ಮರುಮದುವೆ ಇಲ್ಲ ಒಂಟಿತನದ ಬದುಕಿನಲ್ಲಿ ಖುಷಿ ಹೃತಿಕ್ ರೋಶನ್ ಉವಾಚ

ಹದಿನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿದ ಬಳಿಕ ಪತ್ನಿ ಸೂಸನ್ನೇ ಖಾನ್‌ನಿಂದ ವಿಚ್ಛೇಧನ ಪಡೆದಿದ್ದ ಬಾಲಿವುಡ್ ನಟ ಹೃತಿಕ್ ರೋಶನ್,ಕಳೆದ ಎರಡು ವರ್ಷಗಳಿಂದ ಏಕಾಂಗಿ ಜೀವನ ನಡೆಸುತ್ತಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಇಬ್ಬರು ಪುತ್ರರ ಜೊತೆ ಕಾಲ ಕಳೆಯುತ್ತಾ ಚಿತ್ರೀಕರಣದಲ್ಲಿಯೂ ಬ್ಯುಸಿಯಾಗಿದ್ದಾರೆ.

ಪತ್ನಿ ಸೂಸನ್ನೆ ಖಾನ್‌ಗೆ ವಿಚ್ಛೇಧನ ನೀಡಿದ ಎರಡು ವರ್ಷಗಳು ಕಳೆದಿದ್ದು ಈ ಅವಧಿಯಲ್ಲಿ ಏಕಾಂಗಿಯಾಗಿ ನೆಮ್ಮದಿಯಿಂದ ಇದ್ದೇನೆ. ಹೀಗಾಗಿ ಮರುಮದುವೆಯಾಗುವ ಯಾವುದೇ ಪ್ರಸ್ತಾಪ ನನ್ನ ಮುಂದೆ ಇಲ್ಲ ಎಂದು ಬಾಲಿವುಡ್ ನಟ ಹೃತಿಕ್ ರೋಶನ್ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಮಕ್ಕಳ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಿದ್ದು, ಆ ಸಮಾರಂಭಕ್ಕೆ ಮಾಜಿ ಪತ್ನಿ ಸೂಸನ್ನೆ ಕೂಡ ಭಾಗವಹಿಸಿದ್ದರು. ಜೊತೆಗೆ ಕುಟುಂಬದ ಜೊತೆ ಹಾಯಾಗಿ ಕಾಲ ಕಳೆದು ಬಂದಿದ್ದಾರೆ. ಸಮಾರಂಭದಲ್ಲಿ ಖುಷಿ ಖುಷಿಯಾಗಿ ಎಲ್ಲರೂ ಕಾಲ ಕಳೆದಿದ್ದಾರೆ.
ನೆವಿ ಬ್ಲೂ ಫುಲ್ ಟೀಶರ್ಟ್‌ನಲ್ಲಿ ಹೃತಿಕ್ ಮಿಂಚಿದರೆ, ಮಾಜಿ ಪತ್ನಿ ಸೂಸನ್ನೆ ಖಾನ್ ಬಿಳಿ ಬಣ್ಣದ ಡ್ರೆಸ್‌ನಲ್ಲಿ ಕಂಗೊಳಿಸಿದ್ದಾರೆ. ಇವರಿಬ್ಬರನ್ನು ನೋಡಿದ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ನಿಜಕ್ಕೂ ಹೃತಿಕ್ ಮತ್ತು ಸೂಸನ್ನೆ ವಿಚ್ಛೇಧನ ಪಡೆದಿದ್ದಾರಾ? ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದರು.
ಇದಕ್ಕೆ ಪೂರಕ ಎನ್ನುವಂತೆ ಹೃತಿಕ್ ರೋಷನ್ ತನ್ನ ಟೀ ಶರ್ಟ್ ಮೇಲೆ ಇದ್ದ ಎರಡು ಪದ ಎಲ್ಲರ ಗಮನ ಸೆಳೆದಿತ್ತು.ಅದುವೇ ’ಪ್ರೀತಿ’ಮತ್ತು ’ಶಾಂತಿ’.
