ಮರವಂತೆ-ತ್ರಾಸಿ ಬೀಚ್‌ನಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ

ಕುಂದಾಪುರ, ಮೇ ೧೫- ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿ ರುವ ಮರವಂತೆ ಸಮುದ್ರ ತೀರ ಪ್ರದೇಶದಲ್ಲಿ ಪ್ರತಿ ವರ್ಷ ಸಂಭವಿಸುವ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕರೆಗೋಡೆಗಳ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರ ಜೊತೆ ಬೀಚ್ ಸೌಂದರ್ಯ ಹೆಚ್ಚಿಸುವ ಕಾರ್ಯ ಕೂಡ ನಡೆಯುತ್ತಿದೆ.
ಮರವಂತೆ ತ್ರಾಸಿ ಬೀಚ್‌ನ ಕೆಲವೇ ಮೀಟರ್ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ ಹಾದು ಹೋಗಿರುವುದರಿಂದ ಹಲವು ವರ್ಷಗಳಿಂದ ಕಡಲ್ಕೊರೆತ ತಡೆಗೆ ಶಿಲೆ ಕಲ್ಲುಗಳನ್ನು ಜೋಡಿಸಲಾಗುತ್ತಿತ್ತು. ಆದರೆ ಇದು ನಿರೀಕ್ಷಿತ ಯಶಸ್ಸು ಸಿಗದೆ ಮಳೆಗಾಲದಲ್ಲಿ ಕಡಲಿನ ಅಬ್ಬರಕ್ಕೆ ಹೆದ್ದಾರಿ ಕೂಡ ತತ್ತರಿಸಿ ಹೋಗುತ್ತಿತ್ತು. ಅಲ್ಲದೆ ಕಲ್ಲುಗಳು ಸಮುದ್ರ ಪಾಲಾಗುತ್ತಿದ್ದವು. ಇದರಿಂದ ಈ ಬೀಚ್‌ನಲ್ಲಿ ಕಡಲ್ಕೊರೆತ ಸಮಸ್ಯೆ ಪ್ರತಿವರ್ಷವೂ ಪುನಾರ ವರ್ತನೆಯಾಗುತ್ತಿತ್ತು. ಈ ಎಲ್ಲ ಕಾರಣಕ್ಕಾಗಿ ಇಲ್ಲಿ ಶಾಶ್ವತ ತಡೆಗೋಡೆ ನಿರ್ಮಿ ಸುವ ನಿಟ್ಟಿನಲ್ಲಿ ಸುಸ್ಥಿರ ಕರಾವಳಿ ತೀರ ಸಂರಕ್ಷಣೆ ಹಾಗೂ ನಿರ್ವಹಣಾ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದೀಗ ಕಾಮಗಾರಿ ಭರದಿಂದ ಸಾಗುತ್ತಿದೆ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಹಾಗೂ ಕಡಲತೀರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ರಕ್ಷಣೆಗಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್(ಎಡಿಬಿ) ನೆರವಿನಿಂದ ೩.೫೦ಕಿ.ಮೀ. ಉದ್ದದ ಕಡಲತೀರದಲ್ಲಿ ೮೮ ಕೋ.ರೂ. ವೆಚ್ಚದಲ್ಲಿ ಈ ಯೋಜನೆಯ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇಲ್ಲಿ ಕಡಲತೀರದುದ್ದಕ್ಕೂ ಶಿಲೆಕಲ್ಲುಗಳನ್ನು ಜೋಡಿಸುವ ಬದಲು ಮುಂಬೈ ನಗರದಲ್ಲಿರುವ ಮಾದರಿಯಂತೆ ಸಮುದ್ರ ತೀರಕ್ಕೆ ಲಂಬವಾಗಿ ಗ್ರಾಯನ್ ಅಥವಾ ಕರೆಗೋಡೆ ನಿರ್ಮಾಣಗಳನ್ನು ರಚಿಸಲಾಗುತ್ತಿದೆ. ಇದು ತೀರ ಪ್ರದೇಶದ ಸವಕಳಿಯನ್ನು ತಡೆಯುವುದರ ಜೊತೆಗೆ ಒಂದು ಬದಿ ಶೇಖರಣೆ ಯಾಗುವ ಮರಳಿನ ಕಾರಣ ಸಮುದ್ರ ಹಿಂದಕ್ಕೆ ಸರಿದು ಮರಳಿನ ದಂಡೆ ವಿಸ್ತಾರಗೊಳ್ಳುತ್ತದೆ ಎಂಬುದು ತಂತ್ರಜ್ಞರ ಅಭಿಪ್ರಾಯವಾಗಿದೆ. ಈ ಕರೆಗೋಡೆಗಳನ್ನು ಸ್ಥಳದಲ್ಲಿಯೇ ತಯಾರಿಸಿ ಜೋಡಿಸಲಾಗುತ್ತಿದೆ. ಈ ಹೊಸ ವಿಧಾನದಿಂದ ತ್ರಾಸಿ ಬೀಚ್‌ನ ಸೌಂದರ್ಯ ಕೂಡ ಹೆಚ್ಚಾಗುತ್ತದೆ. ಇದರಿಂದ ಬೀಚ್ ಸೌಂದರ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನು ತ್ತಾರೆ ಅಧಿಕಾರಿಗಳು. ಈ ಸಂಬಂಧ ಈಗಾಗಲೇ ಶೇ.೩೦ ಕಾಮಗಾರಿ ಪೂರ್ಣ ಗೊಂಡಿದ್ದು, ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ.

 

Leave a Comment