ಮನೆ ತೆರವು: ನ್ಯಾಯಾಲಯದಲ್ಲಿ ಅರ್ಜಿದಾರರಿಗೆ ಜಯ

ರಾಯಚೂರು.ಸೆ.14- ನಗರದ ನಿಜಲಿಂಗಪ್ಪ ಕಾಲೋನಿಯ ಸರ್ವೇ ನಂ. 107 ವಿಸ್ತೀರ್ಣವುಳ್ಳ 10 ಎಕರೆ, 10 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿ ಮನೆಗಳ ತೆರವುಗೊಳಿಸಿದ ಪ್ರಕರಣ ನ್ಯಾಯಾಲಯದಲ್ಲಿ ಅರ್ಜಿದಾರಿಗೆ ಜಯ ದೊರೆತಿದೆ ಎಂದು ವೀರಗುಂಡಯ್ಯ ಸ್ವಾಮಿ ತಿಳಿಸಿದ್ದಾರೆ.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಮಾಹಿತಿ ಹಕ್ಕು ಅಧಿನಿಯಮದಡಿ ಮನೆಗಳ ತೆರವಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಲಾಗಿತ್ತು. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿ, ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿ ಕಾನೂನು ಹೋರಾಟ ನಡೆಸಲಾಗಿತ್ತು, ನಿವೃತ್ತ ಉಪ ನಿರ್ದೇಶಕರಾದ ಅಮೃತ್ ಬೆಟ್ಟದ್ ಅವರು, 2009 ನವೆಂಬರ್ 9 ರಂದು ಗುಲ್ಬರ್ಗಾ ಪ್ರಾದೇಶಿಕ ಆಯುಕ್ತರಿಗೆ ಬರೆದ ಪತ್ರದಲ್ಲಿ ಉಚ್ಚ ನ್ಯಾಯಾಲಯದ ಪ್ರತಿ ಲಗತ್ತಿಸಲಾಗಿದೆ ಎಂದು ತಪ್ಪಾಗಿ ನಮೂದಿಸಿದ್ದಾರೆ. ‌
ಸದರಿ ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ವೀರಲಿಂಗಯ್ಯ ಮತ್ತು ವೀರಗುಂಡಯ್ಯ ಸ್ವಾಮಿ ಹಿರೇಮಠ ಅವರು ಕೋರಿದ ಮನವಿಗೆ ಸಂಬಂಧಿಸಿ, ಕಛೇರಿಯ ಕಡತ ಪರಿಶೀಲಿಸಿ, ಶಿಕ್ಷಣ ಇಲಾಖೆಯು ಜಮೀನನ್ನು ತೆರವುಗೊಳಿಸಿರುವ ಬಗ್ಗೆ ಉಚ್ಚ ನ್ಯಾಯಲಯದ ಆದೇಶ ಪ್ರತಿಗಳು ಅಥವಾ ದಾಖಲೆ ಇರುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಶಿಕ್ಷಣ ಇಲಾಖೆ ಅಧಿಕಾರಿಗಳು ತಮ್ಮ ಮನ ಬಂದಂತೆ ಸುಳ್ಳು ದಾಖಲೆ ಸೃಷ್ಠಿಸಿ ಮನೆಗಳನ್ನು ತೆರವುಗೊಳಿಸಿದ್ದಾರೆ. ಇಲಾಖೆ ಅಧಿಕಾರಿಗಳು ಕೆಲವರ ಕಪಿಮುಷ್ಠಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ದೂರಿದರು. ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ಸಲ್ಲಿಸುವ ಮೂಲಕ ಅಧಿಕಾರಿಗಳ ಕಾರ್ಯಕ್ಷಮ್ಯತೆ ಎತ್ತಿ ತೋರಿಸುತ್ತಿದೆ. ಮುಂಬರುವ ದಿನಗಳಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಾನೂನು ಹೋರಾಟ ತೀವ್ರಗೊಳಿಸುವುದಾಗಿ ತಿಳಿಸಿದರು. ಕೆಇಬಿ ಶಾಲೆಯ ಮುಖ್ಯ ಗುರಗಳಾದ ಜಿ.ತಿಮ್ಮಣ್ಣ ಅವರು ಅನಧಿಕೃತ ಮು.ಗು. ಕಾರ್ಯ ನಿರ್ವಹಿಸುತ್ತಿದ್ದಾರೆ. ಡಿಡಿಪಿಐ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ತಿಮ್ಮಣ್ಣನವರು ಆಡಿದ್ದೇ ಆಟ ಎಂಬ ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ಆರೋಪಿಸಿದರು.
ಮಹಾಂತ ಗೌಡ, ಹನುಮಂತು ವಕೀಲರು, ಅನ್ನಪೂರ್ಣಮ್ಮ, ಅಮರೇಶ ಸ್ವಾಮಿ, ವಿಜಯ ಕುಮಾರ್ ಉಪಸ್ಥಿತರಿದ್ದರು.

Leave a Comment