ಮನ್ಸಲಾಪೂರು: ಆಂಜಿನೇಯ್ಯ, ಬೆಳ್ಳಿಮೂರ್ತಿ ಪ್ರತಿಷ್ಠಾಪನೆ

ರಾಯಚೂರು.ಸೆ.09- ತಾಲೂಕಿನ ಮನ್ಸಲಾಪುರ ಗ್ರಾಮದ ಹೂವಿನ ಆಂಜಿನೇಯ್ಯ ದೇವರ ಬೆಳ್ಳಿ ಮೂರ್ತಿ ಅತಿ ವಿಂಜೃಂಭಣೆಯಿಂದ ಪ್ರತಿಷ್ಠಾಪಿಸಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಟ್ರ್ಯಾಕ್ಟರ್ ಮೇಲೆ ಹೂವಿನ ಆಂಜಿನೇಯ್ಯ ದೇವರ ಮೂರ್ತಿ ಕೂರಿಸಿ ದೇವಸ್ಥಾನದವರೆಗೆ ಮೆರವಣಿಗೆ ಮಾಡಲಾಯಿತು. ಮಹಿಳೆಯರಿಂದ ಕುಂಭ, ಕಳಸಾರೋಹಣ ಜರುಗಿತು, ನಂತರ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Comment