ಮಾಜಿ ಪತಿ ಪತ್ನಿ ಜೊತೆ ಜೊತೆಯಾಗಿ ಕಾಲ ಕಳೆಯುತ್ತಿದ್ದ ಹಿನ್ನೆಲೆಯಲ್ಲಿ ಮರು ಮದುವೆಯಾಗುವ ಆಲೋಚನೆ ಇದೆಯೇ ಎನ್ನುವ ಪ್ರಶ್ನೆ ಹೃತಿಕ್ ಅವರನ್ನು ಸ್ನೇಹಿತರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹೃತಿಕ್ ರೋಶನ್, ಒಂಟಿತನದಲ್ಲಿ ನೆಮ್ಮದಿ ಕಾಣುತ್ತಿದ್ದೇನೆ. ಇಬ್ಬರು ಮುದ್ದಾದ ಮಕ್ಕಳ ಜೊತೆ ಆರಾಮವಾಗಿ ಕಾಲ ಕಳೆಯುತ್ತಿದ್ದೇನೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಒಂಟಿಯಾಗಿದ್ದೇನೆ ಎಂದು ನನಗೆ ಅನ್ನಿಸಿಲ್ಲ. ಅಷ್ಟರ ಮಟ್ಟಿಗೆ ಕುಟುಂಬದ ಸದಸ್ಯರು ನೋಡಿಕೊಂಡಿದ್ದಾರೆ.
ಮರುಮದುವೆಯ ಬಗ್ಗೆ ಯೋಚನೆಯನ್ನೂ ಮಾಡಿಲ್ಲ. ಆ ಬಗ್ಗೆ ಯೋಚನೆ ಮಾಡಲು ನನಗೆ ಸಮಯವೂ ಇಲ್ಲ. ಮಕ್ಕಳೊಂದಿಗೆ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದೇನೆ. ಜೀವನದಲ್ಲಿ ನೆಮ್ಮದಿ ಮತ್ತು ಸಂತೋಷ ಸಿಕ್ಕಿರುವಾಗ ಮರುಮದುವೆ ಬಗ್ಗೆ ಯಾಕೆ ಯೋಚನೆ ಮಾಡಬೇಕು ಅಲ್ಲವೇ ಎಂದು ಮರು ಪ್ರಶ್ನಿಸಿದ್ದಾರೆ ಹೃತಿಕ್.
ಒಂಟಿಯಾಗಿಯೇ ನಮ್ಮದಿಯ ಜೀವನ ಸಾಗಿಸುತ್ತಿದ್ದೇನೆ. ಹೀಗಾಗಿ ಮರುಮದುವೆ ಇಲ್ಲವೆ ಮತ್ತೊಂದು ಮದುವೆಯ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಿಲ್ಲ. ಸದ್ಯಕ್ಕೆ ಆ ಕಡೆ ಗಮನವೂ ಹರಿಸುವುದಿಲ್ಲ ಎಂದಿದ್ದಾರೆ.
ಈ ತಿಂಗಳ ಅಂತ್ಯದಲ್ಲಿ ಸಂಜಯ್ ಗುಪ್ತ ನಿರ್ದೇಶನದ ಚಿತ್ರ “ಕಬಿಲ್” ತೆರೆಗೆ ಬರುತ್ತಿದೆ. ಅದರ ಬಗ್ಗೆ ಗಮನ ಹರಿಸಿದ್ದೇನೆ. ನನ್ನ ಚಿತ್ರ ಬಿಡುಗಡೆಯ ದಿನವೇ ಶಾರುಖ್ ಖಾನ್ ಅವರ ’ರಾಯೀಸ್” ಕೂಡು ಬಿಡುಗಡೆಯಾಗುತ್ತಿದೆ. ಹಾಗಂತ ಪೈಪೋಟಿ ಏನೂ ಇಲ್ಲ ಎಂದು ಹೃತಿಕ್ ಹೇಳಿದ್ದಾರೆ.

Leave a Comment