ಮನೆ ಮನೆಗೆ ಹೋಗಿ ತರಕಾರಿ ಮಾರಿದ ನಟ ಪ್ರಥಮ್

ತುಮಕೂರು, ಏ. ೧- ಮಹಾಮಾರಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಜನಸಾಮಾನ್ಯರಿಗೆ ತರಕಾರಿ ಕೊಳ್ಳಲು ತೊಂದರೆಯಾಗದಂತೆ ನಟ, ‌ನಿರ್ದೇಶಕ ಪ್ರಥಮ್ ಅವರು ನಗರದಲ್ಲಿ ಜನರ ಮನೆ ಬಾಗಿಲಿಗೆ ತರಕಾರಿ ಕೊಂಡೊಯ್ದು ಮಾರಾಟ ಮಾಡಿದ್ದಾರೆ.

ಹಾಗಂತ ಅವರು ತರಕಾರಿ ಬ್ಯುಸಿನೆಸ್ ಮಾಡುತ್ತಾ ಇಲ್ಲ. ಲಾಕ್‌ಡೌನ್ ನಡುವೆ ತೊಂದರೆಗೊಳಗಾದ ಜನರಿಗೆ ಮನೆ ಬಾಗಿಲಿಗೆ ಮಾರುಕಟ್ಟೆ ದರದಲ್ಲಿ ತರಕಾರಿ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ನಟ ಭಯಂಕರ ಚಿತ್ರ ನಿರ್ಮಾಪಕ ನಿಲೇಶ್ ನೇತೃತ್ವದ ಹನೀ ತಂಡ ತರಕಾರಿ ಸರಬರಾಜು ಮಾಡುವ ಸೇವೆ ಕೈಗೊಂಡಿದೆ. ಈ ಸೇವೆಗೆ ನಟ ಪ್ರಥಮ್ ಸಹಕಾರ ಇದೆ. ಹಾಗಾಗಿ‌ ಇಂದು ತುಮಕೂರಿನ ಗಾಂಧಿನಗರ, ಶಾಂತಿಗರ, ಎಸ್.ಎಸ್. ಪುರಂ ಗಳಲ್ಲಿ ಸ್ವತಃ ಪ್ರಥಮ ಅವರು ತೂಕ ಹಾಕಿ ತರಕಾರಿ ಮಾರಾಟ ಮಾಡಿದರು.

ಹನೀ ತಂಡ ಕಳೆದ ಮೂರು ದಿನದಿಂದ 10 ವಾಹನದಲ್ಲಿ ತರಕಾರಿಯನ್ನು ಮಾರುಕಟ್ಟೆ ದರದಲ್ಲಿ ಮನೆ ಬಾಗಿಲಿಗೆ ತಲುಪಿಸುತಿದೆ. ಸರ್ಕಾರಿ ವೈದ್ಯರು, ನರ್ಸ್‌ಗಳು, ಮತ್ತು ಕಡು ಬಡವರಿಗೆ ಈ ತಂಡ ಉಚಿತವಾಗಿ ತರಕಾರಿ ನೀಡುವ ಕಾಯಕದಲ್ಲಿ ನಿರತವಾಗಿದೆ.

Leave a Comment