ಮರಕ್ಕೆ ಕಾರು ಡಿಕ್ಕಿ : ಓರ್ವನ ಸಾವು

(ನಮ್ಮ ಪ್ರತಿನಿಧಿಯಿಂದ)

ಕಲಬುರಗಿ,ಸೆ.3-ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬೇಲೂರ್ (ಜೆ) ಹತ್ತಿರ ನಡೆದಿದೆ.

ದೇವಿ ನಗರದ ಮಲ್ಲಿಕಾರ್ಜುನ ಸಂಗಣ್ಣ ಸುಣ್ಣೂರ್ ಎಂಬಾತ ಮೃತಪಟ್ಟಿದ್ದು, ವರುಣ ಮತ್ತು ಪ್ರವೀಣ ಎಂಬುವವರು ಗಾಯಗೊಂಡಿದ್ದಾರೆ.

ಇವರು ಹುಮನಾಬಾದ ರಸ್ತೆಯ ಕಮಲಾಪುರ ಬಳಿಯ ದಾಬಾದಲ್ಲಿ ಊಟ ಮುಗಿಸಿಕೊಂಡು ಮರಳಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Leave a Comment