ಮಲೆಮಹದೇಶ್ವರ ಬೆಟ್ಟ ಬೆಟ್ಟ ಕುಸಿತ : ಸಂಚಾರ ಅಸ್ತವ್ಯಸ್ಥ

ಹನೂರು: ಅ.22- ರಾಜ್ಯದ ಸುಪ್ರಸಿದ್ಧ ಧಾರ್ಮಿಕ ಸ್ಥಳ ಮಲೆಮಹದೇಶ್ವರ ಬೆಟ್ಟದಿಂದ ನೆರೆಯ ರಾಜ್ಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮಲೈಮಹದೇಶ್ವರ ಬೆಟ್ಟದಿಂದ ಪಾಲಾರ್‍ಗೆ ತೆರಳುವ ಮಾರ್ಗದಲ್ಲಿ ಸಿಗುವ ಬೆಟ್ಟ ಹಾಗೂ ರಸ್ತೆ ಕುಸಿದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿರುವ ಘಟನೆ ನಡೆದಿದೆ.
ಸೋಮವಾರ ಸುರಿದ ಧಾರಾಕಾರ ಮಳೆಯಿಂದ ರಸ್ತೆ ಬದಿಯ ಬೆಟ್ಟ ಹಾಗೂ ಬೆಟ್ಟ ಕುಸಿತದ ರಭಸಕ್ಕೆ ರಸ್ತೆ ಕುಸಿತ ಉಂಟಾದ ಪರಿಣಾಮ ರಾತ್ರಿ 7.30 ರಿಂದ ರಾತ್ರಿ 12ರ ವರೆಗೆ ಸಂಚಾರ ಅಸ್ತವ್ಯಸ್ಥಗೊಂಡು ತಮಿಳುನಾಡಿನಿಂದ ಕೊಳ್ಳೆಗಾಲ ಹಾಗೂ ಮ.ಬೆಟ್ಟದ ಕಡೆಗೆ ಮತ್ತು ಮ.ಬೆಟ್ಟದಿಂದ ಗೋಪಿನಾಥಂ ಮತ್ತು ತಮಿಳುನಾಡಿನ ಕಡೆಗೆ ಹೋಗುತ್ತಿದ್ದ ಪ್ರಯಾಣಿಕರು 4 ತಾಸುಗಳ ಕಾಲ ತ್ರಾಸ ಪಡುವಂತಾಗಿತ್ತು.
ಗುಡ್ಡ ಕುಸಿತ ಹಾಗೂ ರಸ್ತೆ ಕುಸಿತದ ಸುದ್ದಿ ತಿಳಿದ ಮ.ಬೆಟ್ಟ ಪ್ರಾಧಿಕಾರದ ಉಪಕಾರ್ಯದರ್ಶಿ ರಾಜಶೇಖರಮೂರ್ತಿ ಮತ್ತು ಆರೋಗ್ಯಾಧಿಕಾರಿ ಶ್ರೀಕಾಂತ್, ಮ.ಬೆಟ್ಟ ಇನ್ಸ್‍ಪೆಕ್ಟರ್ ಮಹೇಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಜೆ.ಸಿ.ಬಿ ಯಂತ್ರದ ಸಹಾಯದಿಂದ ಸಮರೋಪಾದಿಂಯಲ್ಲಿ ರಸ್ತೆಯ ಮಧ್ಯದಲ್ಲಿದ್ದ ಭಾರಿ ಗಾತ್ರದ ಮಣ್ಣು ಮತ್ತು ಕಲ್ಲುಗಳನ್ನುತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಅಲ್ಲದೆ ರಸ್ತೆ ಬದಿಯಲ್ಲಿ ಗುಡ್ಡ ಕುಸಿತಗೊಂಡ ಹಿನ್ನಲೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚಾರಿಸಲು ಸೂಚನೆ ನೀಡಿದ್ದಾರೆ.
ಪ್ರಯಾಣಿಕರಿಗೆ ಊಟದ ವ್ಯವಸ್ಥೆ :
ನೆನ್ನೆ ರಾತ್ರಿ 7.30 ರಿಂದ 12 ಗಂಟೆಯವರೆಗೆ ಸಂಚಾರ ಅಸ್ತವ್ಯಸ್ಥಗೊಂಡ ಹಿನ್ನೆಲೆಯಲ್ಲಿ ವಿವಿಧ ವಾಹನಗಳಲ್ಲಿ ಇದ್ದ ಪ್ರಯಾಣಿಕರಿಗೆ ಮ.ಬೆಟ್ಟ ಪ್ರಾದಿಕಾರದ ವತಿಯಿಂದ ಸುಮಾರು 200 ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ತಪ್ಪಿದ ಭಾರಿ ಅನಾಹುತ:
ಬೆಟ್ಟ ಕುಸಿತದ ವೇಳೆ ಅದೃಷ್ಟವಶತ್ ಯಾವುದೇ ವಾಹನಗಳು ಸಂಚರಿಸದೆ ಇರುವುದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಗುಡ್ಡ ಕುಸಿತ ಉಂಟಾಗುವುದಕ್ಕೂ ಕೆಲವು ನಿಮಿಷಗಳಲ್ಲಿ ತಮಿಳುನಾಡಿನಿಂದ ಮ.ಮ.ಬೆಟ್ಟದ ಕಡೆಗೆಬರುತ್ತಿದ್ದ ಬಸ್‍ನಲ್ಲಿ 60 ಕ್ಕೂ ಪ್ರಯಾಣಿಕರು ಪ್ರಯಾಣಿಸುತ್ತಿದ್ದು ಕೂಗಳೆತ ಅಂತರದಲ್ಲಿ ಪಾರಾಗಿದ್ದಾರೆ ಎನ್ನಲಾಗಿದೆ. ಇಂತಹ ದುರ್ಘಟನೆ ಸಂಭವಿಸಿದರೆ ಮಲೆಮಹದೇಶ್ವರ ಬೆಟ್ಟದ ಆಸುಪಾಸಿನಲ್ಲಿ ಭಾರಿ ಅನಾಹುತ ಸಂಭವಿಸಿದಂತೆ ಆಗುತ್ತಿತ್ತು. ಇಂತಹ ದುರ್ಗಮ ದಾರಿಯಲ್ಲಿ ರಸ್ತೆ ಸಹ ಕುಸಿದ ಪರಿಣಾಮಕ್ಕೆ ವಾಹನಗಳು ಹೋಗಿದ್ದರೆ ಪ್ರಪಾತಕ್ಕೆ ಬೀಳುವ ಸನ್ನಿವೇಶ ನಿರ್ಮಾಣವಾದಂತೆ ಆಗುತ್ತಿತ್ತು ಅದೃಷ್ಟವಶತ್ ಮಲೆಮಾದಪ್ಪನ ದಯೆಯಿಂದ ಅನಾಹುತ ಸಂಭವಿಸುವುದು ತಪ್ಪಿತು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿರುವುದು ಕೇಳಿ ಬರುತ್ತಿದೆ.

Leave a Comment