ಮರಳು ಗಣಿಗಾರಿಕೆ: ನ್ಯಾಯಾಂಗ ತನಿಖೆಗೆ ಬಿಜೆಪಿ ಆಗ್ರಹ

 

ಕಲಬುರಗಿ ನ 8: ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದ ಭೀಮಾನದಿ ತೀರದಗುಂಟ ನಡೆಯುತ್ತಿರುವ ಮರಳು ಗಣಿಗಾರಿಕೆಯು ಅಕ್ರಮವಾಗಿ ನಡೆಯುತ್ತಿದ್ದು, ನ್ಯಾಯಾಂಗ ತನಿಖೆಗೆ ಅಫಜಲಪುರ ತಾಲೂಕು ಬಿಜೆಪಿ ಆಗ್ರಹಿಸಿದೆ ,

ಜಿಪಂ ಮಾಜಿ ಅಧ್ಯಕ್ಷ ,ಬಿಜೆಪಿ ಮುಖಂಡ ನಿತೀನ್ ಗುತ್ತೇದಾರ ಮತ್ತು ಭಾಜಪ ಓಬಿಸಿ ರಾಜ್ಯ ಉಪಾಧ್ಯಕ್ಷ ಅವ್ವಣ್ಣ ಮ್ಯಾಕೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಇಲ್ಲಿನ ಮರಳು ಗುತ್ತಿಗೆಕಾರ್ಯ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಸರಕಾರದ ಬೊಕ್ಕಸಕ್ಕೆ ಸುಮಾರು 181 ಕೋಟಿ ರೂ ನಷ್ಟವಾಗುತ್ತಿದೆ.1 ಕ್ವಿಂಟಾಲು ಮರಳು ಪಡೆಯಲು 845 ರೂ ಗುತ್ತಿಗೆ ಪಡೆದಿರುತ್ತಾರೆ. ಆದರೆ ಗುತ್ತಿಗೆದಾರ ಕನಿಷ್ಟ 1 ಸಾವಿರರೂ ಗೆ ಒಂದು ಕ್ವಿಂಟಾಲು  ಎಂದು ಮಾರಿದರೂ ಇದನ್ನು ಖರೀದಿಸುವದು ಜನಸಾಮಾನ್ಯರಿಗೆ ಸಾಧ್ಯವಾಗುವದಿಲ್ಲ,ಗುತ್ತಿಗೆದಾರ ಸೇರಿದಂತೆ ಅನೇಕರಿಗೆ  ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಗುತ್ತಿಗೆಯನ್ನು ಸಂಪೂರ್ಣ ರದ್ದುಪಡಿಸಲು ಜಿಲ್ಲಾಡಳಿತಕ್ಕೆ ಆಗ್ರಹಿಸುತ್ತೇವೆ ಎಂದರು.

ಜಿಪಂ ಸದಸ್ಯ ಅರುಣಕುಮಾರ ಪಾಟೀಲರು ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೀಳುಮಟ್ಟದ ರಾಜಕೀಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರರು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸ್ಟೇಷನ್ ಗಾಣಗಾಪುರದಲ್ಲಿ ಯಾತ್ರಿಕರ ಅನುಕೂಲಕ್ಕೆ ಜಮೀನನ್ನು ದೇಣಿಗೆಯಾಗಿ ನೀಡಿದ್ದಾರೆಯೇ, ಹೊರತು ತಮ್ಮ ಸ್ವಂತಕ್ಕಾಗಿ ಅಲ್ಲಿ ಕಟ್ಟಡ ಕಟ್ಟುತ್ತಿಲ್ಲ. ನಿರಂತರ ಜ್ಯೋತಿ ವಿದ್ಯುತ್ ಅಕ್ರಮವಾಗಿ ಪಡೆದಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಸಂಗಮೇಶ್ವರ ದೇವಸ್ಥಾನಕ್ಕೆ ನಿರಂತರ ಜ್ಯೋತಿ ಪಡೆದದ್ದು ಭಕ್ತರಿಗಾಗಿ ಎಂದು ಸ್ಪಷ್ಟಪಡಿಸಿದರು…

Leave a Comment