ಮಮತಾ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನ

ಶಹರಾನ್‍ಪುರ, ಜು 11 – ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಪತನಗೊಳಿಸಲು ಸಂಘಪರಿವಾರ ಮತ್ತು ಬಿಜೆಪಿ ಸಂಚು ರೂಪಿಸಿದೆ ಎಂದು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಸಚಿವ (ಸ್ವತಂತ್ರ ಖಾತೆ) ಸಿದ್ದೀಖುಲ್ಲಾ ಚೌಧರಿ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಬ್ಯಾನರ್ಜಿ ಅವರು ಕೋಮುವಾದಿ ಶಕ್ತಿಗಳ ವಿರುದ್ಧ ಕಠಿಣ ಹೋರಾಟ ನಡೆಸುತ್ತಿದ್ದಾರೆ. ವಾತಾವರಣವನ್ನು ಕೆಡಿಸುವ ಸಂಘ ಮತ್ತು ಬಿಜೆಪಿಯ ದುಷ್ಟ ಸಂಚುಗಳನ್ನು ಸರ್ಕಾರ ವಿಫಲಗೊಳಿಸುತ್ತಿದೆ ಎಂದು ಚೌದರಿ ಹೇಳಿದ್ದಾರೆ.

ಧರ್ಮದ ಹೆಸರಿನಲ್ಲಿ ಮೋದಿ ಸರ್ಕಾರ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಮಮತಾ ಬ್ಯಾನರ್ಜಿ ನಾಯಕತ್ವಕ್ಕೆ ಪಶ್ಚಿಮ ಬಂಗಾಳ ಜನ ಬೆಂಬಲ ನೀಡಬೇಕು ಎಂದು ಜಮೀಯತುಲ್ ಉಲೆಮಾ ಹಿಂದ್‍ ರಾಜ್ಯದ ಮುಖ್ಯಸ್ಥ ಕರೆ ನೀಡಿದ್ದಾರೆ.

Leave a Comment