ಬರಡಾಗುತ್ತಿದೆ. ಹೀಗಾಗಿ ವೈದಿಕರು ಕೃಷ್ಣಾ ನದಿಯ ತಟದಲ್ಲಿ ವರುಣ ಜಪ ಆರಂಭಿಸಿದ್ದಾರೆ ಎಂದು ತಿಳಿಸಿದರು,

ಜೂನ್ 24ರಂದು ವರುಣ ಹೋಮ ಹಾಗೂ ರುದ್ರ ಹೋಮ ನಡೆಯಲಿದೆ.  ಅಲ್ಲದೆ ಸಹಸ್ರ ಘಟಾಭಿಷೇಕವನ್ನೂ ಅಂದೇ ನೆರವೇರಿಸಲಾಗುವುದು ಎಂದು ಕೋಟೇಶ್ವರಮ್ಮ ಮಾಹಿತಿ ನೀಡಿದರು.

Leave a Comment