ಮಲೆಂಗಲ್ಲು ಸಾರ್ವಜನಿಕ ಶಾರದೋತ್ಸವ

ಮಂಗಳೂರು, ಅ.೯- ಪದ್ಮುಂಜ ಫ್ರೆಂಡ್ಸ್ ಕ್ಲಬ್ ಮಲೆಂಗಲ್ಲು ಆಶ್ರಯದಲ್ಲಿ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ನಡೆಯಿತು. ಮಲೆಂಗಲ್ಲು ದೇವಸ್ಥಾನದ ಪ್ರಧಾನ ಅರ್ಚಕ ವಿಜಯಕುಮಾರ ತಂತ್ರಿ ವೈದಿಕ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ವಾಚನ, ಮೂರ್ತಿ ಪ್ರತಿಷ್ಟಾಪನೆ ಹಾಗೂ ಗಣಪತಿ ಹೋಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ಸ್ಥಳೀಯರಿಗೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸಾಯಂಕಾಲ ಭಜನಾ ಮಂಡಳಿ ವಠಾರದಿಂದ ಪದ್ಮುಂಜ ಪೇಟೆ ಕೊರಿಂಜ ದೇವಸ್ಥಾನದ ಮಾರ್ಗವಾಗಿ ಭವ್ಯ ಶೋಭಾಯಾತ್ರೆ ನಡೆದು ನನ್ಯ ಕೆರೆಯಲ್ಲಿ ದೇವರ ವಿಸರ್ಜನಾ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ಪದಾಧಿಕಾರಿಗಳಾದ ಪ್ರದೀಪ್ ಶೆಟ್ಟಿ ಮಲೆಂಗಲ್ಲು, ದಾಮೋದರ್, ರವಿ ಕುಮಾರ್, ರಾಜೀವ ರೈ ಮೊಗೆರೋಡಿ, ರಾಜೇಶ್ ಶೆಟ್ಟಿ ಅಡೆಂಜ, ಸಂದೀಪ್ ಗೌಡ ಮಲೆಂಗಲ್ಲು,ದಿನೇಶ್ ಅಂತರ, ಪ್ರತೀಕ್ ಜೈನ, ನಿತಿನ್ ಕುಮಾರ್, ಶರತ್ ಮೊಗೆರೋಡಿ ಮೊದಲಾದವರಿದ್ದರು.

Leave a Comment