ಮನೆಗೆ ಬೆಂಕಿ ತಗುಲಿ 10 ಲಕ್ಷ ರೂ.ಮೌಲ್ಯದ ಹಾನಿ

(ನಮ್ಮ ಪ್ರತಿನಿಧಿಯಿಂದ)

ಕಲಬುರಗಿ,ಸೆ.7-ಮನೆಗೆ ಬೆಂಕಿ ಬಿದ್ದು ಸುಮಾರು 10 ಲಕ್ಷ ರೂಪಾಯಿ ಹಾನಿ ಸಂಭವಿಸಿದ ಘಟನೆ ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದಲ್ಲಿ ನಡೆದಿದೆ.

ಸಿದ್ರಾಮ ವಿಠ್ಠಲ ಸಿಂಗೆ ಎಂಬುವವರ ಫತ್ರಾಸ್ ಶೆಡ್ಡಿನ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿ ಮನೆಯಲ್ಲಿದ್ದ ಹಿಟ್ಟಿನ ಗಿರಣಿ, ಖಾರಾ ಕುಟ್ಟುವ ಮಶೀನ್, ಶಾವಗಿ ಮಶೀನ್, 10 ತೊಲೆ ಬಂಗಾರದ ಆಭರಣ, 2 ಲಕ್ಷ ರೂಪಾಯಿ ನಗದು ಸುಟ್ಟು ಹೋಗಿ 10 ಲಕ್ಷ ರೂಪಾಯಿ ಹಾನಿ ಸಂಭವಿಸಿದೆ.

ಫತ್ರಾಸ್ ಶೆಡ್ಡಿನಲ್ಲಿ ಹಿಟ್ಟಿನ ಗಿರಣಿ, ಖಾರಾ ಕುಟ್ಟುವ ಮಶೀನ್ ಮತ್ತು ಶಾವಗಿ ಮಶೀನ್ ಅಳವಡಿಸಿ ಈ ಕುಟುಂಬ ಇದರಿಂದಲೇ ಉಪ ಜೀವನ ಸಾಗಿಸುತ್ತಲಿತ್ತು.

ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಿಸಿದ್ದರು ಬೆಂಕಿ ನಂದಿರಲಿಲ್ಲ. ಕೊನೆಗೆ ಅಗ್ನಿಶಾಮಕದಳದವರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವುದರ ಮೂಲಕ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Leave a Comment