ಮನೆ ಮನೆಗೆ ತರಕಾರಿ ಹಂಚಿದ ಶಾಸಕರು

ಬಳ್ಳಾರಿ: ತಮ್ಮ ಅಭಿಮಾನಿಗಳು ಮತ್ತು ತಾವು ಇಲ್ಲಿವರಗೆ ಬಡ ಜನರಿಗೆ ಕೊರೋನಾ ಲಾಕ್ ಡವಬನ್ ಹಿನ್ನಲೆಯಲ್ಲಿ ಆಹಾರ ಮತಥು ಆಹಾರ ಧಾನ್ಯದ ಕುಟ್ ಗಳನ್ನು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ‌ವಿತರಿಸಿದ್ದರು.

ಇದೀಗ ಜನತೆಗೆ ಉಚಿತವಾಗಿ ಮಬೆ, ಮನೆಗೆ ತೆರಳಿ ತರಕಾರಿ‌ಹಂಚುವ‌ ಕಾರ್ಯ ಇಂದು ಆರಂಭಿಸಿದ್ದಾರೆ.
ಕೊರೋನ ಭೀತಿ ಮಧ್ಯೆ ಜನರು ದಿನಬಳಕೆ ವಸ್ತುಗಳಿಗೆ ಪರದಾಡುತ್ತಿದ್ದಾರೆ. ಅದರಲ್ಲೂ ತರಕಾರಿ ತೆಗೆದುಕೊಳ್ಳಲುಬಹೊರಗೆ ಹೋಗದ ಸ್ಥಿತಿ ಇರೋದರಿಂದ ಇಂದು 19 ನೇ ವಾರ್ಡಿನ ರಾಯಲ್‌ ಕಾಲೋನಿಯಲ್ಲಿ‌ ತಮ್ಮ‌ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ‌ ತರಕಾರಿ ಹಂಚಿದರು.

ಪ್ರತಿ ಮನೆಗೆ ಒಂದು ವಾರಕ್ಕೆ ಬೇಕಾಗೋ ಟಮೋಟೋ, ಮೆಣಸಿನ ಕಾಯಿ, ಸೊಪ್ಪು, ಬೆಂಡಿ ಕಾಯಿ, ಸೇರಿದಂತೆ ಇತರೆ ತರಕಾರಿಯನ್ನು ಹಂಚೋ ಮೂಲ ಕ ಹೊಸ ಮಾದರಿಯ ಜನಸೇವೆಯನ್ನು ಮಾಡುತ್ತಿದ್ದಾರೆ. ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ಇದರ ಸದ್ಭಳಕೆ ಮಾಡಿಕೊಳ್ಳಲು ಜನರಿಗೆ ರೆಡ್ಡಿ ಕರೆ ನೀಡಿ, ಕುರುಕ್ಷೇತ್ರದ ಯುದ್ಧವನ್ನು 18 ದಿನಗಳಲ್ಲಿ ಗೆಲ್ಲಲಾಯ್ತು. ಕೊರೋನ ಯುದ್ಧ ವನ್ನು 21 ದಿನದಲ್ಲಿ ಗೆಲ್ಲೋಣ ಎಂದು ಈ ಸಂದರ್ಭದಲ್ಲಿ ಹೇಳಿದರು.

Leave a Comment