ಮರಗಳಿಂದ ಉತ್ತಮ ವಾತಾವರಣ ನಿರ್ಮಾಣ: ಜಯಚಂದ್ರ

ಸಿರಾ, ಜು. ೧೭- ಮಡಿಲು ಮತ್ತು ವನ ಮಹೋತ್ಸವ ಒಂದಕ್ಕೊಂದು ಸಂಬಂಧ ಇದೆ. ತಾಯಿ ಹೆತ್ತ ಮಗುವಿಗೆ ಉತ್ತಮ ವಾತಾವರಣ ನೀಡಲು ಮರಗಳಿಂದ ಸಾಧ್ಯ. ಹಾಗಾಗಿ ಇದು ಒಂದಕ್ಕೊಂದು ಸಂಬಂಧ ಇರುವ ಕಾರ್ಯಕ್ರಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಬಣ್ಣಿಸಿದರು.

ತಾಲ್ಲೂಕಿನ ತಾವರೆಕೆರೆ ಗ್ರಾಮದಲ್ಲಿ ಏರ್ಪಡಿಸಿದ್ದ ಮಡಿಲು ಮತ್ತು ವನಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೆಣ್ಣುಮಕ್ಕಳಿಗೆ ಸೀಮಂತ ಮಾಡುವ ಕಾರ್ಯಕ್ರಮ ಇತ್ತೀಚೆಗೆ ಕಡಿಮೆ ಆಗಿದೆ. ಸೀಮಂತ ಎಂದರೆ ಗರ್ಭಿಣಿ ಆದ ಸಂದರ್ಭದಲ್ಲಿ ಸಂತೋಷ ಮನಸ್ಸಿನಲ್ಲಿ ಉಳಿಯಲು ಮಾಡುವ ಕಾರ್ಯಕ್ರಮ. ಗರ್ಭಿಣಿ ಮನಸ್ಸಿನಲ್ಲಿ ಇರುವ ಭಾವನೆಯಂತೆ ಮಕ್ಕಳು ಜನಿಸಲಿವೆ. ಅದಕ್ಕಾಗಿಯೇ ಸೀಮಂತಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಇಂದು ವೇದಿಕೆ ಮೇಲಿರುವ ಎಲ್ಲರೂ ನಿಮ್ಮ ತಂದೆ-ತಾಯಿಯರ ಸ್ಥಾನದಲ್ಲಿ ನಿಂತು ಸೀಮಂತ ನೆರವೇರಿಸುತ್ತಿದ್ದೇವೆ ಎಂದರು.

ಬೆಂಗಳೂರು ಮತ್ತೀಕೆರೆ ಶ್ರೀ ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಅನಂತರಾಮು ಮಾತನಾಡಿ, ಸೀಮಂತ ಎಂದರೆ ಒಂದು ಅವ್ಯವಸ್ಥೆಯ ಅಂತ್ಯ ಎನ್ನುವುದನ್ನು ಸೂಚಿಸುತ್ತದೆ. ಗರ್ಭಾವಸ್ಥೆ ಕಳೆದು ತಾಯಿ ಆಗುವ ಒಂದೆರಡು ತಿಂಗಳ ಮುಂಚೆ ಸಾಮಾನ್ಯವಾಗಿ 7 ಅಥವಾ 9ನೇ ತಿಂಗಳು ಸೀಮಂತ ಕಾರ್ಯಕ್ರಮ ನಡೆಸುವುದು ಸಾಮಾನ್ಯ. ಇಲ್ಲಿ ಸಾರ್ವಜನಿಕವಾಗಿ ಮಡಿಲು ತುಂಬಲಾಗುತ್ತಿದ್ದು, ಮನೆಗೆ ಮಾತ್ರ ಸೀಮಿತವಾಗಿದ್ದ ಸಂತೋಷವನ್ನು ಸಾರ್ವಜನಿಕರಿಗೂ ಹಂಚುವ ಕೆಲಸ ಆಗುತ್ತಿದೆ ಎಂದು ಶ್ಲಾಘಿಸಿದರು.

ನಿರ್ಮಲ ಜಯಚಂದ್ರ ಮಾತನಾಡಿ, ತಾಯಿ ರೂಪದಲ್ಲಿ ಹೆಣ್ಣಿಗೆ ಮಾತ್ರ ಮಾನವ ಕೋಟಿಯನ್ನು ಸಲಹುವ ಶಕ್ತಿ ದೇವರು ನೀಡಿದ್ದಾನೆ ಎಂದು ಚಪ್ಪಾಳೆ ಗಿಟ್ಟಿಸಿಕೊಂಡರು. ಅದನ್ನು ತಮ್ಮ ಮಾತಿನಲ್ಲಿ ಉಲ್ಲೇಖಿಸಿ ಮಾತನಾಡಿದ ಸಚಿವ ಜಯಚಂದ್ರ ನಾನು ಮಂತ್ರಿ ಆದ ನಂತರ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗುವುದಿಲ್ಲ. ನನ್ನ ಸ್ಥಾನದಲ್ಲಿ ಮಕ್ಕಳು ಅಥವಾ ಬೇರೆ ಯಾರಾದರೂ ಹೋಗಬೇಕಾಗುತ್ತದೆ. ಇಂದು ನನ್ನ ಪತ್ನಿ ಮಾತನಾಡಿದ್ದನ್ನು ಕೇಳಿದಾಗ ಮಂತ್ರಿ ಹೆಂಡತಿ ಆಗಿದ್ದಕ್ಕೆ ಹೆಮ್ಮೆಪಡುತ್ತೇನೆ ಎಂದರು

ಕಾರ್ಯಕ್ರಮದಲ್ಲಿ ಸಂಸದ ಚಂದ್ರಪ್ಪ, ಜಿ.ಪಂ. ಸದಸ್ಯೆ ಲಕ್ಷ್ಮಿದೇವಿ ನರಸಿಂಹಮೂರ್ತಿ, ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಎನ್.ಕೃಷ್ಣಯ್ಯ, ತಾವರೆಕೆರೆ ಗ್ರಾ.ಪಂ. ಅಧ್ಯಕ್ಷೆ ಜಾನಕಮ್ಮ, ಉಪಾಧ್ಯಕ್ಷೆ ಲಕ್ಷ್ಮಿದೇವಮ್ಮ, ಎಪಿಎಂಸಿ ಅಧ್ಯಕ್ಷ ಬಿ.ಎಸ್.ಸತ್ಯನಾರಾಯಣ, ಮಾಜಿ ಅಧ್ಯಕ್ಷ ಎಂ.ಆರ್.ಶಶಿಧರಗೌಡ, ಜಿ.ಎಸ್.ರವಿ, ಮದ್ದೇವಳ್ಳಿ ರಾಮಕೃಷ್ಣ, ಎಚ್.ಎಲ್.ರಂಗನಾಥ್, ವಾಜರಹಳ್ಳಿ ರಮೇಶ್, ಸೋರೆಕುಂಟೆ ಸತ್ಯನಾರಾಯಣ, ಷಣ್ಮುಖಪ್ಪ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಟಿ.ಕೃಷ್ಣೇಗೌಡ, ಟಿಎಚ್‍ಒ ತಿಮ್ಮರಾಜು, ಎಡಿಎಚ್ ಶಶಿಧರ, ಆರ್‍ಎಫ್‍ಒ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Comment