ಮರ್ಪಕ ವಿದ್ಯುತ್ ಪೂರೈಕೆಗೆ ರೈತ ಸಂಘ ಆಗ್ರಹ

ಬಳ್ಳಾರಿ, ಸೆ.11: ಕಾಲುವೆಗಳಿಗೆ ನೀರು ಬಿಡಲಾಗಿದೆ. ನದಿ ಹಳ್ಳ ಕೊಳ್ಳಗಳಿಗೆ ನೀರು ಬಂದಿದೆ. ಈಗ ಸಸಿ ನಾಟಿ ಕಾರ್ಯ ನಡೆದಿದೆ ಹಾಗಾಗಿ ನೀರಾವರಿ ಪಂಪ್ ಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕೆಂದು ರೈತ ಸಂಘ ಆಗ್ರಹಿಸಿದೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಸಂಘದ ಜಿಲ್ಲಾ ಅಧ್ಯಕ್ಷ ನಾರಾಯಣರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್ ಅವರು, ಪ್ರತಿದಿನ 10 ತಾಸು ವಿದ್ಯುತ್ ನೀಡಲಿದೆಂದು ಹೇಳಲಾಗುತ್ತದೆ. ಆದರೆ ಹಗಲು ವೇಳೆ ಸಮರ್ಪಕವಾಗಿ ಸರಬರಾಜು ಮಾಡಿದೆ. ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆ ಇದರಿಂದ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಮಸ್ಯೆಯಾಗುತ್ತದೆ. ಅದಕ್ಕಾಗಿ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಬೇಕೆಂದರು.

ಕಳೆದ ವರ್ಷ ನೆರೆ ಪ್ರವಾಹ ಉಂಟಾದಾಗ ಮೋದಿ ಅವರು ತೆಲಂಗಾಣ, ತಮಿಳು ನಾಡಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಿದ್ದರು. 26 ಸಂಸದರು ಕರ್ನಾಟಕದಿಂದ ಇದ್ದರೂ ಈ ವರೆಗೆ ಪರಿಹಾರ ನೀಡಿಲ್ಲ ತಕ್ಷಣ ರಾಷ್ಟ್ರೀಯ ವಿಪತ್ತಿನಡಿ ಪರಿಹಾರ ಹಣ ನೀಡಬೇಕೆಂದರು.

ದಿನನಿತ್ಯ ಮೋದಿ ಪಕ್ಕದಲ್ಲಿಯೇ ಓಡಾಡುವ ರಾಜ್ಯದ ಸಚಿವರಾದ ಪ್ರಹ್ಲಾದ ಜೋಷಿಯವರು ಪರಿಹಾರದ ಬಗ್ಗೆ ಕೇಳಲು ಬಾಯಲ್ಲಿ ಏನು ಇಟ್ಟುಕೊಂಡಿದ್ದಾರೆಂದ ಅವರು ಈಗ ಕೊಟ್ಟಿರುವ ಪರಿಹಾರವೇ ಹೆಚ್ಚು ಎನ್ನುವ ಈಶ್ವರಪ್ಪ ಅವರು ತಮ್ಮ ಮನೆಯಿಂದ ಹೆಚ್ಚಿನ ಹಣ ಕೊಡುತ್ತಾರ ಎಂದು ಪ್ರಶ್ನಿಸಿ ಅವರು ತಮ್ಮ ಗೂಂಡಾ ಪ್ರವೃತ್ತಿ ನಿಲ್ಲಿಸಬೇಕೆಂದು ನೆರೆಯಿಂದ ಬಿದಿರುವ ಮನೆಗಳಿಗೆ ತಲಾ 10 ಲಕ್ಷ ನೀಡಬೇಕೆಂದರು. ಬರಗಾಲವೂ ಕೆಲವು ಕಡೆ ಆವರಿಸಿದೆ. ಕಳೆದ ವರ್ಷದ ಪರಿಹಾರ ಈಗ ಬಿಡುಗಡೆ ಮಾಡಿದೆ. ಈ ವರ್ಷದ್ದು ಯಾವಾಗ ಎಂದ ಅವರು ತುಂಗಭದ್ರ ಜಲಾಶಯ ತುಂಬಿ ಉಕ್ಕಿ ಹರಿಯುತ್ತಿದ್ದರೂ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ಕೆಳಭಾಗದ ರೈತರ ಜಮೀನಿಗೆ ಇನ್ನು ನೀರು ಬರುತ್ತಿಲ್ಲ. ಸಿರುಗುಪ್ಪದ ನೀರಾವರಿ ಇಲಾಖೆ ಇಂಜಿನೀಯರ್ ಅದೆಪ್ಪ ಕಾಲುವೆ ಮೇಲೆ ಬಂದು ರೈತರ ಸಂಕಷ್ಟ ನೆರವಾಗುತ್ತಿಲ್ಲ ಎಂದ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರುಗಳಾದ ಬಿ.ವಿ.ಗೌಡ, ರೇವಣ್ಣ ಸಿದ್ದಪ್ಪ, ಅಬ್ದುಲ್ ಸಾಬ್ ಮೊದಲಾದವರು ಇದ್ದರು.

Leave a Comment