ಮಲ್ಲೇಶ್ವರಸ್ವಾಮಿ ದೇಗುಲದಲ್ಲಿ ಮಹಾರುದ್ರ ಹೋಮ

ಮಧುಗಿರಿ, ಆ. ೮- ಸಕಾಲದಲ್ಲಿ ಮಳೆ ಆಗಲಿ ಹಾಗೂ ಲೋಕಕಲ್ಯಾಣಾರ್ಥವಾಗಿ ಪರ್ಜನ್ಯಜಪ, ವರುಣಜಪ, ಋಷ್ಯಶೃಂಗಮುನಿಜಪ, ಮಹಾರುದ್ರಹೋಮ, ಶತರುಧ್ರಾಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಗಳನ್ನು ಪಟ್ಟಣದ ಐತಿಹಾಸಿಕ ಶ್ರೀ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆಸಲಾಯಿತು.

ಧಾರ್ಮಿಕ ಮುಖಂಡ ಎಂ.ಜಿ. ಶ್ರೀನಿವಾಸಮೂರ್ತಿ ಮಾತನಾಡಿ, ಮಳೆಗಾಲ ಪ್ರಾರಂಭವಾಗಿದ್ದರೂ ತಾಲ್ಲೂಕಿನಲ್ಲಿ ಮಳೆಯಾಗದೆ ಕೃಷಿಕರು ಕಂಗಾಲಾಗಿದ್ದಾರೆ. ಲೋಕಕಲ್ಯಾಣಾರ್ಥವಾಗಿ ಭಕ್ತಾದಿಗಳ ಸಹಕಾರದೊಂದಿಗೆ ಜಪ, ಹೋಮಗಳನ್ನು ನಡೆಸಲಾಗಿದ್ದು, ಸಕಾಲದಲ್ಲಿ ಮಳೆಯಾಗಿ ರೈತರ ಸಂಕಷ್ಟ ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಋತ್ವಿಕರಾದ ವಿನಯಶರ್ಮ, ರಾಘವೇಂದ್ರ, ಸತೀಶ್‌ಶರ್ಮ, ಉಪವಿಭಾಗಾಧಿಕಾರಿ ಡಾ. ವೆಂಕಟೇಶಯ್ಯ, ಗ್ರೇಡ್-2 ತಹಶೀಲ್ದಾರ್ ತಿಪ್ಪೇಸ್ವಾಮಿ, ಮುಖಂಡರಾದ ಚಿ.ಸೂ. ಕೃಷ್ಣಮೂರ್ತಿ, ಕೆ.ಎಸ್. ಪಾಂಡುರಂಗರೆಡ್ಡಿ, ಟೈಲರ್ ಶಿವಣ್ಣ, ಜಿ.ಆರ್. ಧನಪಾಲ್, ಅರ್ಚಕ ನಟರಾಜ್‍ದೀಕ್ಷಿತ್ ಮತ್ತಿತರರು ಭಾಗವಹಿಸಿದ್ದರು.

Leave a Comment