ಮನೆಮನೆಗೆ ಅಕ್ಕಿ ವಿತರಣೆಗೆ ಶಾಸಕರಿಂದ ಚಾಲನೆ

ನಂಜನಗೂಡು. ಏ.6- ಟಿಎಪಿಸಿಎಂಎಸ್ ಕಚೇರಿಯಲ್ಲಿ ನಡೆದ ನ್ಯಾಯಬೆಲೆ ಅಂಗಡಿ ಅವರ ಜೊತೆ ಚರ್ಚಿಸಿ, ನಂತರ ಮಾತನಾಡಿದ ಶಾಸಕ ಹರ್ಷವರ್ಧನ್ ಸಾರ್ವಜನಿಕರಿಗೆ ನ್ಯಾಯಬೆಲೆ ಅಂಗಡಿಗೆ ಹೋಗಲು ತೊಂದರೆಯಾಗುತ್ತದೆ. ಕಾರಣ ಕೋ ರೋನವೈರಸ್ ನಿಂದ ಲಾಕ್ ಡೌನ್ ಆಗಿದೆ ಇದರಿಂದ ರಸ್ತೆಯಲ್ಲ ಪೊಲೀಸ್ ಇರುವುದರಿಂದ ಮಹಿಳೆಯರು ಹೊರಬರಲು ಹೆದರುತ್ತಿದ್ದಾರೆ. ಜೊತೆಗೆ ಬರಬಾರದೆಂದು ಆದೇಶವು ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಕಿ ಮತ್ತು ಗೋಧಿಯನ್ನು ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗೆ ಬರಬಾರದು ರಾಜ್ಯ ಸರ್ಕಾರ ಅನುಮತಿಯಂತೆ ನ್ಯಾಯಬೆಲೆ ಅಂಗಡಿಯವರು ತಮ್ಮ ಮನೆಯ ಮುಂದೆ ಬಂದು ಅಕ್ಕಿ ಮತ್ತು ಗೋಧಿಯನ್ನು ತಲುಪಿಸುತ್ತಾರೆ. ನೀವು ಕೂಡ ಸಹಕರಿಸಬೇಕೆಂದು ಮನವಿ ಮಾಡಿದರು.
ಇದು ರಾಜ್ಯ ಸರ್ಕಾರದ ಪ್ರತಿ ಕುಟುಂಬವು ಕೂಡ ಹಸಿವಿನಿಂದ ಇರಬಾರದು ಪ್ರತಿಯೊಬ್ಬರು ಕೂಡ ಊಟ ಮಾಡಬೇಕು. ಆದ್ದರಿಂದ ಮನೆಮನೆಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ ಇದರಿಂದ ರಸ್ತೆಗೆ ಬಾರದಂತೆ ತಡೆಯಬಹುದು ಇದರ ಜೊತೆಗೆ ಕೇಂದ್ರ ಸರ್ಕಾರ ಕೊಡುವುದನ್ನು ನಿರೀಕ್ಷೆಯಲ್ಲಿದ್ದೇನೆ. ಅದನ್ನು ಕೂಡ ತಲುಪಿಸಲು ವ್ಯವಸ್ಥೆ ಮಾಡಲಾಗುತ್ತದೆ. ನಾವು ನೀವು ಎಲ್ಲರೂ ಕೈಜೋಡಿಸಿ ಮನೆಯಲ್ಲೇ ಇದ್ದು ಕೋ ರೋನವೈರಸ್ ನಿಂದ ದೂರ ಇರೋಣ ಎಂದರು ಇದರ ಜೊತೆಗೆ ನಗರದ ಲಿಂಗಣ್ಣ ಛತ್ರ ದಲ್ಲಿ ನಿರಾಶ್ರಿತರಿಗೆ ಸೀರೆ ಚಾಪೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಹರ್ಷ ವರ್ಧನ್ ತಾಸಿಲ್ದಾರ್ ಮಹೇಶ್ ನಗರಸಭೆ ಆಯುಕ್ತ ಕರಿಬಸವಯ್ಯ ಟಿಎಪಿಸಿಎಂಎಸ್ ಅಧ್ಯಕ್ಷ ಕುರಟ್ಟಿ ಮಹೇಶ್ ಸೇರಿದಂತೆ ಇತರರು ಇದ್ದರು

Leave a Comment