ಮಳೆಗಾಗಿ ಗ್ರಾಮ ದೇವತೆ ಊರಮ್ಮ ಗೆ ವಿಶೇಷ ಪೂಜೆ

ಹೊಸಪೇಟೆ.ಜು.11 ತಾಲೂಕಿನಲ್ಲಿ ಸಮೃದ್ಧ ಮಳೆ, ಬೆಳೆಗಾಗಿ ಪ್ರಾರ್ಥಿಸಿ, ಸ್ಥಳೀಯ ರೈತರು ಮಂಗಳವಾರ ಗ್ರಾಮ ದೇವತೆ ಊರಮ್ಮ ದೇವಿ ತನುಕೊಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ವರುಣನ ಕೃಪೆ ಹಾಗೂ ಗ್ರಾಮದ ಸುಭೀಕ್ಷೆಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ರೈತರು ತನುಕೊಡ ಅರ್ಪಿಸುವ ಕಾರ್ಯಕ್ರಮವನ್ನು ನಡೆಸುವ ಮೂಲಕ ಸಕಾಲದಲ್ಲಿ ಮಳೆ-ಬೆಳೆಗಾಗಿ ಊರಮ್ಮ ದೇವಿಗೆ ನೈವದ್ಯ ಅರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.

ಸಮೀಪದ ವೆಂಕಟಗಿರಿ, ಸಿದ್ಧಾಪುರ, ರಾಜಾಪುರ, ಕಲ್ಲಳ್ಳಿ ಸೇರಿದಂತೆ ಇತರೆ ಗ್ರಾಮದ ನೂರಾರು ರೈತರು, ಡೊಳ್ಳು ವಾದ್ಯದ ಮೂಲಕ ಗ್ರಾಮ ದೇವತೆ ಊರಮ್ಮ ದೇವಿಗೆ ತನುಕೊಡವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ನೆರವೇರಿಸಿದರು. ತನುಕೊಡ ಅರ್ಪಣೆ ಅಂಗವಾಗಿ ತಾಲೂಕಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

Leave a Comment