ಮಲೆಮಹದೇಶ್ವರ ಬೆಟ್ಟದಲ್ಲಿ ಕಡೆ ಕಾರ್ತಿಕ ಮಾಸ

ದೀಪಾಲಂಕಾರಗಳಿಂದ ವಿಜೃಂಭಣೆಯ ತೆಪ್ಪೋತ್ಸವ
ಹನೂರು, ಡಿ.5- ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಕಡೆ ಕಾರ್ತಿಕ ಮಾಸದ ಪ್ರಯುಕ್ತ ಸೋಮವಾರ ರಾತ್ರಿ ದೀಪದ ಒಡ್ಡುವಿನಲ್ಲಿ ದೊಡ್ಡ ದೀಪ (ಮಹದೇಶ್ವರ ಸ್ವಾಮಿ ಜ್ಯೋತಿ) ದರ್ಶನ ಹಾಗೂ ದೇವಾಲಯದ ಸುತ್ತಮುತ್ತ ಹಣತೆ ದೀಪಗಳನ್ನು ಬೆಳಗಿಸಲಾಯಿತು. ತಡ ರಾತ್ರಿ ವಿಶೇಷ ದೀಪಾಲಂಕಾರಗಳಿಂದ ವಿಜೃಂಭಣೆಯ ತೆಪ್ಪೋತ್ಸವ ಜರುಗಿತು.
ಮಲೆ ಮಾದಪ್ಪನ ದೇವಸ್ಥಾನದ ಮುಖ್ಯದ್ವಾರ ಸೇರಿದಂತೆ ದೊಡ್ಡ ಗೋಪುರ, ಆಲಂಬಾಡಿ ಬಸವೇಶ್ವರ ಸ್ವಾಮಿ ವಿವಿಧಡೆ ಆಕರ್ಷಣಿಯ ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು. ಮಲೆಮಹದೇಶ್ವರ ದೇವಾಲಯ ವಿಶೇಷ ದೀಪಾಲಂಕಾರಗಳಿಂದ ಕಂಗೋಳಿಸುತ್ತಿದ್ದು ನೋಡುಗರ ಕಣ್ಮನ ಸೆಳೆಯುವಂತೆ ಮಾಡಿತ್ತು.
ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸೋಮವಾರ ರಾತ್ರಿ ಕಡೆ ಕಾರ್ತಿಕ ಮಾಸದ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆ ಅಭಿಷೇಕ, ಮಹಾಮಂಗಳಾರತಿ, ಪೂಜಾ ಕಾರ್ಯಗಳು ವಿಧಿ ವಿಧಾನಗಳೊಂದಿಗೆ ಜರುಗಿತು.
ದೀಪದ ಒಡ್ಡುವಿನಲ್ಲಿ ನಡೆದ ಮಲೆಮಹಧೇಶ್ವರರ ಜ್ಯೋತಿ ದರ್ಶನಕ್ಕೆ ಭಕ್ತ ಸಾಗರೆವೇ ಹರಿದು ಬಂದಿತ್ತು. ಇದೇ ಸಂದರ್ಭದಲ್ಲಿ ಭಕ್ತರು ಮಹದೇಶ್ವರ ಸ್ವಾಮಿಯ ಭಕ್ತಿ ಗೀತೆ ಹಾಗೂ ಭಾವ ಗೀತೆಗಳನ್ನು ಹಾಡುವ ಮೂಲಕ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು.
ತೆಪ್ಪೋತ್ಸವ: ಹರಕೆ ಹೊತ್ತ ಭಕ್ತರಿಂದ ಹುಲಿವಾಹನ ಉತ್ಸವ, ಬಸವ ವಾಹನ ಉತ್ಸವ, ಬೆಳ್ಳಿ ಕಿರಿಟ ಮತ್ತು ಬಂಗಾರದ ರಥೋತ್ಸವ ಸೇರದಂತೆ ವಿವಿಧ ಉತ್ಸವಗಳು ವಿಜೃಂಭಣೆಯಿಂದ ನಡೆದವು. ರಾತ್ರಿ 10 ಗಂಟೆ ನಂತರ ದೊಡ್ಡ ಕೊಳದಲ್ಲಿ ವಿದ್ಯುತ್ ದೀಪಾಲಂಕಾರಗಳಿಂದ ವಿಶೇಷವಾಗಿ ಸಿಂಗರಿಸಲ್ಪಟ್ಟಿದ್ದ ಪಲ್ಲಕ್ಕಿಯಲ್ಲಿ ಮಲೆಮಹದೇಶ್ವರ ಉತ್ಸವ ಮೂರ್ತಿಯನ್ನಿಟ್ಟು ಮೆರವಣಿಗೆ ಮಾಡಲಾಯಿತು. ವಿವಿಧ ಹೂವುಗಳಿಂದ ಸಿಂಗರಿಸಲ್ಪಟ್ಟಿದ್ದ ಪಲ್ಲಕ್ಕಿ ತೆಪ್ಪೋತ್ಸವ ನೋಡುಗರ ಕಣ್ಮನ ಸೆಳೆಯಿತು. ಮಲೆಮಹದೇಶ್ವರ ಸ್ವಾಮಿಗೆ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಗಳು ಜರುಗಿದವು.

Leave a Comment