ಮರ್ಡರಿ ಮಿಸ್ಟ್ರಿ ರೋಚಕತೆ

ಚಿಕ್ಕನೆಟಕುಂಟೆ ಜಿ.ರಮೇಶ್

ತಂದೆ-ಮಗನ ಬಾಂಧ್ಯವಕ್ಕೆ ಓತ್ತು ನೀಡಿರುವ ಆಕ್ಷನ್ ಥ್ರಿಲ್ಲರ್ ಜೊತೆಗೆ ಮರ್ಡರಿ ಮಿಸ್ಟರಿ ಇರುವ ’ರಾಜಣ್ಣನ ಮಗ’ ಚಿತ್ರ ಚಿತ್ರೀಕರಣ ಪೂರ್ಣಗೊಳಿಸಿದ್ದು ಬಿಡುಗಡೆಯ ಹಂತಕ್ಕೆ ಬಂದಿದೆ.

ಬಡತನದ ಬೇಗೆಯಲ್ಲಿ ಬೆಂದರೂ ಮಕ್ಕಳನ್ನು ಪ್ರೀತಿಯಿಂದ ಸಾಕುವ ತಂದೆ. ಒಂದು ಹಂತದಲ್ಲಿ ಎದುರಾಗುವ ಕಂಟಕದಿಂದ ಇಡೀ ಕುಟುಂಬ ಆಘಾತ ಅನುಭವಿಸಲಿದೆ. ಆ ಬಳಿಕ ಮುಂದೇನು ಎನ್ನುವುದನ್ನು ನಿರ್ಮಾಕರೂ ಆಗಿರುವ ನಟ ಹರೀಶ್ ಸಂದೇಶಾತ್ಮಕ ಚಿತ್ರವನ್ನು ತೆರೆಯ ಮೇಲೆ ತರಲು ಮುಂದಾಗಿದ್ದಾರೆ.

“ಜಸ್ಟ್ ಮದ್ವೇಲಿ’ ಚಿತ್ರದ ಬಳಿಕ ಹರೀಶ್ ನಾಯಕರಾಗಿ ನಿರ್ಮಾಪಕರಾಗಿರುವ ಎರಡನೇ ಚಿತ್ರ ಇದು. ಬಹಳ ದಿನಗಳ ನಂತರ ಈ ಚಿತ್ರದ ಮೂಲಕ ಹಿರಿಯ ನಟ ಚರಣ್ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಜೀವನದಲ್ಲಿ ಕಷ್ಟಗಳನ್ನು ಎದುರಿಸಿದರೂ ಮಕ್ಕಳಿಗೆ ಯಾವುದೇ ತೊಂದರೆ ಯಾಗಬಾರದೆನ್ನುವ ಜವಬ್ದಾರಿಯುತ ಪಾತ್ರ.

lahari-photo-new-1-01c

ಚರಣ್ ರಾಜ್ ಅವರಲ್ಲದೆ ಉಗ್ರಂ ಮಂಜು, ಕರಿಸುಬ್ಬು, ರಾಜು ರೆಡ್ಡಿ, ಶರತ್ ಲೋಹಿತಾಶ್ವ, ತುಮಕೂರು ಮೋಹನ್ ಸೇರಿದಂತೆ ಹಿರಿ ಕಿರಿಯ ತಾರಾಗಣವೇ ಚಿತ್ರದಲ್ಲಿದ್ದು ಚಿತ್ರಕ್ಕೆ ನಾಯಕಿಯಾಗಿ ಅಕ್ಷತಾ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಕೋಲಾರ ಸೀನು ಆಕ್ಷನ್ ಕಟ್ ಹೇಳಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಈ ತಿಂಗಳಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಅಕ್ಟೋಬರ್ ಮೊದಲ ಇಲ್ಲವೆ ಎರಡನೇ ವಾರ ಚಿತ್ರವನ್ನು ತೆರೆಗೆ ತರುವ ಉದ್ದೇಶ ಹರೀರ್ಶ ಮತ್ತು ಚಿತ್ರತಂಡದ್ದು.

lahari-photo-new-1-01a ಚಿತ್ರ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಹರೀಶ್,ತಂದೆ ಮಗನ ಬಾಂಧವ್ಯದ ಸುತ್ತ ಚಿತ್ರ ಸಾಗಲಿದೆ. ಜೊತೆಗೆ ಮರ್ಡರ್ ಮಿಸ್ಟ್ರಿಯೂ ಇದೆ. ಮಕ್ಕಳಿಗೆ ಯಾವುದೇ ತೊಂದರೆ ಎದುರಾಗಬಾರದೆಂದು ಪ್ರೀತಿಯಿಂದ ಮಕ್ಕಳನ್ನು ಬೆಳಸುವ ತಂದೆ ಒಂದು ಹಂತದಲ್ಲಿ ಮಗನ ಕೊಲೆ ಮಾಡಿದ ವಿಷಯ ತಿಳಿದು ಆಘಾತಕ್ಕೆ ಒಳಗಾಗುತ್ತಾನೆ ಇದರಿಂದ ಆಕಾಶವೇ ಕಳಚಿ ಬಿದ್ದಂತಾಗಲಿದೆ.

ಈ ಹಂತದಲ್ಲಿ ಇಡೀ ಕುಟುಂಬ ಮಗನನ್ನು ದೂರ ಮಾಡುತ್ತದೆ. ಆ ನಂತರ ತಂದೆ ಮತ್ತು ಮಗ ಒಳ ಒಳಗೆ ಪಡುವ ಯಾತನೆ ಅಷ್ಟಿಷ್ಟಲ್ಲ. ಅದನ್ನು ಚಿತ್ರದಲ್ಲಿ ಮನೋಜ್ಞವಾಗಿ ನಿರ್ದೇಶಕರು ಚಿತ್ರಿಸಿಕೊಟ್ಟಿದ್ದಾರೆ. ಚಿತ್ರವನ್ನು ಬೆಂಗಳೂರು, ಕುಂದಾಪುರ ಸೇರಿದಂತೆ ವಿವಿದ ಕಡೆ ೭೫ ದಿನಗಳ ಕಾಲ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ. ಅಪ್ಪ ಮಗನ ಬಾಂಧವ್ಯದ ಜೊತೆಗೆ ಪ್ರೀತಿ, ಪ್ರೇಮ್, ಆಕ್ಷನ್‌ಗೆ ಒತ್ತು ನೀಡಿ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದೇವೆ. ಚಿತ್ರಕ್ಕೆ ಮತ್ತು ತಂಡಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎನ್ನುತ್ತಾರೆ ಹರೀಶ್.

ಸದಭಿರುಚಿಯ ಚಿತ್ರ ನೀಡುವ ಉದ್ದೇಶದಿಂದ ಇಡೀ ತಂಡ ಹಗಲಿರುಳು ಶ್ರಮಿಸಿದೆ. ಚರಣ್ ರಾಜ್ ತಂದೆಯಾಗಿ ಕಾಣಿಸಿಕೊಂಡಿದ್ದಾರೆ.ಜೊತೆಗೆ ಎಲ್ಲಾ ಪಾತ್ರಗಲೂ ಪೂರಕವಾಗಿ ಬಂದಿವೆ ಎಂದು ಹೇಳಿಕೊಂಡರು.

Leave a Comment