ಮನೆಯಲ್ಲಿ ಸೌಟ್ ಹಿಡಿದ ಕ್ರಿಕೆಟಿಗ ಮಾಯಾಂಕ್

 

ಬೆಂಗಳೂರು, ಏ ೩- ಲಾಕ್‌ಡೌನ್ ವೇಳೆ ಗೃಹಬಂಧನದಲ್ಲಿರುವ ಕನ್ನಡದ ಕ್ರಿಕೆಟಿಗ ಮಾಯಾಂಕ್ ಅಗರ್ವಾಲ್ ಅವರು ಅಡುಗೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಕೊರೊನಾ ಸೋಂಕು ತಡೆಯಲು ಸ್ಟಾರ್ ಆಟಗಾರರು ಒಂದಲ್ಲ ಒಂದು ರೀತಿ ಮನೆಯಲ್ಲಿ ತೊಡಗಿಸಿಕೊಂಡಿದ್ದು, ಆ ಪೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಟೈಮ್ ಪಾಸ್ ಮಾಡುತ್ತಿದ್ದಾರೆ. ಈ ಹಿಂದೆ

ಕ್ರಿಕೆಟಿಗ ಮಾಯಾಂಕ್ ಅಗರ್ವಾಲ್ ಕೂಡ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಯ ಎದುರಿನ ಗಾರ್ಡನ್ ಆವರಣವನ್ನೇ ಜಿಮ್ ಮಾಡಿಕೊಂಡು ವ್ಯಾಯಾಮ ಮಾಡಿದ್ದರು. ಇದೀಗ ಅವರು ಮನೆಯ ಅಡುಗೆ ಮನೆ ಪ್ರವೇಶಿಸಿ ರುಚಿಯಾದ ಅಡುಗೆ ಮಾಡುವ ಮೂಲಕ ತಮ್ಮ ಪ್ರತಿಭೆ ಹೊರಹಾಕಿದ್ದಾರೆ.

ತಾವು ಅಡುಗೆ ಮಾಡುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಯಾಂಕ್ ಅಗರ್ವಾಲ್ ಪ್ರಕಟಿಸಿದ್ದು, ತಾನು ಕ್ರಿಕೆಟ್ ಆಡುವುದಕ್ಕೂ ಸೈ, ಸಮಯ ಬಂದರೆ ಸೌಟು ಹಿಡಿಯುವುದಕ್ಕೂ ಸಿದ್ಧ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಟೀಂ ಇಂಡಿಯಾ ಟೆಸ್ಟ್ ತಂಡದ ಆರಂಭಿಕ ಆಟಗಾರನಾಗಿರುವ ಮಯಾಂಕ್ ಅಗರ್ವಾಲ್ ಕಳೆದ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಆದರೆ ವಿಫಲರಾಗಿದ್ದರು.

ಐಪಿಎಲ್ ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರವಾಗಿ ಆಡುವ ಮಯಾಂಕ್ ಸದ್ಯ ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಮನೆಯಲ್ಲಿ ಸುಮನ್ನೇ ಕುಳಿತುಕೊಳ್ಳದೇ ತರಾವೇರಿ ಅಡುಗೆ ಮಾಡಿ ಮಾಯಾಂಕ್ ಸೈ ಎನಿಸಿಕೊಂಡಿದ್ದಾರೆ.

Leave a Comment