ಮರದಿಂದ ಬಿದ್ದು ವ್ಯಕ್ತಿ ಸಾವು

ಚಾಮರಾಜನಗರ, ಸೆ.11- ಎಳನೀರು ಕೀಳಲು ಮರವೇರಿದ್ದ ವ್ಯಕ್ತಿ ಆಯಾ ತಪ್ಪಿ ಬಿದ್ದು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಚಾಮರಾಜನಗರದ ಅಮಚವಾಡಿ ಗ್ರಾಮದಲ್ಲಿ ನಡೆದಿದೆ.
ಅಮಚವಾಡಿ ಗ್ರಾಮದ ನಿವಾಸಿ ಮಹದೇವ ಶೆಟ್ಟಿ(55) ಎಂಬಾತನೇ ಮೃತಪಟ್ಟ ದುರ್ದೈವಿ ವ್ಯಕ್ತಿ.
ಎಳನೀರು ನೀರು ಕೀಳಲೆಂದು ಮರವೇರಿದ ಮಹದೇವ ಶೆಟ್ಟಿ ಆಯಾ ತಪ್ಪಿ ಕೆಳಗೆ ಬಿದ್ದ ರಭಸಕ್ಕೆ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment