ಮನೆ ಮೇಲೆ ಉರುಳಿದ ಕಾರ್: ಓರ್ವ ಮೃತ್ಯು

ಕಾಸರಗೋಡು, ಸೆ.೭- ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮನೆ ಮೇಲೆ ಉರುಳಿ ಬಿದ್ದ ಪರಿಣಾಮ ಓರ್ವ ಮೃತಪಟ್ಟ ಘಟನೆ ನಿನ್ನೆ ಬೆಳಗ್ಗೆ ಕುತ್ತಿಕೋಲ್ ಸಮೀಪದ ಎರಿಂಞಪುಯದಲ್ಲಿ ನಡೆದಿದೆ.
ಮೃತಪಟ್ಟವರನ್ನು ಎರಿಂಞಪುಯದ ಇ. ಟಿ ಗೋಪಿ ಕೃಷ್ಣನ್ (೬೦ ) ಎಂದು ಗುರುತಿಸಲಾಗಿದೆ. ಎರಿಂಞಪುಯದ ಮನೆಯಿಂದ ಬೋವಿಕ್ಕಾನಕ್ಕೆ ಬರುತ್ತಿದ್ದಾಗ ಬೀಟಿಯಡ್ಕ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮನೆ ಮೇಲೆ ಬಿದ್ದಿದೆ. ಈ ವೇಳೆ ಕಾರು ಚಲಾಯಿಸುತ್ತಿದ್ದ ಗೋಪಿ ಕೃಷ್ಣನ್ ಮೃತಪಟ್ಟಿದ್ದಾರೆ. ದಾರಿ ಮಧ್ಯೆ ಕಾರು ಹತ್ತಿದ್ದ ಸಜೀನಾ ಎಂಬಾಕೆ ಗಾಯಗೊಂಡಿದ್ದಾರೆ. ಸ್ಥಳೀಯರು ಹಾಗೂ ಆದೂರು ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ತಲುಪಿಸಿದರೂ ಗೋಪಿಕೃಷ್ಣನ್ ಆಗಲೇ ಮೃತಪಟ್ಟಿದ್ದರು. ಹೃದ್ರೋಗಿಯಾಗಿದ್ದ ಗೋಪಿಕೃಷ್ಣ ರವರಿಗೆ ಕಾರು ಚಲಾಯಿಸುತ್ತಿದ್ದಾಗ ಹೃದಯಾಘಾತ ಉಂಟಾಗಿ ಈ ಅಪಘಾತ ನಡೆದಿರಬಹುದು ಎಂದು ಶಂಕಿಸಲಾಗಿದೆ. ಗೋಪಿ ಕೃಷ್ಣನ್ ಕೃಷಿಕರಾಗಿದ್ದು, ಮುಳುಗು ತಜ್ಞರಾಗಿಯೂ ಹೆಸರು ಪಡೆದಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.

Leave a Comment