ಮರ ಕಡಿದು ಮಾರಾಟ: ಆರೋಪಿ ಪೇದೆ ಪರಾರಿ

ಕಾರವಾರ, ಫೆ 10-  ಅರಣ್ಯದಿಂದ ಬೆಲೆಬಾಳುವ ಮರಕಡಿದು ಸಂಗ್ರಹಿಸಿ ನಂತರಕದ್ದು ಮಾರಾಟ ಮಾಡುತ್ತಿದ್ದ ಜೊಯಿಡಾದ ಪೋಲಿಸ್ ಇಲಾಖೆಯ “ಮರಿ ವೀರಪ್ಪನ್”ನಂತಿರುವ  ಪೋಲಿಸ್ ಪೇದೆಯೊಬ್ಬನ ಬಣ್ಣ ಬಯಲಾಗುತ್ತಿದ್ದಂತೆ ಬಂಧನದ ಭೀತಿಯಿಂದ ನಾಪತ್ತೆಯಾದಘಟನೆ ನಡೆದಿದೆ.
ಜೊಯಿಡಾದಗುಪ್ತಚರಇಲಾಖೆಯಲ್ಲಿ ಕಾನಸ್ಟೇಬಲ್ ಆದಗುರುರಾಜ್‍ಎಂಬಾತನೇ ಈ ಅಕ್ರಮದಲ್ಲಿ ತೊಡಗಿದ್ದ ವ್ಯಕ್ತಿ. ಕಳೆದ ಸುಮಾರು ಏಳು ವರ್ಷಗಳಿಂದ ಜೊಯಿಡಾ ಪೋಲಿಸ್ ಠಾಣೆಯಲ್ಲಿ ಪೇದೆಯಾಗಿದ್ದ ಈತ ಇತ್ತಿಚೇಗಷ್ಟೇ ಗುಪ್ತದಳ ವಿಭಾಗಕ್ಕೆ ವರ್ಗವಾಗಿದ್ದ. ಅರಣ್ಯ ಸಂಪದ್ಭರಿತವಾದ ಜೊಯಿಡಾ ಕಾಡಿನಲ್ಲಿ ಸಿಗುವ ಅತ್ಯಂತ ಬೆಲೆಬಾಳುವ ಸೀಸಂ, ಸಾಗವಾನಿ ಮರಗಳನ್ನು ಕಾಡಿನಲ್ಲಿಯೇ ಕಡಿದು ತನ್ನ ಸಹಚರ ಉದಯ್ ಎಂಬಾತನೊಂದಿಗೆ ಸೇರಿ ಪೀಠೋಪಕರಣ ತಯಾರಿಸಿ ಅಥವಾ ಹಾಗೇಯೇ ಕಟ್ಟಿಗೆಯನ್ನು ಮಾರಾಟ ಮಾಡುತ್ತಿದ್ದ.
ಈತನ ಕಳ್ಳ ವ್ಯವಹಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸಿಪಿಐ ರಮೇಶ ಹೂಗಾರ್, ಡಿಸಿಐಬಿ ಪೋಲಿಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಗುರುರಾಜ್‍ನ ವಸತಿ ನಿಲಯಕ್ಕೆ ದಾಳಿ ನಡೆಸಿ ಅಪಾರ ಪ್ರಮಾಣದ ಕಟ್ಟಿಗೆಯನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ಮುನ್ಸೂಚನೆ ತಿಳಿದಿದ್ದ ಆರೋಪಿ ಗುರುರಾಜ್ ಪರಾರಿಯಾಗಿದ್ದಾನೆ.

Leave a Comment