ಮನೆಯಲ್ಲಿ ಇರುತ್ತೇವೆ, ಹೆಂಗೆ ನಾವು….. ಸಿನಿಮಾ ಶೈಲಿಯಲ್ಲಿ ಜಾಗೃತಿ ಮೂಡಿಸಿದ ಪೋಲಿಸರು

ಬೆಂಗಳೂರು, ಏ ೧೧- ಇತ್ತೀಚೆಗೆ ಚಂದನವನದಲ್ಲಿ ಪ್ರೇಕ್ಷಕರ ಮನಗೆದ್ದ ಲವ್ ಮಾಕ್ ಟೈಲ್ ಸಿನಿಮಾದ ಪಾತ್ರಧಾರಿ ಆದಿತಿ ಚಿತ್ರದಲ್ಲಿ ಹೇಳಿದ್ದ ‘ಹೆಂಗೆ ನಾವು’ ಎಂಬ ಫೇಮಸ್ ಡೈಲಾಗ್ ಸಕತ್ ಇಷ್ಟವಾಗಿತ್ತು. ಈಗ ಅದೇ ಡೈಲಾಗ್‌ನ್ನು ಬಳಸಿಕೊಂಡು ಪೋಲಿಸರು ಲಾಕ್‌ಡೌನ್ ಜಾಗೃತಿ ಮೂಡಿಸುತ್ತಿರುವ ಪರಿ ಜಾಲತಾಣದಲ್ಲಿ ಫುಲ್ ಸೌಂಡ್ ಮಾಡಿದೆ.

ಹೌದು ಇತ್ತೀಚೆಗೆ ತೆರೆಕಂಡ ಲವ್ ಮಾಕ್ ಟೈಲ್ ಚಿತ್ರವನ್ನು ಜನರು ಚಿತ್ರಮಂದಿರದಲ್ಲಿ ಹಾಗೂ ಆನ್‌ಲೈನ್‌ನಲ್ಲಿ ಮುಗಿಬಿದ್ದ ನೋಡಿದ ಚಿತ್ರವಾಗಿದೆ. ಅಲ್ಲದೇ ಚಿತ್ರದಲ್ಲಿ ಆದಿತಿ ಚಟಪಟ ಅಂತ ಮಾತನಾಡುವ ಶೈಲಿಗೆ ಎಲ್ಲಾರು ಕ್ಲೀನ್ ಬೋಲ್ಡ್ ಆಗಿದ್ದರು. ಅದೇ ಶೈಲಿಯಲ್ಲಿ ಪೋಲಿಸರು ಜನರನ್ನು ಆಕರ್ಷಿಸಲು ಮುಂದಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಆದಿತಿ ಫೋಟೋ ಹಾಕಿ ಕೊರೋನಾವನ್ನು ಹೊಡೆದೋಡಿಸಲು ನಾವು ಮನೆಯಲ್ಲೇ ಇರುತ್ತೇವೆ. ಹೆಂಗೆ ನಾವು?’ ಎಂದು ಅಡಿಬರಹ ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ.

ಜನರಿಗೂ ಈ ಹೊಸ ಪರಿಯ ಜಾಗೃತಿ ಇಷ್ಟವಾಗಿದೆ. ಸಿನಿಮಾ ಡೈಲಾಗ್, ಹಾಡುಗಳು ಜನರ ಮೇಲೆ ಹೆಚ್ಚು ಪ್ರಭಾವ ಬೀರುತ್ತೆ. ಜನರು ಸಿನಿಮಾದ ಉದ್ದುದ್ದ ಡೈಲಾಗ್, ಹಾಡುಗಳನ್ನು ಕೇಳಿ ಕಂಠಪಾಠ ಮಾಡಿ ಹೇಳುತ್ತಿರುತ್ತಾರೆ. ಹಾಗಾಗಿ ಅದನ್ನೆ ಅಸ್ತ್ರವಾಗಿ ಬಳಸಿಕೊಂಡು ಕೊರೊನಾ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ ಬೆಂಗಳೂರು ಪೊಲೀಸರು.

ಲವ್ ಮಾಕ್ಟೇಲ್ ಸಿನಿಮಾದ ಈ ಡೈಲಾಗ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಲ್ಲದೇ ಚಿತ್ರದ ಡೈಲಾಗ್ ಗಳು ಸಹ ಸಖತ್ ಟ್ರೆಂಡ್ ಆಗಿವೆ. ಅದರಲ್ಲೂ ಈ ಸಿನಿಮಾ ಅದಿತಿ ಪಾತ್ರ ಮಾಡಿದ ನಟಿ ರಚನಾ ಹೇಳುವ “ಹೆಂಗೆ ನಾವು?” ಡೈಲಾಗ್ ಸಖತ್ ಫೇಮಸ್. ಟ್ರೋಲ್ ಪೇಜ್ ಗಳಲ್ಲಿ ರಾರಾಜಿಸುತ್ತಿರುವ ಈ ಡೈಲಾಗ್ ಈಗ ಕೊರೊನಾ ಜಾಗೃತಿಗೂ ಬಳಕೆಯಾಗುತ್ತಿದೆ. ರಚನಾ ಫೋಟೋ ಜೊತೆಗೆ ಬೆಂಗಳೂರು ಪೊಲೀಸರು ಲಾಕ್ ಡೌನ್ ಕ್ರಮಗಳನ್ನು ಶ್ರದ್ಧೆಯಿಂದ ಅನುಸರಿಸುತ್ತಿರುವ ಎಲ್ಲಾ ಬೆಂಗಳೂರಿಗರಿಗೆ ಚಪ್ಪಾಳೆ, ಸಖತ್ ನೀವು ಎಂದು ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ. ಈ ಟ್ವೀಟ್ ಈಗ ವೈರಲ್ ಆಗುತ್ತಿದೆ.

Leave a Comment