ಮಳಿಗೆಗೆ ಚಾಲನೆ ನೀಡಿ ನೆರವು ಯಾಚಿಸಿದ ಯಶ್

ಬೆಂಗಳೂರು, ಆ ೧೮- ನಗರದ ಹೊರವಲಯದಲ್ಲಿರುವ ಯಲಹಂಕದ ಆರ್‌ಎಂಝಡ್ ಗ್ಯಾಲರಿಯಲ್ಲಿ ನೂತನವಾಗಿ ಆರಂಭವಾಗಿರುವ ಲೈಫ್‌ಸ್ಟೈಲ್ ಮಳಿಗೆಗೆ ನಟ ಯಶ್ ಚಾಲನೆ ನೀಡಿ, ಜಲಪ್ರಳಯದಿಂದ ತತ್ತರಿಸಿರುವ ಕೇರಳ ಹಾಗೂ ಕೊಡಗು ಪ್ರವಾಹಪೀಡಿತ ಜನರಿಗೆ ಸಹಾಯ ಮಾಡುವಂತೆ ಮನವಿ ಮಾಡಿದರು.

ಮಳಿಗೆ ಉದ್ಘಾಟನೆ ನಂತರ ಮಾತನಾಡಿದ ಯಶ್, ಎಲ್ಲಾ ಫ್ಯಾಶನ್ ಅಗತ್ಯಗಳಿಗೆ ಇದು ಒನ್ ಸ್ಟಾಪ್ ತಾಣ. ನಗರದಲ್ಲಿ ನನಗೆ ಇಷ್ಟವಾದ ಹಾಗೂ ನಾನಿರುವ ಸ್ಥಳಕ್ಕೆ ಹತ್ತಿರವಾದ ಲೈಫ್‌ಸ್ಟೈಲ್‌ಗೆ ಚಾಲನೆ ನೀಡುತ್ತಿರುವುದು ಸಂತೋಷ ಹಾಗೂ ವಿಶೇಷ ಎನಿಸುತ್ತಿದೆ. ವಿದೇಶಗಳಲ್ಲಿ ಇರುವ ಹಾಗೆ ಈ ಲೈಫ್‌ಸ್ಟೈಲ್ ಕೂಡಾ ವ್ಯವಸ್ಥಿತವಾಗಿ ಸುಂದರವಾಗಿದೆ ಎಂದು ಹೇಳಿದರು.

ಇಲ್ಲಿನ ಫ್ಯಾಶನಬಲ್ ಡ್ರಸ್ ನನ್ನ ಲೈಫ್‌ಸ್ಟೈಲ್‌ಗೆ ಹೊಂದುತ್ತದೆ. ಪ್ರಮುಖವಾಗಿ ಹುಡುಗಿಯರಿಗೆ ಇದೊಂದು ಬೆಸ್ಟ್ ಆಪ್ಷನ್ ಫ್ಯಾಶನ್ ಸ್ಟೋರ್ ಎಂದರು. ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಯಶ್ ಎಲ್ಲರೊಂದಿಗೆ ಒಂದು ನಿಮಿಷ ಮೌನಾಚರಣೆ ಮಾಡಿದರು. ಕೇರಳ ಹಾಗೂ ಕೊಡಗು ಪ್ರವಾಹಪೀಡಿತ ಜನರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ ಅವರು ಇನ್ನು ಸಿನಿಮಾ ಬಗ್ಗೆ ಮಾತನಾಡಿದ ಅವರು, ಶೀಘ್ರದಲ್ಲೇ ಕೆಜಿಎಫ್ ಭಾಗ೨ರ ಶೂಟಿಂಗ್ ಆರಂಭವಾಗಲಿದೆ. ಇನ್ನೆರಡು ದಿನಗಳಲ್ಲೇ ಗಡ್ಡ ಢಮಾರ್ ಎಂದು ತಮಾಷೆ ಮಾಡಿದರು.

ಈ ಮಳಿಗೆ ಬೆಂಗಳೂರಿನಲ್ಲಿ ಲೈಫ್‌ಸ್ಟೈಲ್‌ನ ೭ನೇ ಮಳಿಗೆಯಾಗಿದೆ ಮತ್ತು ದೇಶದ ೭೩ನೇ ಮಳಿಗೆಯಾಗಿದೆ. ಹೊಸದಾಗಿ ಪ್ರಾರಂಭವಾಗಿರುವ ಈ ಮಳಿಗೆ ಕ್ಯುರೇಟ್ ಮಾಡಲಾದ ಫ್ಯಾಷನ್ ಶ್ರೇಣಿ, ಬೃಹತ್ ಡಿಜಿಟಲ್ ಸ್ಕ್ರೀನ್‌ಗಳ ಮೂಲಕ ತಲ್ಲೀನಗೊಳಿಸುವ ಮತ್ತು ಸುಧಾರಿತ ಶಾಪಿಂಗ್ ಅನುಭವವನ್ನು ಅತ್ಯಾಧುನಿಕ ಫ್ಯಾಷನ್ ಟ್ರೆಂಡ್‌ಗಳು, ಈ ತರಗತಿಯ ಅತ್ಯುತ್ತಮ ಫಿಕ್ಸ್‌ಚರ್‌ಗಳು ಮತ್ತು ವಿಶಿಷ್ಟ ಹಾಗೂ ಸ್ಮರಣೀಯ ರೀಟೇಲ್ ಅನುಭವ ನೀಡುವ ಹೊಸ ಬ್ರಾಂಡ್‌ಗಳನ್ನು ಪ್ರದರ್ಶಿಸಿದೆ.

Leave a Comment