ಮನೆಯಲ್ಲಿಯೇ ಗುಡ್ ಫ್ರೈಡೆ ಪ್ರಾರ್ಥನೆ ಅರ್ಚ್ ಬಿಷಪ್ ಮನವಿ

ಬೆಂಗಳೂರು,ಏ.೭-ಮಹಾಮಾರಿ ಕೊರೊನಾ ಸೋಂಕು ಹರಡದಂತೆ ಜಾರಿಯಲ್ಲಿರುವ ಲಾಕ್‌ಡೌನ್ ಹಿನ್ನಲೆಯಲ್ಲಿ ಇದೇ ಏ.೧೦ ರಂದು ಗುಡ್ ಫ್ರೈಡೆ(ಶುಭ ಶುಕ್ರವಾರ)ಯನ್ನು ಮನೆಯಲ್ಲಿಯೇ ಆಚರಿಸುವಂತೆ ಅರ್ಚ್ ಬಿಷಪ್ ಡಾ.ಪೀಟರ್ ಮಾಚಾಡೋ ಅವರು ಕ್ರೈಸ್ಥ ಬಾಂಧವರಲ್ಲಿ ಮನವಿ ಮಾಡಿದ್ದಾರೆ.
ಲಾಕ್‌ಡೌನ್ ಜಾರಿಗೆ ಬಂದ ದಿನದಿಂದ ಯಾವ ಚರ್ಚ್‌ಗಳ ಬಾಗಿಲು ತೆಗೆದಿಲ್ಲ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯವಾಗಿರುವುದರಿಂದ ಗುಡ್ ಫ್ರೈಡ್ ಯಂದು ಕೂಡ ಯಾವ ಚರ್ಚ್‌ಗಳ ಬಾಗಿಲು ತೆಗೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗುಡ್ ಫ್ರೈಡ್ ದಿನದಂದು ಯಾರೂ ಚರ್ಚ್‌ಗೆ ಬರುವುದು ಬೇಡ ಹಬ್ಬ ಆಚರಣೆ ಮಾಡುವ ವಿಧಾನವನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಲಿದ್ದು ಅದನ್ನು ವೀಕ್ಷಿಸಿ ಮನೆಯಲ್ಲಿಯೇ ಮನೆ ಮಂದಿ ಸೇರಿ ಗುಡ್ ಫ್ರೈಡ್ ಆಚರಿಸಿ ಪ್ರಾರ್ಥನೆ ಸಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ.
ಗುಡ್ ಫ್ರೈಡೆ ಇರುವ ಹಿನ್ನೆಲೆಯಲ್ಲಿ ಇಂದು ಜಯಮಹಲ್‌ನ ನಿವಾಸದಲ್ಲಿ ಅರ್ಚ್ ಬಿಷಪ್ ಡಾ.ಪೀಟರ್ ಮಾಚಾಡೋ ಅವರನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರು ಭೇಟಿ ಮಾಡಿ ಚರ್ಚ್‌ನಲ್ಲಿ ಜನತೆ ಸೇರದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.
ಗುಡ್ ಫ್ರೈ ದಿನದಂತೆ ಚರ್ಚ್ ಬಾಗಿಲು ತೆರೆಯದಂತೆ ಮನವಿ ಮಾಡಿದ್ದು ಆಯುಕ್ತರ ಸಲಹೆಗೆ ಆರ್ಚ್ ಬಿಷಪ್ ಸಂಪೂರ್ಣ ಒಪ್ಪಿಗೆ ನೀಡಿದ್ದು, ಅಂದು ನಗರ ಸೇರಿ ರಾಜ್ಯದ ಯಾವುದೇ ಭಾಗದ ಚರ್ಚ್ ಬಾಗಿಲು ತೆರೆಯುವುದಿಲ್ಲ ಈಗಾಗಲೇ ಕ್ರೈಸ್ಥ ಬಾಂಧವರಲ್ಲಿ ಮನವಿ ಮನೆಯಲ್ಲಿಯೇ ಹಬ್ಬ ಆಚರಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಅರ್ಚ್ ಬಿಷಪ್ ಡಾ.ಪೀಟರ್ ಮಾಚಾಡೋ ಅವರಿಗೆ ಆಯುಕ್ತ ಭಾಸ್ಕರ್ ರಾವ್ ಹಾಗೂ ಡಿಸಿಪಿ ಶರಣಪ್ಪ ಅಭಿನಂದನೆ ಸಲ್ಲಿಸಿದರು.

Leave a Comment